MS Dhoni: ಏಯ್ ನಿನ್ನ..: ಔಟಾದಾಗ ಧೋನಿಗೆ ಬೈದ ಲೇಡಿ ಸಿಎಸ್‌ಕೆ ಫ್ಯಾನ್, ವಿಡಿಯೋ ವೈರಲ್
MS Dhoni Out, RR vs CSK: ಕೊನೆಯ ಓವರ್‌ನಲ್ಲಿ ಚೆನ್ನೈ ತಂಡಕ್ಕೆ 20 ರನ್‌ಗಳು ಬೇಕಾಗಿದ್ದವು ಮತ್ತು ಧೋನಿ ಸ್ಟ್ರೈಕ್‌ನಲ್ಲಿದ್ದರು. ಧೋನಿ ಕ್ಲಾಸಿಕ್ ಫಿನಿಶಿಂಗ್ ನೀಡುತ್ತಾನೆ ಎಂದೇ ಎಲ್ಲರ ಅಂದುಕೊಂಡಿದ್ದರು. ಆದರೆ ಸಂದೀಪ್ ಶರ್ಮಾ ಬೌಲಿಂಗ್ನಲ್ಲಿ ಔಟ್ ಆದರು. ಧೋನಿ ಔಟ್ ಆದ ತಕ್ಷಣ ಯುವ ಮಹಿಳಾ ಅಭಿಮಾನಿಯೊಬ್ಬರು ಕೋಪಗೊಂಡ ವಿಡಿಯೋ ವೈರಲ್ ಆಗಿದೆ

(ಬೆಂಗಳೂರು ಮಾ, 31): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಮಾರ್ಚ್ 30 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (RR vs CSK) ನಡುವಿನ ಪಂದ್ಯದ ವೇಳೆ ಎಂಎಸ್ ಧೋನಿ ಔಟಾದ ವೇಳೆ ಮಹಿಳೆಯೊಬ್ಬರು ನೀಡಿದ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದ ಸಮಯದಲ್ಲಿ, 15.5 ಓವರ್‌ನಲ್ಲಿ ವನಿಂದು ಹಸರಂಗ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಔಟ್ ಆದ ನಂತರ ಎಂಎಸ್ ಧೋನಿ 7 ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದರು. ಎಂಎಸ್ಡಿ ಕಣಕ್ಕೆ ಉಳಿದ ಕಾರಣ ಪ್ರೇಕ್ಷಕರು ಸಾಕಷ್ಟು ಉತ್ಸುಕರಾಗಿದ್ದರು, ಆದರೆ ಇದೆಲ್ಲ ವ್ಯರ್ಥವಾಯಿತು.
ಕೊನೆಯ ಓವರ್‌ನಲ್ಲಿ ಚೆನ್ನೈ ತಂಡಕ್ಕೆ 20 ರನ್‌ಗಳು ಬೇಕಾಗಿದ್ದವು ಮತ್ತು ಧೋನಿ ಸ್ಟ್ರೈಕ್‌ನಲ್ಲಿದ್ದರು. ಧೋನಿ ಕ್ಲಾಸಿಕ್ ಫಿನಿಶಿಂಗ್ ನೀಡುತ್ತಾನೆ ಎಂದೇ ಎಲ್ಲರ ಅಂದುಕೊಂಡಿದ್ದರು. ಆದರೆ ಸಂದೀಪ್ ಶರ್ಮಾ ಅವರ ಲೋ ವೈಡ್ ಫುಲ್ ಟಾಸ್‌ನಲ್ಲಿ ಧೋನಿ ಲಾಂಗ್-ಆನ್ ಕಡೆಗೆ ದೊಡ್ಡ ಶಾಟ್ ಹೊಡೆಯಲು ಹೋದರು. ಈ ಸಂದರ್ಭ ಚೆಂಡು ಬ್ಯಾಟ್ಗೆ ಸರಿಯಾಗಿ ಕನೆಕ್ಟ್ ಆಗದ ಪರಿಣಾಮ, ಶಿಮ್ರಾನ್ ಹೆಟ್ಮೆಯರ್ ಡೈವ್ ಮೂಲಕ ಕ್ಯಾಚ್ ಪಡೆದರು. ಧೋನಿ ಔಟಾದಾಗ ಇಡೀ ಕ್ರೀಡಾಂಗಣ ಸ್ತಬ್ಧವಾಯಿತು. ಈ ಪೈಕಿ ಸಿಎಸ್‌ಕೆ ಅಭಿಮಾನಿಯೊಬ್ಬಳ ಪ್ರತಿಕ್ರಿಯೆ ಟಿವಿ ಪರದೆಯ ಮೇಲೆ ಕಾಣಿಸಿತು.
A fan reaction when Dhoni got out #CSKvsRRpic.twitter.com/7upKiliFq5
— Sunil the Cricketer (@1sInto2s) March 30, 2025
A fan reaction when Dhoni got out 😅😅#CSKvRR pic.twitter.com/PZXtxI1vfm
— m (@mvlstx) March 31, 2025
That girl’s reaction when Dhoni got out. 😭😭 pic.twitter.com/9WgFEhVDty
— b. 🥤 (@Bikis18__) March 31, 2025
A fan reaction when Dhoni got out 🥲#CSKvsRR #IPL2025 #Dhoni pic.twitter.com/EBbY0fCwcW
— prakash pathak (@pathakyr1) March 31, 2025
ಧೋನಿ ಔಟ್ ಆದ ತಕ್ಷಣ ಯುವ ಮಹಿಳಾ ಅಭಿಮಾನಿಯೊಬ್ಬರು ಕೋಪದಿಂದ ಕೆರಳಿದ್ದನ್ನು ಕ್ಯಾಮೆರಾ ಸೆರೆಹಿಡಿದಿದೆ. ಧೋನಿಯ ಹೊಡೆತದಿಂದ ಅವರು ಸಂತೋಷವಾಗಿಲ್ಲ. ತನ್ನ ಕೈಯನ್ನು ಚಾಚಿ ಏಯ್.. ಎಂದು ಏನೋ ಹೇಳಲು ಬಯಸಿದಳು, ಆದರೆ ನಂತರ ಕಂಟ್ರೋಲ್ ಮಾಡಿಕೊಂಡು ಮೌನವಾದಳು. ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.
Riyan Parag: ಅಂದು ಈ ಪುಟ್ಟ ಬಾಲಕ ಧೋನಿ ಅಭಿಮಾನಿ: ಇಂದು ಎಂಎಸ್ಡಿ ಎದುರೇ ಗೆದ್ದು ಬೀಗಿದ ಆಟಗಾರ
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ ಆರು ರನ್‌ಗಳಿಂದ ಪಂದ್ಯವನ್ನು ಸೋತಿತು. ಜೇಮೀ ಓವರ್ಟನ್ ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸಿದರು, ಆದರೆ ಅದು ಗೆಲ್ಲಲು ಸಾಕಾಗಲಿಲ್ಲ. ರಾಜಸ್ಥಾನದ 182 ರನ್‌ಗಳಿಗೆ ಉತ್ತರವಾಗಿ ಚೆನ್ನೈ 176 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಈ ಸೋಲಿನೊಂದಿಗೆ, ಸಿಎಸ್‌ಕೆ ಸತತ ಎರಡನೇ ಸೋಲನ್ನು ಎದುರಿಸಬೇಕಾಯಿತು. ರುತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು ಏಪ್ರಿಲ್ 5 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