AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK T20 WC Highlights: ಪಾಕಿಸ್ತಾನದ ವಿರುದ್ಧ ಭಾರತಕ್ಕೆ 61 ರನ್ ಜಯ

India vs Pakistan, T20 world Cup 2026 Highlights Updates: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡವು, ಪಾಕಿಸ್ತಾನವನ್ನು ಸೋಲಿಸಿ ಸೂಪರ್ 8 ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 175 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 114 ರನ್ ಗಳಿಗೆ ಆಲೌಟ್ ಆಗಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು.

IND vs PAK T20 WC Highlights: ಪಾಕಿಸ್ತಾನದ ವಿರುದ್ಧ ಭಾರತಕ್ಕೆ 61 ರನ್ ಜಯ
Ind Vs Pak
ಪೃಥ್ವಿಶಂಕರ
|

Updated on:Feb 15, 2026 | 10:34 PM

Share

ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡವು, ಪಾಕಿಸ್ತಾನವನ್ನು ಸೋಲಿಸಿ ಸೂಪರ್ 8 ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 175 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 114 ರನ್ ಗಳಿಗೆ ಆಲೌಟ್ ಆಗಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಭಾರತ ಪರ ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 77 ರನ್ ಬಾರಿಸಿದರು. ಬೌಲಿಂಗ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಮತ್ತು ತಿಲಕ್ ವರ್ಮಾ ಕೂಡ ತಲಾ ಒಂದು ವಿಕೆಟ್ ಪಡೆದರು. ಇದರ ಪರಿಣಾಮವಾಗಿ ಪಾಕಿಸ್ತಾನ 114 ರನ್‌ಗಳಿಗೆ ಆಲೌಟ್ ಆಯಿತು.

LIVE NEWS & UPDATES

The liveblog has ended.
  • 15 Feb 2026 10:22 PM (IST)

    ⁠India vs Pakistan Match Updates: ಪಾಕಿಸ್ತಾನವನ್ನು ಮಣಿಸಿದ ಭಾರತ

    ಪಾಕಿಸ್ತಾನ 114 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 61 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದು ಪಾಕಿಸ್ತಾನದ ವಿರುದ್ಧ ಭಾರತದ ಎಂಟನೇ ಟಿ20 ವಿಶ್ವಕಪ್ ಗೆಲುವು. ಭಾರತದ ಪರ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಕುಲ್ದೀಪ್ ಯಾದವ್ ಮತ್ತು ತಿಲಕ್ ವರ್ಮಾ ತಲಾ ಒಂದು ವಿಕೆಟ್ ಪಡೆದರು.

  • 15 Feb 2026 09:56 PM (IST)

    ⁠India vs Pakistan Match Updates: ನವಾಜ್ ಕೂಡ ಔಟ್

    ಪಾಕಿಸ್ತಾನ 78 ರನ್‌ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ನವಾಜ್ 5 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ಇದರೊಂದಿಗೆ ಕುಲ್ದೀಪ್ ಯಾದವ್ ಕೂಡ ವಿಕೆಟ್ ಪಡೆದರು.

  • 15 Feb 2026 09:46 PM (IST)

    ⁠India vs Pakistan Match Updates: 5ನೇ ವಿಕೆಟ್ ಪತನ

    ಪಾಕಿಸ್ತಾನ ತಂಡದ ಅರ್ಧದಷ್ಟು ಆಟಗಾರರು 73 ರನ್‌ಗಳಿಗೆ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಉಸ್ಮಾನ್ ಖಾನ್ 34 ಎಸೆತಗಳಲ್ಲಿ 44 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿ ಔಟಾದರು.

