
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳಿಂದ ಜಯಗಳಿಸಿತು. ಇದು ಮುಂಬೈ ತಂಡಕ್ಕೆ ಈ ಆವೃತ್ತಿಯಲ್ಲಿ ಮೂರನೇ ಗೆಲುವಾದರೆ, ಇತ್ತ ಲಕ್ನೋ ತಂಡಕ್ಕೆ 7ನೇ ಸೋಲು. ಈ ಸೋಲಿನೊಂದಿಗೆ ಲಕ್ನೋ ತಂಡದ ಪ್ಲೇ ಆಫ್ ಕನಸು ಕೂಡ ಭಾಗಶಃ ಭಗ್ನವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 228 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ರಿಕಲ್ಟನ್ ಹಾಗೂ ರೋಹಿತ್ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಗೆಲುವು ದಾಖಲಿಸಿತು.
ಮುಂಬೈ ಇಂಡಿಯನ್ಸ್ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತಿ ದೊಡ್ಡ ಚೇಸಿಂಗ್ ಗೆಲುವು ಸಾಧಿಸಿದೆ. ಮುಂಬೈ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಲಕ್ನೋ ಮುಂಬೈಗೆ 229 ರನ್‌ಗಳ ಗುರಿಯನ್ನು ನೀಡಿತ್ತು. ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ತಲುಪಿತು. ಈ ಆವೃತ್ತಿಯಲ್ಲಿ ಮುಂಬೈ ತಂಡವು ಗಳಿಸಿದ ಮೂರನೇ ಗೆಲುವು ಇದು.
ಮುಂಬೈ ಇಂಡಿಯನ್ಸ್ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಸೂರ್ಯ 7 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು.
ಗಾಯದಿಂದ ಚೇತರಿಸಿಕೊಂಡು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್ ಆಡಿದರು. ರೋಹಿತ್ 44 ಎಸೆತಗಳಲ್ಲಿ 84 ರನ್ ಗಳಿಸಿ ಔಟಾದರು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಆದರೆ, ರಯಾನ್ ರಿಕಲ್ಟನ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ರಿಕಲ್ಟನ್ 32 ಎಸೆತಗಳಲ್ಲಿ 83 ರನ್ ಗಳಿಸಿ ಔಟಾದರು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಹಿತ್ ಶರ್ಮಾ ಅದ್ಭುತ ಕಮ್‌ಬ್ಯಾಕ್ ಮಾಡಿದರು. ಅವರು 27 ಎಸೆತಗಳಲ್ಲಿ ಅರ್ಧಶತ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ 49 ನೇ ಅರ್ಧಶತಕವಾಗಿದೆ.
ರಯಾನ್ ರಿಕಲ್ಟನ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇದು ರಯಾನ್ ಅವರ ಐಪಿಎಲ್ ವೃತ್ತಿಜೀವನದ ಎಂಟನೇ ಅರ್ಧಶತಕವಾಗಿದೆ.
ಆರಂಭಿಕ ಜೋಡಿಯಾದ ರಯಾನ್ ರಿಕಲ್ಟನ್ ಮತ್ತು ರೋಹಿತ್ ಶರ್ಮಾ ಮುಂಬೈ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಪವರ್‌ಪ್ಲೇನ 6 ಓವರ್‌ಗಳಲ್ಲಿ ಮುಂಬೈ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿದೆ. ರೋಹಿತ್ ಔಟಾಗದೆ 36 ರನ್ ಗಳಿಸಿದರೆ, ರಯಾನ್ ಔಟಾಗದೆ 34 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಲಕ್ನೋ ವಿರುದ್ಧ 229 ರನ್ ಗಳ ಗುರಿ ಬೆನ್ನಟ್ಟಿ ಅದ್ಭುತ ಆರಂಭ ನೀಡಿದೆ. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್ ಗಳನ್ನು ಸೇರಿಸಿದ್ದಾರೆ. ರಯಾನ್ 31 ರನ್ ಮತ್ತು ರೋಹಿತ್ 12 ರನ್ ಗಳಿಸಿ ಔಟಾಗದೆ ಆಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ಜೈಂಟ್ಸ್ ತಂಡವು 5 ವಿಕೆಟ್‌ಗಳ ನಷ್ಟಕ್ಕೆ 228 ರನ್ ಗಳಿಸಿತು. ಮುಂಬೈ ಬೌಲರ್‌ಗಳು ಅಂತಿಮ ಓವರ್‌ಗಳಲ್ಲಿ ಬಿಗಿಯಾಗಿ ಬೌಲಿಂಗ್ ಮಾಡಿ, ಲಕ್ನೋ ತಂಡ 250 ರನ್ ಕಲೆಹಾಕದಂತೆ ತಡೆಯಿತು. ಮುಂಬೈ ಗೆಲ್ಲಲು 229 ರನ್‌ಗಳ ಅವಶ್ಯಕತೆಯಿದೆ.
