AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ruturaj Gaikwad: ಧೋನಿ ಬಗ್ಗೆ ಒಂದೂ ಮಾತನಾಡದೆ ಸೋಲಿಗೆ ರುತುರಾಜ್ ದೂರಿದ್ದು ಯಾರನ್ನ ಗೊತ್ತೇ?

RR vs CSK, IPL 2025: ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ ಮಾರ್ಚ್ 30, 2025 ರಂದು ಐಪಿಎಲ್ 2025 ರ ರೋಮಾಂಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿತು. ಈ ಮೂಲಕ ಸಿಎಸ್ಕೆ ಸತತ ಎರಡನೇ ಸೋಲು ಕಂಡಿದೆ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಸಿಎಸ್ಕೆ ನಾಯಕ ರುತುತರಾಜ್ ಗಾಯಕ್ವಾಡ್ ಸೋಲಿಗೆ ಕಾರಣ ತಿಳಿಸಿದ್ದಾರೆ.

Ruturaj Gaikwad: ಧೋನಿ ಬಗ್ಗೆ ಒಂದೂ ಮಾತನಾಡದೆ ಸೋಲಿಗೆ ರುತುರಾಜ್ ದೂರಿದ್ದು ಯಾರನ್ನ ಗೊತ್ತೇ?
Ruturaj Gaikwad Post Match Presentation
Vinay Bhat
|

Updated on: Mar 31, 2025 | 8:23 AM

Share

(ಬೆಂಗಳೂರು ಮಾ, 31): ಐಪಿಎಲ್ 2025 ರ 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ (RR vs CSK) ವಿರುದ್ಧ 6 ರನ್‌ಗಳಿಂದ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 182 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಆದರೆ ಈ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ಸಿಎಸ್‌ಕೆ ತಂಡವು ಕುಸಿದು 6 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 176 ರನ್‌ಗಳನ್ನು ಗಳಿಸಲಷ್ಟೆ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಸಿಎಸ್​ಕೆ ನಾಯಕ ರುತುತರಾಜ್ ಗಾಯಕ್ವಾಡ್ ಸೋಲಿಗೆ ಕಾರಣ ತಿಳಿಸಿದ್ದಾರೆ.

ಪವರ್ ಪ್ಲೇ ಪಂದ್ಯದ ಪ್ರಮುಖ ಕ್ಷಣ. ನಿತೀಶ್ ರಾಣ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅವರು ಸ್ಕ್ವೇರ್ ಹಿಂದೆ ಹೋಗುತ್ತಿದ್ದಾರೆಂದು ತಿಳಿದು ನಾವು ಅಂದುಕೊಂಡಿರಲಿಲ್ಲ, ನಾವು ಅವರನ್ನು ವಿಕೆಟ್ ಮುಂದೆ ಆಡುವಂತೆ ಮಾಡಬೇಕಾಗಿತ್ತು. ಮಿಸ್‌ಫೀಲ್ಡ್‌ಗಳ ಮೂಲಕವೂ 8-10 ರನ್‌ಗಳು ಬಂದವು. ನಾವು ಈ ವಿಚಾರದಲ್ಲಿ ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. 180 ರನ್ ಚೇಸಿಂಗ್ ಆಗಿತ್ತು. ನೀವು ಚೆನ್ನಾಗಿ ಆಡಿದರೆ ಇದು ಇನ್ನೂ ಉತ್ತಮ ವಿಕೆಟ್ ಆಗಿತ್ತು ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ರುತುರಾಜ್, ಇನ್ನಿಂಗ್ಸ್ ಬ್ರೇಕ್‌ನಲ್ಲಿ ನಾನು ನಿಜವಾಗಿಯೂ ಸಂತೋಷಪಟ್ಟೆ. ಅವರು 210 ರನ್‌ಗಳನ್ನು ಹೊಡೆಯುವಂತೆ ಉತ್ತಮವಾಗಿ ಆಡುತ್ತಿದ್ದರು, ಆದರೆ 180 ರನ್ ಚೇಸಿಂಗ್ ಆಗಿತ್ತು ಎಂದು ಹೇಳಿದರು. ಇದೇವೇಳೆ ತಾನು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದರ ಬಗ್ಗೆ ಮಾತಾಡಿದ ಅವರು, ಈ ಹಿಂದೆ ಅಜಿಂಕ್ಯಾ ರಹಾನೆ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ರಾಯುಡು ಮಧ್ಯಮ ಓವರ್‌ಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ನಾನು ಮಧ್ಯಮ ಓವರ್‌ಗಳನ್ನು ನೋಡಿಕೊಳ್ಳಲು ಸ್ವಲ್ಪ ತಡವಾಗಿ ಬಂದರೆ ಉತ್ತಮ ಎಂದು ನಾವು ಭಾವಿಸಿದ್ದೇವೆ ಮತ್ತು ತ್ರಿಪಾಠಿ ಮೇಲ್ಭಾಗದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬಹುದು ಎಂದರು.

