ಟೀಂ ಇಂಡಿಯಾ ಸುಧಾರಿಸಲು ಬರಲಿದ್ದಾರೆ ಎಂ.ಎಸ್​. ಧೋನಿ? ಪ್ರಮುಖ ಹುದ್ದೆ ನೀಡಲು ಮುಂದಾದ ಬಿಸಿಸಿಐ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು. ಮುಂದಿನ ದಿನಗಳಲ್ಲಿ ಈ ತಪ್ಪು ಆಗದಂತೆ ನೋಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಟೀಂ ಇಂಡಿಯಾ ಸುಧಾರಿಸಲು ಬರಲಿದ್ದಾರೆ ಎಂ.ಎಸ್​. ಧೋನಿ? ಪ್ರಮುಖ ಹುದ್ದೆ ನೀಡಲು ಮುಂದಾದ ಬಿಸಿಸಿಐ
ಧೋನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 15, 2022 | 8:06 PM

ಐಸಿಸಿ ಟೂರ್ನಿಗಳಲ್ಲಿ (ICC Tourny) ಟೀಂ ಇಂಡಿಯಾ ಪದೇಪದೇ ಎಡವುತ್ತಿದೆ. ಸೆಮಿ ಫೈನಲ್, ಫೈನಲ್​ಗಳಲ್ಲಿ ಪಂದ್ಯ ಸೋತು ಕಪ್​ ಇಲ್ಲದೆ ಮನೆಗೆ ಬರುವುತ್ತಿರುವುದು ಸಾಕಷ್ಟು ಬಾರಿ ಮರುಕಳಿಸಿದೆ. ಹಲವು ಘಟಾನುಘಟಿ ಆಟಗಾರರು ಇದ್ದ ಹೊರತಾಗಿಯೂ ಈ ರೀತಿಯ ತಪ್ಪುಗಳು ಆಗುತ್ತಲೇ ಇವೆ. ಇದನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿದೆ. ತಂಡವನ್ನು ಸುಧಾರಿಸಲು ಟೀಂ ಇಂಡಿಯಾದ ಮಾಜಿ ಹಾಗೂ ಯಶಸ್ವಿ ಕ್ಯಾಪ್ಟನ್ ಎಂ.ಎಸ್​. ಧೋನಿ ಅವರನ್ನು ಕರೆತಂದು ಪ್ರಮುಖ ಹುದ್ದೆ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮೂರು ಫಾರ್ಮ್ಯಾಟ್​ಗೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದಾರೆ. ಇದನ್ನು ನಿಭಾಯಿಸಲು ಅವರಿಗೆ ಹೆಚ್ಚು ಹೊರೆ ಆಗುತ್ತಿದೆ. ಹೀಗಾಗಿ, ಟಿ20ಗೆ ಪ್ರತ್ಯೇಕ ಕೋಚ್ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಟಿ20 ಫಾರ್ಮ್ಯಾಟ್​ನಲ್ಲಿ ತಂಡದಲ್ಲಿ ಮಾಡಬೇಕಿರುವ ಬದಲಾವಣೆ ಬಗ್ಗೆ ಧೋನಿಯಿಂದ ಸಲಹೆ ಪಡೆಯಲು ಬಿಸಿಸಿಐ ಚಿಂತನೆ ನಡೆಸಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು. ಮುಂದಿನ ದಿನಗಳಲ್ಲಿ ಈ ತಪ್ಪು ಆಗದಂತೆ ನೋಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ, ಯಶಸ್ವಿ ಕ್ಯಾಪ್ಟನ್ ಧೋನಿಗೆ ಟಿ20 ಕ್ರಿಕೆಟ್​ನ ನಿರ್ದೇಶಕ ಹುದ್ದೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ
Image
ನಿರ್ಮಾಣದ ಜತೆಗೆ ನಟನೆ ಆರಂಭಿಸಿದ ಧೋನಿ? ಹಿಟ್ ನಿರ್ದೇಶಕನ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್
Image
ಈ ಇಬ್ಬರಂತೆ ಸಾವಿರ ಆಟಗಾರರು ಸಿಗಬಹುದು, ಆದರೆ ಧೋನಿಯಂಥವರು ಸಿಗುವುದು ಅಸಾಧ್ಯ; ಗಂಭೀರ್
Image
ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ಧೋನಿ; ಮೊದಲ ಸಿನಿಮಾ ಹೀಗಿರಲಿದೆ?
Image
T20 World Cup 2022: ಈ ಬಾರಿ ಉಡೀಸ್ ಆಗಲಿದೆ 10 ವಿಶ್ವ ದಾಖಲೆಗಳು

2021ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಧೋನಿ ಅವರು ಟೀಂ ಇಂಡಿಯಾದಲ್ಲಿ ಸಲಹೆಗಾರರಾಗಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಆಯ್ಕೆ ಕೊನೆಯ ಹಂತದಲ್ಲಿ ಆಗಿತ್ತು. ಹೆಚ್ಚು ಸಮಯ ಸಿಗದ ಕಾರಣ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿರಲಿಲ್ಲ ಎಂಬುದು ಬಿಸಿಸಿಐ ಅಭಿಪ್ರಾಯ.

ಇದನ್ನೂ ಓದಿ: ನಿರ್ಮಾಣದ ಜತೆಗೆ ನಟನೆ ಆರಂಭಿಸಿದ ಧೋನಿ? ಹಿಟ್ ನಿರ್ದೇಶಕನ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್

ಧೋನಿ ಅವರು ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂದಿನ ವರ್ಷ ಅವರು ಐಪಿಎಲ್​ನಿಂದ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ಅವರು ಬಿಸಿಸಿಐ ನೀಡುವ ಪ್ರಮುಖ ಹುದ್ದೆ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನಡೆವ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಮೀಟಿಂಗ್​ನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

Published On - 8:06 pm, Tue, 15 November 22

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