
ಐಪಿಎಲ್ 2026 ರ 33 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಭಾರಿ ಅಂತರದಿಂದ ಸೋಲಿಸಿತು. ಮುಂಬೈ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು, ಆದರೆ ಚೆನ್ನೈ ತಂಡದ ಸ್ಫೋಟಕ ಬ್ಯಾಟಿಂಗ್ ಮತ್ತು ನಂತರ ಅತ್ಯುತ್ತಮ ಬೌಲಿಂಗ್ ಮುಂಬೈ ತಂಡವನ್ನು ಸುಲಭವಾಗಿ ಸೋಲಿನ ದವಡೆಗೆ ತಳ್ಳಿತು. ಸಿಎಸ್ಕೆ 20 ಓವರ್‌ಗಳಲ್ಲಿ 207 ರನ್‌ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಮುಂಬೈ 19 ಓವರ್‌ಗಳಲ್ಲಿ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಚೆನ್ನೈ 103 ರನ್‌ಗಳಿಂದ ಗೆದ್ದಿತು. ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಇದು ಮೂರನೇ ಗೆಲುವು.
ಮುಂಬೈ ಇಂಡಿಯನ್ಸ್ ತಂಡವು 103 ರನ್‌ಗಳ ಹೀನಾಯ ಸೋಲು ಅನುಭವಿಸಿತು. 208 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಮತ್ತು ಅಕೀಲ್ ಹೊಸೈನ್ ಅವರ ಬೌಲಿಂಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿತು. ಸ್ಯಾಮ್ಸನ್ 54 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರೆ, ಅಕೀಲ್ ಹೊಸೈನ್ ಅದ್ಭುತ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 17 ರನ್‌ಗಳಿಗೆ 4 ವಿಕೆಟ್ ಪಡೆದರು. ನೂರ್ ಅಹ್ಮದ್ ಕೂಡ 2 ವಿಕೆಟ್ ಪಡೆದರು.
ಮುಂಬೈ ತಂಡದ ಸೋಲು ಈಗ ಬಹುತೇಕ ಖಚಿತ. ಸೂರ್ಯಕುಮಾರ್ ಯಾದವ್ ಕೂಡ ಔಟಾದರು. ಅವರು 36 ರನ್ ಗಳಿಸಿ ಅಕೀಲ್ ಹೊಸೈನ್ ಬೌಲಿಂಗ್‌ನಲ್ಲಿ ಸರ್ಫರಾಜ್ ಖಾನ್‌ಗೆ ಕ್ಯಾಚ್ ನೀಡಿದರು.
ನೂರ್ ಅಹ್ಮದ್ ಅವರ ಅದ್ಭುತ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಔಟಾದರು. ಅವರು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ ಮುಖೇಶ್ ಚೌಧರಿಗೆ ವಿಕೆಟ್ ಒಪ್ಪಿಸಿದರು.
ಅನ್ಶುಲ್ ಕಾಂಬೋಜ್ ಅದ್ಭುತ ಓವರ್ ಎಸೆದರು, ಕೇವಲ ಒಂದು ರನ್ ಮಾತ್ರ ನೀಡಿದರು. ಮುಂಬೈ ಏಳು ಓವರ್‌ಗಳಲ್ಲಿ ಕೇವಲ 30 ರನ್ ಗಳಿಸಿರುವುದರಿಂದ, ತಂಡದ ಮೇಲಿನ ಒತ್ತಡ ಹೆಚ್ಚುತ್ತಿದೆ.
ಮೊದಲ ಓವರ್ ನಲ್ಲೇ ಮುಂಬೈ ತಂಡ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಮೊದಲ ಎಸೆತದಲ್ಲೇ ಡ್ಯಾನಿಶ್ ಮಾಲೆವಾರ್ ಔಟಾದರು. ಆ ಓವರ್ ನಲ್ಲಿ ಕ್ವಿಂಟನ್ ಡಿ ಕಾಕ್ ಅದ್ಭುತ ಸಿಕ್ಸರ್ ಬಾರಿಸಿದರು, ಆದರೆ ಕೊನೆಯ ಎಸೆತದಲ್ಲಿ ಅಕೇಲ್ ಹೊಸೈನ್ ಅದ್ಭುತ ವಿಕೆಟ್ ಪಡೆದರು.
ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್ ಐದನೇ ಐಪಿಎಲ್ ಶತಕವನ್ನು ದಾಖಲಿಸಿದರು. ಇದು ಸ್ಯಾಮ್ಸನ್ ಅವರ ಈ ಋತುವಿನ ಎರಡನೇ ಶತಕವಾಗಿದೆ. ಸ್ಯಾಮ್ಸನ್ 54 ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 101 ರನ್ ಗಳಿಸಿದರು. ಈ ಇನ್ನಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 207 ರನ್ ತಲುಪಲು ಸಹಾಯ ಮಾಡಿತು.