ಇದನ್ನೂ ಓದಿ
Image
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
Image
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
Image
ತವರು ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದ ಎಸ್​ಆರ್​ಹೆಚ್
Image
ವೈಟ್ ಬಾಲ್ ಸರಣಿಗಾಗಿ ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ

RR vs CSK Highlights, IPL 2025: ರಾಜಸ್ಥಾನ್​ಗೆ ಮೊದಲ ಗೆಲುವು; ಚೆನ್ನೈಗೆ 2ನೇ ಸೋಲು

ಇನ್ನು ಸೋಲಿಗೆ ಕಾರಣ ವಿವರಿಸಿದ ರುತುರಾಜ್, ದುರದೃಷ್ಟವಶಾತ್ ನಾವು ಉತ್ತಮ ಆರಂಭವನ್ನು ಪಡೆಯುತ್ತಿಲ್ಲ ಎಂದು ಓಪನರ್​ಗಳನ್ನು ದೂರಿದ್ದಾರೆ. ಆದರೆ ಒಮ್ಮೆ ಲಯ ಕಂಡುಕೊಂಡರೆ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ನೂರ್ ಎಂದಿನಂತೆ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ, ಖಲೀಲ್ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ಜಡ್ಡು ಭಾಯ್ ಕೂಡ ಬೌಲಿಂಗ್​ನಲ್ಲಿ ಉತ್ತಮವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನಮಗೆ ಸ್ವಲ್ಪ ವೇಗ ಬೇಕು. ಎಲ್ಲವೂ ಒಟ್ಟಿಗೆ ಬಂದು ಜೊತೆಯಾದಾಗ ನಾವು ನಿಜವಾಗಿಯೂ ಬಲಿಷ್ಠರಾಗುತ್ತೇವೆ ಎಂಬುದು ರುತುರಾಜ್ ಮಾತು.

ಅತ್ತ ಸತತ ಎರಡು ಸೋಲಿನ ಬಳಿಕ ಚೊಚ್ಚಲ ಗೆಲುವಿನ ಬಗ್ಗೆ ಮಾತನಾಡಿದ ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್, ಖುಷಿ ಆಗುತ್ತಿದೆ. ನಮಗೆ 20 ರನ್ ಕಡಿಮೆ ಇದೆ ಎಂದು ಅನಿಸಿತು. ಮಧ್ಯಮ ಓವರ್‌ಗಳಲ್ಲಿ ನಾವು ಚೆನ್ನಾಗಿ ಆಡುತ್ತಿದ್ದೆವು ಆದರೆ ಒಂದೆರಡು ತ್ವರಿತ ವಿಕೆಟ್‌ಗಳನ್ನು ಕಳೆದುಕೊಂಡೆವು. ಆದರೆ ನಾವು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ಬೌಲರ್‌ಗಳು ಮುಂದೆ ಬಂದು ಸಂಘಟಿತ ಪ್ರದರ್ಶನ ತೋರಿದರು. ನಾವು ಹಿಂದೆ ಎರಡು ಕಠಿಣ ಪಂದ್ಯಗಳನ್ನು ಆಡಿದ್ದೇವೆ. ಅದರಲ್ಲಿ ನಮ್ಮನ್ನು ನಾವು ರಕ್ಷಿಸಲು ಸಾಧ್ಯವಾಗಲಿಲ್ಲ. ಇಂದು ನಾಯಕನಾಗಿ ನನಗೆ ಅನಿಸಿದ್ದನ್ನು ಮಾಡಿದೆ. ನಮ್ಮ ಫೀಲ್ಡಿಂಗ್ ಕೂಡ ಇಂದು ಚೆನ್ನಾಗಿತ್ತು ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್