Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಈ ಟೂರ್ನಿಯ ಮೊದಲ ಮ್ಯಾಚ್ನಲ್ಲಿ ಆತಿಥೇಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧದ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗಾಗಿ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಮುನ್ನಡೆಸಲಿದ್ದಾರೆ. ಇನ್ನು ಗಾಯದ ಕಾರಣ ಏಕದಿನ ಸರಣಿಗಳಿಂದ ಹೊರಗುಳಿದಿದ್ದ ಕೇನ್ ವಿಲಿಯಮ್ಸನ್, ಲಾಕಿ ಫರ್ಗುಸನ್ ಹಾಗೂ ಡೆವೊನ್ ಕಾನ್ವೆ ಈ ಟೂರ್ನಿಯ ಮೂಲಕ ತಂಡಕ್ಕೆ ಮರಳಲಿದ್ದಾರೆ.
ಈ ಮೂವರು ಕೊನೆಯ ಬಾರಿ ಏಕದಿನ ಪಂದ್ಯವಾಡಿದ್ದು 2023ರ ಏಕದಿನ ವಿಶ್ವಕಪ್ನಲ್ಲಿ. ಇದೀಗ ಒಂದು ವರ್ಷದ ಬಳಿಕ ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೆ ಹಾಗೂ ಲಾಕಿ ಫರ್ಗುಸನ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಹದಿನೈದು ಸದಸ್ಯರ ಈ ತಂಡದಲ್ಲಿ ಯುವ ಆಟಗಾರ ನಾಥನ್ ಸ್ಮಿತ್ಗೂ ಸ್ಥಾನ ನೀಡಲಾಗಿದೆ. ಇದರ ಜೊತೆ ಅದ್ಭುತ ಬೌಲಿಂಗ್ ಮೂಲಕ ಸೆನ್ಸೇಷನ್ ಸೃಷ್ಟಿಸಿರುವ ವಿಲಿಯಂ ಒರೋಕ್ ಅವರನ್ನು ಸಹ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ. ಅದರಂತೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನ್ಯೂಝಿಲೆಂಡ್ ತಂಡ ಈ ಕೆಳಗಿನಂತಿದೆ…
ನ್ಯೂಝಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೊನ್ ಕಾನ್ವೆ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ವಿಲ್ ಯಂಗ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ನಾಥನ್ ಸ್ಮಿತ್, ಲಾಕಿ ಫರ್ಗುಸನ್, ಬೆನ್ ಸೀರ್ಸ್ , ವಿಲಿಯಂ ಒರೋಕ್, ಮ್ಯಾಟ್ ಹೆನ್ರಿ, ಮೈಕೆಲ್ ಬ್ರೇಸ್ವೆಲ್.