ಅಶ್ವನಿ ಕುಮಾರ್ ಮತ್ತೊಂದು ವಿಕೆಟ್ ಪಡೆದರು. ಅತ್ಯುತ್ತಮ ಬೌಲಿಂಗ್. 18ನೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಓವರ್ಟನ್ ಕೊನೆಯ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಓವರ್ಟನ್ 7 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು.
ಸಂಜು ಸ್ಯಾಮ್ಸನ್ 16 ನೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಚಚ್ಚಿದರು. ಚೆನ್ನೈ ತಂಡದ ಸ್ಕೋರ್ 16 ಓವರ್‌ಗಳ ನಂತರ 164 ರನ್‌ಗಳನ್ನು ತಲುಪಿದೆ.
ಸಂಜು ಸ್ಯಾಮ್ಸನ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೂರು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಾಯದಿಂದ ಅವರು ಅರ್ಧಶತಕ ಪೂರೈಸಿದರು. ಈ ಋತುವಿನಲ್ಲಿ ಸಂಜು ಸ್ಯಾಮ್ಸನ್ ಅವರ ಮೂರನೇ ಐವತ್ತು ಪ್ಲಸ್ ಸ್ಕೋರ್ ಇದು. ಅದ್ಭುತ ಬ್ಯಾಟಿಂಗ್.
ಅಲ್ಲಾಹ್ ಗಜನ್‌ಫರ್‌ಗೆ ಮತ್ತೊಂದು ವಿಕೆಟ್. ಅವರು ಶಿವಂ ದುಬೆ ಅವರನ್ನು 5 ರನ್‌ಗಳಿಗೆ ಬೌಲ್ಡ್ ಮಾಡಿದರು. ಸಿಎಸ್ಕೆ 91/3
ಚೆನ್ನೈ ಸೂಪರ್ ಕಿಂಗ್ಸ್ ಕೇವಲ ನಾಲ್ಕು ಓವರ್‌ಗಳಲ್ಲಿ 50 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ ಕಳಪೆ ಬೌಲಿಂಗ್ ಮಾಡಿದರು. ತಮ್ಮ ಮೊದಲ ಓವರ್‌ನಲ್ಲಿ 19 ರನ್‌ಗಳನ್ನು ಬಿಟ್ಟುಕೊಟ್ಟ ನಂತರ, ಅವರು ಮತ್ತೆ ದಾಳಿಗೆ ಇಳಿದು ತಮ್ಮ ಎರಡನೇ ಓವರ್‌ನಲ್ಲಿ 19 ರನ್‌ಗಳನ್ನು ಬಿಟ್ಟುಕೊಟ್ಟರು. ಸಂಜು ಸ್ಯಾಮ್ಸನ್ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ವಿಕೆಟ್ ಕಳೆದುಕೊಂಡಿತು, ಅಲ್ಲಾ ಗಜನ್‌ಫರ್ ಬೌಲಿಂಗ್‌ನಲ್ಲಿ ರುತುರಾಜ್ ಗಾಯಕ್ವಾಡ್ ಔಟ್. ತಿಲಕ್ ವರ್ಮಾ ಅದ್ಭುತ ಕ್ಯಾಚ್ ಹಿಡಿದರು. ಚೆನ್ನೈ ನಾಯಕ 22 ರನ್ ಗಳಿಸಿ ಔಟಾದರು.
ಹಾರ್ದಿಕ್ ಪಾಂಡ್ಯ 19 ರನ್‌ಗಳನ್ನು ಬಿಟ್ಟುಕೊಟ್ಟರು. ಪಾಂಡ್ಯ ಎಸೆದ ಮೂರನೇ ಎಸೆತದಲ್ಲಿ ಗಾಯಕ್ವಾಡ್ ಬೌಂಡರಿ ಬಾರಿಸಿದರು. ಫ್ರೀ ಹಿಟ್‌ನಲ್ಲಿಯೂ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಸಂಜು ಸ್ಯಾಮ್ಸನ್, ರಿತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್ ಮತ್ತು ಮುಖೇಶ್ ಚೌಧರಿ.
ಕ್ವಿಂಟನ್ ಡಿ ಕಾಕ್, ನಮನ್ ಧೀರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಶೆರ್ಫೇನ್ ರುದರ್‌ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ಕ್ರಿಶ್ ಭಗತ್, ಅಲ್ಲಾ ಗಜನ್‌ಫರ್ ಮತ್ತು ಅಶ್ವನಿ ಕುಮಾರ್
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮ್ಯಾಥ್ಯೂ ಶಾರ್ಟ್ ಬದಲಿಗೆ ಕಾರ್ತಿಕ್ ಶರ್ಮಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಸಿಎಸ್ಕೆ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:04 pm, Thu, 23 April 26