  • 15 Feb 2026 09:43 PM (IST)

    ⁠India vs Pakistan Match LIVE: 50 ರನ್‌ ಪೂರ್ಣ

    ಪಾಕಿಸ್ತಾನ 7.1 ಓವರ್‌ಗಳಲ್ಲಿ 50 ರನ್‌ಗಳ ಗಡಿ ತಲುಪಿತು, ಆದರೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

  • 15 Feb 2026 09:23 PM (IST)

    ⁠India vs Pakistan Match LIVE: ಬಾಬರ್ ಕೂಡ ಔಟ್

    ಪಾಕಿಸ್ತಾನ 34 ರನ್‌ಗಳಿಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಬಾಬರ್ ಅಜಮ್ 7 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರು. ಈ ವಿಕೆಟ್ ಅಕ್ಷರ್ ಪಟೇಲ್ ಪಡೆದರು.

  • 15 Feb 2026 09:23 PM (IST)

    ⁠India vs Pakistan Match LIVE: ಒತ್ತಡದಲ್ಲಿ ಪಾಕಿಸ್ತಾನ

    ಪಾಕಿಸ್ತಾನ ಮೊದಲ ನಾಲ್ಕು ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಕೇವಲ 25 ರನ್‌ಗಳನ್ನು ಗಳಿಸಿದೆ. ಬ್ಯಾಟಿಂಗ್ ವಿಭಾಗ ಒತ್ತಡದಲ್ಲಿ ಕಾಣುತ್ತಿದೆ.

  • 15 Feb 2026 09:11 PM (IST)

    IND vs PAK T20 World Cup: ನಾಯಕನೂ ಔಟ್

    ಪಾಕಿಸ್ತಾನ ತಂಡವು 13 ರನ್ ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ನಾಯಕ ಸಲ್ಮಾನ್ ಅಘಾ 4 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ಜಸ್ಪ್ರೀತ್ ಬುಮ್ರಾ ಕೇವಲ ಒಂದು ಓವರ್ ನಲ್ಲಿ ಎರಡು ವಿಕೆಟ್ ಪಡೆದರು.

  • 15 Feb 2026 09:11 PM (IST)

    ⁠Pakistan Team Score Now: ಸ್ಯಾಮ್ ಅಯೂಬ್ ಕೂಡ ಔಟ್

    ಪಾಕಿಸ್ತಾನ 6 ರನ್‌ಗಳಿಸುವುದರೊಳಗೆ ಎರಡನೇ ವಿಕೆಟ್ ಕಳೆದುಕೊಂಡಿದೆ. ಸ್ಯಾಮ್ ಅಯೂಬ್ 2 ಎಸೆತಗಳಲ್ಲಿ 6 ರನ್‌ಗಳಿಸಿ ಔಟಾದರು.

  • 15 Feb 2026 09:10 PM (IST)

    ⁠India vs Pakistan Match: ಫರ್ಹಾನ್ ಔಟ್

    ಪಾಕಿಸ್ತಾನ ತನ್ನ ಖಾತೆ ತೆರೆಯದೆಯೇ ಮೊದಲ ವಿಕೆಟ್ ಕಳೆದುಕೊಂಡಿದೆ. ಸಾಹಿಬ್‌ಜಾದಾ ಫರ್ಹಾನ್ ಪೆವಿಲಿಯನ್‌ಗೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದರು.

  • 15 Feb 2026 08:50 PM (IST)

    ⁠India vs Pakistan Match: 175 ರನ್‌ಗಳ ಗುರಿ ನೀಡಿದ ಭಾರತ

    ಭಾರತ ತಂಡವು ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಅವರ ವಿಕೆಟ್ ಕಳೆದುಕೊಂಡಿತು. 20 ಓವರ್‌ಗಳ ನಂತರ, ಟೀಮ್ ಇಂಡಿಯಾ 7 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ 77 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸ್ಯಾಮ್ ಅಯೂಬ್ ಪಾಕಿಸ್ತಾನ ಪರ ಅತಿ ಹೆಚ್ಚು ವಿಕೆಟ್ (3) ಪಡೆದರು.

  • 15 Feb 2026 08:42 PM (IST)

    ⁠India vs Pakistan Match: ಶಿವಂ ದುಬೆ ಔಟ್

    ಟೀಮ್ ಇಂಡಿಯಾ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ಶಿವಂ ದುಬೆ ರನೌಟ್ ಆದರು. ಭಾರತ 175 ರನ್‌ಗಳಿಗೆ ಈ ವಿಕೆಟ್ ಕಳೆದುಕೊಂಡಿತು.

