MS Dhoni: ನಡೆಯದ ಎಂಎಸ್ ಧೋನಿ ಮ್ಯಾಜಿಕ್: ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಿಸಲು ವಿಫಲರಾದ MSD
RR vs CSK, IPL 2025: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 182 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಎಂಎಸ್ ಧೋನಿ ಈ ಬಾರಿ 7ನೇ ಕ್ರಮಾಂಕದಲ್ಲಿ ಆಡಿದರು. ಆದರೆ, ಇದರಲ್ಲಿ ಯಶಸ್ವಿಯಾಗಲಿಲ್ಲ.

(ಬೆಂಗಳೂರು ಮಾ, 31): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 11 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (RR vs CSK) ತಂಡವನ್ನು ಕೊನೆಯ ಓವರ್‌ನ ರೋಮಾಂಚಕ ಪಂದ್ಯದಲ್ಲಿ 6 ರನ್‌ಗಳಿಂದ ಸೋಲಿಸಿತು. ಸತತ ಎರಡು ಸೋಲುಗಳ ನಂತರ, ರಾಜಸ್ಥಾನ್ 18 ನೇ ಋತುವಿನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 182 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಮೂಲಕ 18ನೇ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹ್ಯಾಟ್ರಿಕ್ ಸೋಲಿನಿಂದ ಪಾರಾಯಿತು.
ರಾಜಸ್ಥಾನ ವಿರುದ್ಧದ ಈ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟುವಾಗ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭವು ಉತ್ತಮವಾಗಿರಲಿಲ್ಲ. ಓಪನರ್ಗಳಾದ ರಾಚಿನ್ ರವೀಂದ್ರ ಅವರನ್ನು ಜೋಫ್ರಾ ಆರ್ಚರ್ ಮೊದಲ ಓವರ್‌ನಲ್ಲೇ ಔಟ್ ಮಾಡಿದರು. ನಂತರ, ರಾಜಸ್ಥಾನ ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡಿದರು, ಇದರಿಂದಾಗಿ ಸಿಎಸ್‌ಕೆ ತಂಡವು ಒಂದು ಸಮಯದಲ್ಲಿ ಒತ್ತಡಕ್ಕೆ ಒಳಗಾಯಿತು, ಆದರೆ ನಾಯಕ ರುತುರಾಜ್ ಗಾಯಕ್ವಾಡ್ ತಾಳ್ಮೆಯ ಇನ್ನಿಂಗ್ಸ್ ಆಡಿದರು ಮತ್ತು ಪಂದ್ಯವನ್ನು ಕುತೂಹಲ ಘಟ್ಟದತ್ತ ಸಾಗಿಸಿದರು.
ಮಾಹಿ ಮ್ಯಾಜಿಕ್ ಕೆಲಸ ಮಾಡಲಿಲ್ಲ:
ಸಿಎಸ್‌ಕೆ ಪರ ರುತುರಾಜ್ 44 ಎಸೆತಗಳಲ್ಲಿ 63 ರನ್ ಗಳಿಸಿದರು. ಗಾಯಕ್ವಾಡ್ ಕ್ರೀಸ್‌ನಲ್ಲಿದ್ದವರೆಗೂ ಪಂದ್ಯ ಸಿಎಸ್‌ಕೆ ಪರವಾಗಿರುವಂತೆ ತೋರುತ್ತಿತ್ತು, ಆದರೆ ವನಿಂದು ಹಸರಂಗ ಅವರನ್ನು ಔಟ್ ಮಾಡಿ ರಾಜಸ್ಥಾನಕ್ಕೆ ಅವಕಾಶ ಸೃಷ್ಟಿಸಿದರು. ನಾಯಕ ಔಟಾದ ನಂತರ, ಮಹೇಂದ್ರ ಸಿಂಗ್ ಧೋನಿ ಸ್ವತಃ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು. ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಧೋನಿ ಈ ಬಾರಿ 7ನೇ ಕ್ರಮಾಂಕದಲ್ಲಿ ಆಡಿದರು. ಧೋನಿ ಕ್ರೀಸ್‌ಗೆ ಬಂದಾಗ, ಸಿಎಸ್‌ಕೆ ಗೆಲುವಿಗೆ 25 ಎಸೆತಗಳಲ್ಲಿ 54 ರನ್‌ಗಳ ಅಗತ್ಯವಿತ್ತು.
