ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿಂದು (IPL 2021) 34ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (MIvsKKR) ತಂಡಗಳು ಸೆಣೆಸಾಟ ನಡೆಸಲಿವೆ. ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದ್ದು, ಅಬಿಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಈ ಪಂದ್ಯದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ (Rohit Sharma) ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಟಿ-20 (T20 Cricket) ಮಾದರಿಯ ಕ್ರಿಕೆಟ್ನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಗುರಿತಿಸಿಕೊಂಡಿರುವ ರೋಹಿತ್ ಇತಿಹಾಸ ರಚಿಸುವ ತವಕದಲ್ಲಿದ್ದಾರೆ.
ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ರೋಹಿತ್ ಬರೋಬ್ಬರಿ 397 ಸಿಕ್ಸರ್ ಸಿಡಿಸಿದ್ದಾರೆ. ಇನ್ನೂ ಕೇವಲ 3 ಸಿಕ್ಸರ್ ಬಾರಿಸಿದರೆ ಇವರ ಸಿಕ್ಸರ್ಗಳ ಸಂಖ್ಯೆ 400 ತಲುಪಲಿದೆ. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ 400 ಸಿಕ್ಸರ್ ಬಾರಿಸಿದ ಮೊಟ್ಟ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಬರೆಯಲಿದ್ದಾರೆ. ಈ ಸಾಧನೆಯನ್ನು ಹಿಟ್ಮ್ಯಾನ್ ಇಂದಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲೇ ಮಾಡುವ ಅಂದಾಜಿದೆ.
ರೋಹಿತ್ ಶರ್ಮಾ ಒಟ್ಟು ಈವರೆಗೆ 397 ಸಿಕ್ಸರ್ ಬಾರಿಸಿದ್ದಾರೆ. ಇದರಲ್ಲಿ 224 ಸಿಕ್ಸರ್ ಐಪಿಎಲ್ನಿಂದಲೇ ಬಂದಿದೆ. ಮುಂಬೈ ಇಂಡಿಯನ್ಸ್ ಪರ 173 ಮತ್ತು ಡೆಕ್ಕನ್ ಚಾರ್ಜೆಸ್ ಪರ 51 ಸಿಕ್ಸರ್ ಬಾರಿಸಿದ್ದರು. ಇನ್ನೂ 300 ಸಿಕ್ಸರ್ಗಳ ಗಡಿ ದಾಟಿದ ಭಾರತೀಯ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ (324) ಎರಡನೇ ಸ್ಥಾನ, ವಿರಾಟ್ ಕೊಹ್ಲಿ (315), ಎಂ. ಎಸ್ ಧೋನಿ (303) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನೂ ರೋಹಿತ್ ಶರ್ಮ 18 ರನ್ ಪೇರಿಸಿದರೆ, ತಂಡವೊಂದರ ವಿರುದ್ಧ ಅತಿವೇಗವಾಗಿ ಸಾವಿರ ರನ್ ಪೇರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಕೆಕೆಆರ್ ಎದುರು ರೋಹಿತ್ ಶರ್ಮ, ಇದುವರೆಗೂ ಸರಾಸರಿ 49.10 ರಂತೆ 982 ರನ್ ಪೇರಿಸಿದ್ದು, ಸ್ಟ್ರೈಕ್ ರೇಟ್ 133.06 ಹೊಂದಿದ್ದಾರೆ.
ಮುಂಬೈ ತಂಡ ಈ ಬಾರಿಯ ಟೂರ್ನಿಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಕಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಅನುಭವಿಸಿದೆ. ಇತ್ತ ಕೆಕೆಆರ್ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಜಯ ಸಾಧಿಸಿದ್ದು ಐದರಲ್ಲಿ ಸೋತು ತನ್ನ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
IPL 2021 Points Table, Purple Cap, and Orange Cap: ಯಾವ ಆಟಗಾರನ ಕೈಯಲ್ಲಿದೆ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್?
IPL 2021 Points Table: SRH vs DC ಪಂದ್ಯದ ಬಳಿಕ ಐಪಿಎಲ್ 2021 ಪಾಯಿಂಟ್ ಟೇಬಲ್ನಲ್ಲಿ ಮಹತ್ವದ ಬದಲಾವಣೆ
(Mumbai Indians captain Rohit Sharma only 3 sixes away to create Sixes Record IPL 2021 MI vs KKR)