IND vs AUS: ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಬಗ್ಗುಬಡಿದ ಟೀಂ ಇಂಡಿಯಾ

India vs Australia T20: ಭಾರತದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್ ನಿಯಮದಡಿಯಲ್ಲಿ 21 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 133 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತದ ಬೌಲರ್‌ಗಳು, ವಿಶೇಷವಾಗಿ ಅರುಂಧತಿ ರೆಡ್ಡಿ, ಪ್ರಮುಖ ಪಾತ್ರ ವಹಿಸಿದರು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ, ಭಾರತ 51/1 ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

IND vs AUS: ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಬಗ್ಗುಬಡಿದ ಟೀಂ ಇಂಡಿಯಾ
Aus W Vs Ind W

Updated on: Feb 15, 2026 | 6:27 PM

ಒಂದೆಡೆ ಭಾರತದ ಪುರುಷರ ತಂಡ ಭಾರತದಲ್ಲಿ ಟಿ20 ವಿಶ್ವಕಪ್ ಆಡುತ್ತಿದ್ದರೆ, ಇನ್ನೊಂದೆಡೆ ಭಾರತದ ಮಹಿಳಾ ಪಡೆ ಮೂರು ಮಾದರಿಗಳ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ (India vs Australia) ತೆರಳಿದೆ. ಅದರಂತೆ ಉಭಯ ತಂಡಗಳ ನಡುವಿನ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 18 ಓವರ್‌ಗಳಲ್ಲಿ 133 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ 5.1 ಓವರ್​ಗಳಲ್ಲಿ 1 ಓವರ್ ನಷ್ಟಕ್ಕೆ 51 ರನ್ ಕಲೆಹಾಕಿತ್ತು. ಆದರೆ ಈ ವೇಳೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆ ಬಳಿಕವೂ ಮಳೆ ನಿಲ್ಲದ ಕಾರಣ ಡಕ್ವರ್ತ್​ ಲೂಯಿಸ್ ನಿಯಮದಡಿಯಲ್ಲಿ (DLS Method) ಟೀಂ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು.

4 ವಿಕೆಟ್ ಉರುಳಿಸಿದ ಅರುಂಧತಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಜಾರ್ಜಿಯಾ ವೇರ್‌ಹ್ಯಾಮ್ ಅತ್ಯಧಿಕ 30 ರನ್​ಗಳ ಇನ್ನಿಂಗ್ಸ್ ಆಡಿದರೆ, ಫೋಬೆ ಲಿಚ್‌ಫೀಲ್ಡ್ 26 ಹಾಗೂ ಎಲ್ಲಿಸ್ ಪೆರ್ರಿ 20 ರನ್​ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಬಲಿಷ್ಠ ಆಸ್ಟ್ರೇಲಿಯಾವನ್ನು ಅವರ ನೆಲದಲ್ಲಿ ಇಷ್ಟು ಅಲ್ಪ ರನ್​ಗಳಿಗೆ ಕಟ್ಟಿಹಾಕುವಲ್ಲಿ ಭಾರತದ ಬೌಲರ್​ಗಳು ಅದ್ಭುತ ಪ್ರದರ್ಶನ ನೀಡಿದರು. ಅರುಂಧತಿ ರೆಡ್ಡಿ 4 ಓವರ್‌ಗಳಲ್ಲಿ 22 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರೆ, ರೇಣುಕಾ ಸಿಂಗ್ ಠಾಕೂರ್ 4 ಓವರ್‌ಗಳಲ್ಲಿ 14 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಶ್ರೀ ಚರಣಿ 3 ಓವರ್‌ಗಳಲ್ಲಿ 14 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರೆ, ಕ್ರಾಂತಿ ಗೌಡ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಭಾರತಕ್ಕೆ ಸ್ಫೋಟಕ ಆರಂಭ

ಗೆಲುವಿಗೆ 134 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಉತ್ತಮ ಆರಂಭವನ್ನು ನೀಡಿತು. ಈ ಜೋಡಿ ಕೇವಲ 25 ಎಸೆತಗಳಲ್ಲಿ 33 ರನ್​ಗಳ ಕಾಣಿಕೆ ನೀಡಿತು. ಶಫಾಲಿ ವರ್ಮಾ 11 ಎಸೆತಗಳಲ್ಲಿ 21 ರನ್‌ಗಳಿಸಿ ಔಟಾದರೆ, ತಮ್ಮ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ನಂತರ ಬಂದ ಜೆಮಿಮಾ ರೊಡ್ರಿಗಸ್ 3 ಎಸೆತಗಳಲ್ಲಿ 9 ರನ್‌ ಬಾರಿಸಿದ್ದರು. ಆದರೆ ಪಂದ್ಯದ ಆರನೇ ಓವರ್‌ನ ಮೊದಲ ಎಸೆತದಲ್ಲಿ ಮಳೆ ಕಾಣಿಸಿಕೊಂಡಿತು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

IND vs PAK T20 WC Live Score: ಕೆಲವೇ ನಿಮಿಷಗಳಲ್ಲಿ ಟಾಸ್

ಭಾರತಕ್ಕೆ 21 ರನ್‌ ಜಯ

ಐದು ಓವರ್‌ಗಳ ನಂತರ, ಡಕ್‌ವರ್ತ್-ಲೂಯಿಸ್ ವಿಧಾನದ ಪ್ರಕಾರ ಪಂದ್ಯದ ವಿಜೇತರನ್ನು ನಿರ್ಧರಿಸಲಾಯಿತು. ಅದರಂತೆ ಭಾರತವನ್ನು 21 ರನ್‌ಗಳಿಂದ ವಿಜಯಿ ಎಂದು ಘೋಷಿಸಲಾಯಿತು. ವಾಸ್ತವವಾಗಿ, ಮಳೆ ಬಂದು ಪಂದ್ಯ ರದ್ದಾದಾಗ ಭಾರತ 50 ರನ್ ಗಳಿಸಿತ್ತು ಮತ್ತು ಗೆಲ್ಲಲು 14.5 ಓವರ್‌ಗಳಲ್ಲಿ 83 ರನ್‌ಗಳ ಅಗತ್ಯವಿತ್ತು. ಅಂದರೆ 89 ಎಸೆತಗಳಲ್ಲಿ 83 ರನ್‌ಗಳ ಅಗತ್ಯವಿತ್ತು. ಆದರೆ ಡಕ್‌ವರ್ತ್-ಲೂಯಿಸ್ ವಿಧಾನದ ಪ್ರಕಾರ, 5.1 ಓವರ್‌ಗಳಲ್ಲಿ ಭಾರತದ ಆಕ್ರಮಣಕಾರಿ ಇನ್ನಿಂಗ್ಸ್ ತಂಡಕ್ಕೆ ಪ್ರಯೋಜನವನ್ನು ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