Ruturaj Gaikwad: ಧೋನಿ ಬಗ್ಗೆ ಒಂದೂ ಮಾತನಾಡದೆ ಸೋಲಿಗೆ ರುತುರಾಜ್ ದೂರಿದ್ದು ಯಾರನ್ನ ಗೊತ್ತೇ?
ರಾಜಸ್ಥಾನ ಪರ ಸಂದೀಪ್ ಶರ್ಮಾ ಇನ್ನಿಂಗ್ಸ್‌ನ 17 ನೇ ಓವರ್ ಎಸೆದರು. ಈ ಓವರ್‌ನಲ್ಲಿ ಧೋನಿ ಮತ್ತು ಜಡೇಜಾ ತಂಡಕ್ಕೆ ಒಟ್ಟಾಗಿ ಕೇವಲ 9 ರನ್‌ಗಳನ್ನು ಮಾತ್ರ ಗಳಿಸಿದರು. ನಂತರ, ಮಹೇಶ್ ತಿಕ್ಷಣ ಕೂಡ ಧೋನಿ ಮತ್ತು ಜಡೇಜಾ ಅವರನ್ನು ಕಟ್ಟಿಹಾಕಿ ಕೇವಲ 6 ರನ್‌ಗಳನ್ನು ನೀಡಿದರು. ಪರಿಣಾಮ ಸಿಎಸ್‌ಕೆ ಗೆಲ್ಲಲು 12 ಎಸೆತಗಳಲ್ಲಿ 39 ರನ್ ಗಳಿಸಬೇಕಾಗಿತ್ತು. ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ಧೋನಿ ಮತ್ತು ಜಡೇಜಾ ತಮ್ಮ ಗೇರ್ ಬದಲಾಯಿಸಿಕೊಂಡು ತುಷಾರ್ ದೇಶಪಾಂಡೆ ವಿರುದ್ಧ 19 ರನ್ ಗಳಿಸುವ ಮೂಲಕ ರಾಜಸ್ಥಾನದ ಮೇಲೆ ಒತ್ತಡ ಹೇರಿದರು. ಕೊನೆಯ ಓವರ್‌ನಲ್ಲಿ ತಂಡಕ್ಕೆ 20 ರನ್‌ಗಳು ಬೇಕಾಗಿದ್ದವು.
Good Morning 💗pic.twitter.com/td4eMzZI6D
— Rajasthan Royals (@rajasthanroyals) March 31, 2025
ಕೊನೆಯ ಓವರ್‌ನಲ್ಲಿ ಸಂದೀಪ್ ಶರ್ಮಾ ಎರಡನೇ ಎಸೆತದಲ್ಲೇ ಧೋನಿಯನ್ನು ಕ್ಯಾಚ್ ಔಟ್ ಮಾಡಿದರು. ಧೋನಿ ಔಟಾದ ತಕ್ಷಣ, ರಾಜಸ್ಥಾನ ಮತ್ತೊಮ್ಮೆ ಪಂದ್ಯದಲ್ಲಿ ಮರಳಿತು. ಸಂದೀಪ್ ಉತ್ತಮವಾಗಿ ಬೌಲಿಂಗ್ ಮಾಡಿ ಕೇವಲ 13 ರನ್‌ಗಳನ್ನು ನೀಡಿ ತಂಡವನ್ನು 6 ರನ್‌ಗಳಿಂದ ಗೆಲ್ಲಲು ಸಹಾಯ ಮಾಡಿದರು. 11 ಎಸೆತಗಳಲ್ಲಿ ಎದುರಿಸಿದ ಎಂಎಸ್ಡಿ 1 ಫೋರ್, ಸಿಕ್ಸರ್ನೊಂದಿಗೆ 16 ರನ್ ಗಳಿಸಿದರು. ಈ ಮೂಲಕ ಮಹತ್ವದ ಪಂದ್ಯದಲ್ಲಿ ಧೋನಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