  • 15 Feb 2026 08:41 PM (IST)

    ⁠IND vs PAK T20 World Cup Live Updates: ಸೂರ್ಯ ಔಟ್

    ಟೀಮ್ ಇಂಡಿಯಾ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ. ನಾಯಕ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು.

  • 15 Feb 2026 08:31 PM (IST)

    India vs Pakistan Match Updates: 16 ಓವರ್‌ಗಳು ಪೂರ್ಣ

    16 ಓವರ್‌ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿದೆ. ಸೂರ್ಯಕುಮಾರ್ ಯಾದವ್ 24 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದರೆ, ಶಿವಂ ದುಬೆ 9 ರನ್‌ಗಳೊಂದಿಗೆ ಅವರಿಗೆ ಬೆಂಬಲ ನೀಡುತ್ತಿದ್ದಾರೆ.

  • 15 Feb 2026 08:25 PM (IST)

    India vs Pakistan Match LIVE: ತಿಲಕ್ ವರ್ಮಾ ಔಟ್

    ಟೀಮ್ ಇಂಡಿಯಾ 126 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. ತಿಲಕ್ ವರ್ಮಾ 24 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು.

  • 15 Feb 2026 08:09 PM (IST)

    ⁠India vs Pakistan Match Status: 13 ಓವರ್‌ಗಳು ಪೂರ್ಣ

    ಭಾರತ 13 ಓವರ್‌ಗಳ ನಂತರ 2 ವಿಕೆಟ್‌ಗಳಿಗೆ 118 ರನ್ ಗಳಿಸಿದೆ. ನಾಯಕ ಸೂರ್ಯ 14 ಮತ್ತು ತಿಲಕ್ ವರ್ಮಾ 25 ರನ್ ಗಳಿಸಿ ಆಡುತ್ತಿದ್ದಾರೆ.

  • 15 Feb 2026 07:54 PM (IST)

    ⁠India vs Pakistan Match Status: ಕಿಶನ್ ಔಟ್

    ಟೀಮ್ ಇಂಡಿಯಾ 88 ರನ್ ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ 77 ರನ್ ಗಳಿಗೆ ಔಟಾದರು. ಈ ವಿಕೆಟ್ ಅನ್ನು ಸ್ಯಾಮ್ ಅಯೂಬ್ ಪಡೆದರು.

  • 15 Feb 2026 07:35 PM (IST)

    ⁠IND vs PAK T20 World Cup: ಕಿಶನ್ ಅರ್ಧಶತಕ

    ಇಶಾನ್ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ವೇಗದಲ್ಲಿ ರನ್ ಗಳಿಸುತ್ತಿದ್ದಾರೆ.

  • 15 Feb 2026 07:35 PM (IST)

    ⁠IND vs PAK T20 World Cup: ಭಾರತದ 50 ರನ್ ಪೂರ್ಣ

    ಮೊದಲ 6 ಓವರ್‌ಗಳಲ್ಲಿ ಟೀಮ್ ಇಂಡಿಯಾ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ. ಇಶಾನ್ ಕಿಶನ್ 42 ರನ್ ಮತ್ತು ತಿಲಕ್ ವರ್ಮಾ 10 ರನ್‌ ಬಾರಿಸಿದ್ದಾರೆ.

  • 15 Feb 2026 07:28 PM (IST)

    ⁠India Team Score Now: 4 ಓವರ್‌ಗಳು ಪೂರ್ಣ

    ಮೊದಲ ನಾಲ್ಕು ಓವರ್‌ಗಳ ಅಂತ್ಯಕ್ಕೆ ಟೀಮ್ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ. ಇಶಾನ್ ಕಿಶನ್ 25 ಮತ್ತು ತಿಲಕ್ ವರ್ಮಾ 5 ರನ್ ಗಳಿಸಿದ್ದಾರೆ.

