Riyan Parag: ಅಂದು ಈ ಪುಟ್ಟ ಬಾಲಕ ಧೋನಿ ಅಭಿಮಾನಿ: ಇಂದು ಎಂಎಸ್ಡಿ ಎದುರೇ ಗೆದ್ದು ಬೀಗಿದ ಆಟಗಾರ
RR vs CSK, IPL 2025: ಸಿಎಸ್‌ಕೆ ತಂಡದ ಮಾಜಿ ನಾಯಕ ಧೋನಿ ಅನೇಕ ಜನರ ಆರಾಧ್ಯ ದೈವ. ಇದರಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲ. ಕ್ರಿಕೆಟಿಗರು ಕೂಡ ಇದ್ದಾರೆ. ಇವರನ್ನೇ ತನ್ನ ಐಡ್ಯಲ್ ಆಗಿ ತೆಗೆದುಕೊಂಡು ಬೆಳೆದವರಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಚಿಕ್ಕವನಾಗಿದ್ದಾಗ ಧೋನಿ ಜೊತೆ ಒಂದು ಫೋಟೋಕ್ಕೋಸ್ಕರ ಪರಿತಪಿಸುತ್ತಿದ್ದ ಪರಾಗ್ ಇಂದು ಧೋನಿ ಇರುವ ತಂಡವನ್ನೇ ಸೋಲಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

(ಬೆಂಗಳೂರು ಮಾ, 31): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಸತತ ಎರಡು ಸೋಲುಗಳ ನಂತರ ರಿಯಾನ್ ಪರಾಗ್ (Riyan Parag) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ್ ತಂಡವು ಋತುವಿನ 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇವಲ 6 ರನ್‌ಗಳಿಂದ ಸೋಲಿಸಿತು. ಈ ಪಂದ್ಯ ಕೊನೆಯ ಓವರ್‌ನವರೆಗೂ ರೋಚಕತೆ ಸೃಷ್ಟಿಸಿತು. ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 20 ರನ್‌ಗಳು ಬೇಕಾಗಿದ್ದವು. ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರು, ಆದರೆ ನಾಯಕ ರಿಯಾನ್ ಪರಾಗ್ ರಾಜಸ್ಥಾನ ಪರ ಮಾಸ್ಟರ್ ಸ್ಟ್ರೋಕ್ ಆಡಿದರು, ಇದರಲ್ಲಿ ಸಿಎಸ್‌ಕೆ ತಂಡದ ಮಾಹಿ ಮ್ಯಾಜಿಕ್ ಕೂಡ ವಿಫಲವಾಯಿತು.
ಸಿಎಸ್‌ಕೆ ತಂಡದ ಮಾಜಿ ನಾಯಕ ಧೋನಿ ಅನೇಕ ಜನರ ಆರಾಧ್ಯ ದೈವ. ಇದರಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲ. ಕ್ರಿಕೆಟಿಗರು ಕೂಡ ಇದ್ದಾರೆ. ಇವರನ್ನೇ ತನ್ನ ಐಡ್ಯಲ್ ಆಗಿ ತೆಗೆದುಕೊಂಡು ಬೆಳೆದವರಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಚಿಕ್ಕವನಾಗಿದ್ದಾಗ ಧೋನಿ ಜೊತೆ ಒಂದು ಫೋಟೋಕ್ಕೋಸ್ಕರ ಪರಿತಪಿಸುತ್ತಿದ್ದ ಪರಾಗ್ ಇಂದು ಧೋನಿ ಇರುವ ತಂಡವನ್ನೇ ಸೋಲಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದೀಗ ಪರಾಗ್ ಚಿಕ್ಕವರಿದ್ದಾಗ ಧೋನಿ ಜೊತೆ ತೆಗೆಸಿಕೊಂಡ ಫೋಟೋ ವೈರಲ್ ಆಗುತ್ತಿದೆ.
Dhoni was playing IPL, when Riyan Parag was a child , Dhoni is still playing IPL 😏#CSKvsRR #SRHvsDC pic.twitter.com/agoVBsqX4A
— Cricket Legends (@CricketLegende) March 30, 2025
43 ವರ್ಷದ ಎಂಎಸ್ ಧೋನಿ 2004ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡುವಾಗ ಪರಾಗ್ಗೆ ಕೇವಲ 3 ವರ್ಷ. ಆಸಕ್ತಿದಾಯಕ ಸಂಗತಿ ಏನೆಂದರೆ ರಿಯಾಗ್ ಅಪ್ಪನಾಗಿರುವ ಪರಾಗ್ ದಾಸ್ ಕೂಡಾ ಧೋನಿ ವಿರುದ್ಧ ರಣಜಿ ಟ್ರೋಫಿಯಲ್ಲಿ ಆಡಿದ್ದರು. 1999-2000ನೇ ಇಸವಿಯಲ್ಲಿ ರಣಜಿ ಟ್ರೋಫಿಯಲ್ಲಿ ಬಿಹಾರ್ ಪರ ಡೆಬ್ಯು ಮಾಡಿದ ಧೋನಿ ವಿರುದ್ಧ ಅಸ್ಸಾಂ ತಂಡವನ್ನು ಪರಾಗ್ ದಾಸ್ ಪ್ರತಿನಿಧಿಸಿದ್ದರು. ಅಲ್ಲದೆ 43 ಪ್ರಥಮ ದರ್ಜೆ ಹಾಗೂ 32 ಲಿಸ್ಟ್ ಎ ಪಂದ್ಯಗಳಲ್ಲಿ ಅಸ್ಸಾಂ ತಂಡದ ಪರ ಆಡಿದ್ದಾರೆ. ಇನ್ನು ಕುತೂಹಲಕಾರಿ ಸಂಗತಿಯೆಂದರೆ ರಿಯಾಗ್ ಅಪ್ಪನನ್ನು ಧೋನಿ ಸ್ಟಂಪ್ ಔಟ್ ಮಾಡಿದ್ದರು.
MS Dhoni: ನಡೆಯದ ಎಂಎಸ್ ಧೋನಿ ಮ್ಯಾಜಿಕ್: ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಿಸಲು ವಿಫಲರಾದ MSD
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 11 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿತು. ಈ ಗೆಲುವಿನಿಂದಾಗಿ, ರಾಜಸ್ಥಾನ ತಂಡವು ಹ್ಯಾಟ್ರಿಕ್ ಸೋಲಿನಿಂದ ಪಾರಾಯಿತು. ರಾಜಸ್ಥಾನ ತಂಡವು ತನ್ನ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲುಗಳನ್ನು ಎದುರಿಸಬೇಕಾಯಿತು. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಜಸ್ಥಾನ ಸೋಲಿನ ಭೀತಿಯಲ್ಲೇ ಇತ್ತು, ಆದರೆ ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ಪಂದ್ಯದ ಗತಿಯನ್ನು ಬದಲಾಯಿಸಿತು. ಧೋನಿ ಔಟ್ ಆದ ಪರಿಣಾಮ ಆರ್ಆರ್ ಜಯ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