ಲಕ್ನೋ ತಂಡ 200 ರನ್ ಪೂರೈಸಿದೆ. ಲಕ್ನೋ ತಂಡ 17 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಐಡೆನ್ ಮಾರ್ಕ್ರಾಮ್ 27 ರನ್ ಮತ್ತು ಹಿಮಂತ್ ಸಿಂಗ್ 24 ರನ್ ಗಳಿಸಿ ಆಡುತ್ತಿದ್ದಾರೆ. ಕೊನೆಯ 18 ಎಸೆತಗಳಲ್ಲಿ ಲಕ್ನೋ ಎಷ್ಟು ರನ್ ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸ್ಪಿನ್ನರ್ ರಘು ಶರ್ಮಾ ಲಕ್ನೋ ಪರ ಚೊಚ್ಚಲ ಪಂದ್ಯವನ್ನಾಡಿದ ಅಕ್ಷತ್ ರಘುವಂಶಿ ಅವರನ್ನು ಔಟ್ ಮಾಡುವ ಮೂಲಕ ಐಪಿಎಲ್‌ನಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು.
ಲಕ್ನೋ ಸೂಪರ್ ಜೈಂಟ್ಸ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಕಾರ್ಬಿನ್ ಬಾಷ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಪೂರನ್ ನಂತರ, ಅವರು ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು. ಮಾರ್ಷ್ 25 ಎಸೆತಗಳಲ್ಲಿ 44 ರನ್ ಗಳಿಸಿ ನಿರ್ಗಮಿಸಿದರು.
ಕಳಪೆ ಫಾರ್ಮ್‌ನಲ್ಲಿದ್ದ ನಿಕೋಲಸ್ ಪೂರನ್ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯಲ್ಲಿ ಅವರ ಮೊದಲ ಅರ್ಧಶತಕವಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ ಉತ್ತಮ ಆರಂಭವನ್ನು ಪಡೆದಿದೆ. ಪವರ್‌ಪ್ಲೇನಲ್ಲಿ ಲಕ್ನೋ ಒಂದು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ನಿಕೋಲಸ್ ಪೂರನ್ 39 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಮಿಚೆಲ್ ಮಾರ್ಷ್ 35 ರನ್ ಗಳಿಸಿ ಅಜೇಯರಾಗುಳಿದ್ದಾರೆ.
ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್‌ಗೆ ಮೊದಲ ಹೊಡೆತ ನೀಡಿದೆ. ಅಲ್ಲಾ ಗಜನ್ಫರ್, ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡಿದ್ದಾರೆ.
ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ವಿಲ್ ಜಾಕ್ಸ್, ರಾಜ್ ಬಾವಾ (ರಾಬಿನ್ ಮಿಂಜ್ ಬದಲಿಗೆ), ಕಾರ್ಬಿನ್ ಬಾಷ್ (ಟ್ರೆಂಟ್ ಬೌಲ್ಟ್ ಬದಲಿಗೆ), ದೀಪಕ್ ಚಹಾರ್ (ಹಾರ್ದಿಕ್ ಪಾಂಡ್ಯ ಬದಲಿಗೆ), ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್, ಮತ್ತು ರಘು ಶರ್ಮಾ (ಕ್ರಿಶ್ ಭಗತ್ ಬದಲಿಗೆ).
ಇಂಪ್ಯಾಕ್ಟ್ ಪ್ಲೇಯರ್ಸ್: ರೋಹಿತ್ ಶರ್ಮಾ, ಮಯಾಂಕ್ ರಾವತ್, ರಾಬಿನ್ ಮಿಂಜ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್.
ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್ (ಆಯುಷ್ ಬಡೋನಿ ಬದಲಿಗೆ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಅಕ್ಷತ್ ರಘುವಂಶಿ (ಮುಕುಲ್ ಚೌಧರಿ ಬದಲಿಗೆ), ಹಿಮ್ಮತ್ ಸಿಂಗ್ (ದಿಗ್ವೇಶ್ ಸಿಂಗ್ ಬದಲಿಗೆ), ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಅವೇಶ್ ಖಾನ್, ಮತ್ತು ಪ್ರಿನ್ಸ್ ಯಾದವ್.
ಇಂಪ್ಯಾಕ್ಟ್ ಪ್ಲೇಯರ್ಸ್: ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಮಯಾಂಕ್ ಯಾದವ್, ಶಹಬಾಜ್ ಅಹಮದ್ ಮತ್ತು ಅಬ್ದುಲ್ ಸಮದ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ.
Published On - 7:02 pm, Mon, 4 May 26