  • 15 Feb 2026 07:21 PM (IST)

    ⁠India vs Pakistan Match: ಅಭಿಷೇಕ್ ಶರ್ಮಾ ಔಟ್

    ಭಾರತ ಕೇವಲ 1 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ ಒಂದು ರನ್ ಗಳಿಸದೆ ಔಟಾದರು. ಸಲ್ಮಾನ್ ಅಘಾ ವಿಕೆಟ್ ಪಡೆದರು.

  • 15 Feb 2026 07:05 PM (IST)

    India vs Pakistan: ಮುಂದುವರಿದ ಹ್ಯಾಂಡ್‌ಶೇಕ್ ವಿವಾದ

    ಟಾಸ್ ಸಮಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಅವರೊಂದಿಗೆ ಕೈಕುಲುಕಲಿಲ್ಲ. ಕಳೆದ ವರ್ಷದ ಏಷ್ಯಾಕಪ್ ಸಮಯದಲ್ಲಿ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳಲ್ಲಿ ಭಾರತವು ಹ್ಯಾಂಡ್‌ಶೇಕ್‌ ತಪ್ಪಿಸಿತ್ತು.

  • 15 Feb 2026 06:56 PM (IST)

    IND vs PAK Live Score: ಭಾರತ ತಂಡ

    ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ.

  • 15 Feb 2026 06:55 PM (IST)

    IND vs PAK Live Score: ಪಾಕಿಸ್ತಾನ ತಂಡ

    ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಆಝಂ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಾಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

  • 15 Feb 2026 06:37 PM (IST)

    IND vs PAK Live Score: ಟಾಸ್ ಗೆದ್ದ ಪಾಕಿಸ್ತಾನ

    ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

  • 15 Feb 2026 06:23 PM (IST)

    IND vs PAK Live Score: ಕ್ರೀಡಾಂಗಣಕ್ಕೆ ಬಂದ ಟೀಂ ಇಂಡಿಯಾ

    ಸಂಜೆ 7 ಗಂಟೆಗೆ ಆರಂಭವಾಗಲಿರುವ ಈ ಪಂದ್ಯಕ್ಕಾಗಿ ಭಾರತ ತಂಡ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣಕ್ಕೆ ಆಗಮಿಸಿದೆ.

  • 15 Feb 2026 05:59 PM (IST)

    IND vs PAK Live Score: ಭಾರತ-ಪಾಕಿಸ್ತಾನ ದಾಖಲೆ

    ಇದು ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಒಂಬತ್ತನೇ ಮುಖಾಮುಖಿಯಾಗಲಿದೆ. ಹಿಂದಿನ ಎಂಟು ಪಂದ್ಯಗಳಲ್ಲಿ ಭಾರತ ಏಳರಲ್ಲಿ ಗೆದ್ದರೆ, ಪಾಕಿಸ್ತಾನ ಒಂದರಲ್ಲಿ ಗೆದ್ದಿದೆ. ಇದರರ್ಥ ಭಾರತವು ಪಾಕಿಸ್ತಾನದ ಮೇಲೆ 7-1 ಅಂತರದಲ್ಲಿ ಮೇಲುಗೈ ಸಾಧಿಸಿದೆ.

  • 15 Feb 2026 05:44 PM (IST)

    IND vs PAK Live Score: ಹವಾಮಾನ ವರದಿ

    ಬಿಬಿಸಿ ಹವಾಮಾನ ವರದಿಯ ಪ್ರಕಾರ, ಕೊಲಂಬೊದಲ್ಲಿ ಸಂಜೆ 6:30 ಕ್ಕೆ ಮಳೆಯಾಗುವ ಸಾಧ್ಯತೆ ಶೇ. 40. ಸಂಜೆ 7:30 ಕ್ಕೆ ಈ ಸಾಧ್ಯತೆ ಶೇ. 32. ರಾತ್ರಿ 8:30 ಕ್ಕೆ ಈ ಸಾಧ್ಯತೆ ಶೇ. 20 ಕ್ಕೆ ಇಳಿದಿದೆ.

Published On - Feb 15,2026 5:40 PM

Follow Us
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಕಂಗನಾ ರಣಾವತ್
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