ENG vs NZ: ಸೋಲಿನ ಸುಳಿಯಲ್ಲಿರುವ ನ್ಯೂಜಿಲೆಂಡ್​ಗೆ ಆಘಾತ; ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ

| Updated By: ಪೃಥ್ವಿಶಂಕರ

Updated on: Jun 16, 2022 | 5:46 PM

ENG vs NZ: ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೇಲೆ ಕೊರೊನಾ ದಾಳಿ ಕೊನೆಗೊಂಡಿಲ್ಲ. ಕಿವೀಸ್ ತಂಡದ ಆಟಗಾರರು ಒಬ್ಬರ ನಂತರ ಒಬ್ಬರು ಕೊರೊನಾ ಹಿಡಿತಕ್ಕೆ ಒಳಗಾಗುತ್ತಿದ್ದಾರೆ.

ENG vs NZ: ಸೋಲಿನ ಸುಳಿಯಲ್ಲಿರುವ ನ್ಯೂಜಿಲೆಂಡ್​ಗೆ ಆಘಾತ; ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ
ಡೆವೊನ್ ಕಾನ್ವೇ
Follow us on

ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೇಲೆ ಕೊರೊನಾ ದಾಳಿ ಕೊನೆಗೊಂಡಿಲ್ಲ. ಕಿವೀಸ್ ತಂಡದ ಆಟಗಾರರು ಒಬ್ಬರ ನಂತರ ಒಬ್ಬರು ಕೊರೊನಾಗೆ ತುತ್ತಾಗುತ್ತಿದ್ದಾರೆ. ಈ ಪಟ್ಟಿಯಲ್ಲಿ ಹೊಸ ಹೆಸರು ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ (Devon Conway). ಕಾನ್ವೇ ಕೊರೊನಾ ಪಾಸಿಟಿವ್ (Corona positive) ಎಂದು ಕಂಡುಬಂದ ನಂತರ, ಜೂನ್ 23 ರಿಂದ ಹೆಡಿಂಗ್ಲಿಯಲ್ಲಿ ನಡೆಯಲಿರುವ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುವುದು ಅವರಿಗೆ ಕಷ್ಟಕರವಾಗಿದೆ. ಕಾನ್ವೇ ಹೊರತಾಗಿ, ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವಾಲ್ ಮತ್ತು ತಂಡದ ಇಬ್ಬರು ಸಹಾಯಕ ಸಿಬ್ಬಂದಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇವರೆಲ್ಲರನ್ನೂ ಐದು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗಿದೆ.

ನ್ಯೂಜಿಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಹೇಳಿಕೆಯಲ್ಲಿ, ಲಂಡನ್‌ಗೆ ತಲುಪಿದ ತಕ್ಷಣ ಕಾನ್ವೇ ಅವರ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರಲ್ಲದೆ, ಆಲ್‌ರೌಂಡರ್ ಬ್ರೇಸ್‌ವೆಲ್, ಫಿಸಿಯೋ ವಿಜಯ್ ವಲ್ಲಭ್, ಕಂಡೀಷನಿಂಗ್ ಕೋಚ್ ಕ್ರಿಸ್ ಡೊನಾಲ್ಡ್‌ಸನ್ ಸಹ ಕೊರೊನಾ ಸೋಂಕಿಗೆ ತುತ್ತಾಗಿದೆ. ಹಾಗಾಗಿ ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಈಗ ಎಲ್ಲಾ ಮೂವರು ಆಟಗಾರರು ಭಾನುವಾರ ಲೀಡ್ಸ್‌ಗೆ ಹೋಗಲಿದ್ದು, ತಂಡದ ಉಳಿದ ಆಟಗಾರರಿಂದ ಪ್ರತ್ಯೇಕವಾಗಿರುತ್ತಾರೆ. ಅವರು ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡರೆ, ಹೆಡಿಂಗ್ಲಿಯಲ್ಲಿ ತಂಡದ ತರಬೇತಿಗೆ ಹಾಜರಾಗುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:Ranji Trophy 2022: ರಣಜಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಬಂಗಾಳದ ಕ್ರೀಡಾ ಸಚಿವ..!

ಇದನ್ನೂ ಓದಿ
IND vs SA 4th T20 Match Live Streaming: ಸರಣಿ ಜೀವಂತವಾಗಿರಿಸಲು ಭಾರತ ಗೆಲ್ಲಲೇಬೇಕು! ಪಂದ್ಯದ ಬಗ್ಗೆ ಮಾಹಿತಿಯಿದು
Ranji Trophy 2022: ರಣಜಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಬಂಗಾಳದ ಕ್ರೀಡಾ ಸಚಿವ..!
IND vs SA: ದುಬಾರಿ ಬೌಲರ್​ಗೆ ಕೋಕ್, ಉಮ್ರಾನ್​ಗೆ ಚಾನ್ಸ್? 4ನೇ ಟಿ20ಗೆ ಭಾರತದ ಸಂಭಾವ್ಯ XI

ಕೇನ್ ವಿಲಿಯಮ್ಸನ್‌ಗೆ ಕೊರೊನಾ ಪಾಸಿಟಿವ್

ಇದಕ್ಕೂ ಮುನ್ನ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಟ್ರೆಂಟ್‌ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಕೇನ್‌ರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರು ಎರಡನೇ ಟೆಸ್ಟ್‌ನಲ್ಲಿ ಆಡಲಿಲ್ಲ. ವಿಲಿಯಮ್ಸನ್ ಕೊರೊನಾದ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಕ್ಷಿಪ್ರ ಪ್ರತಿಜನಕ ಪರೀಕ್ಷೆಯಲ್ಲಿ ಅವರ ವರದಿಯು ಪಾಸಿಟಿವ್ ಬಂದಿತು. ನಂತರ ಅವರನ್ನು ಐದು ದಿನಗಳವರೆಗೆ ಪ್ರತ್ಯೇಕವಾಗಿರಿಸಲಾಗಿತ್ತು. ನಂತರ ಕೊರೊನಾದಿಂದ ಚೇತರಿಸಿಕೊಂಡ ಕೇನ್ ತಂಡವನ್ನು ಸೇರಿಕೊಂಡಿದ್ದಾರೆ.

ನ್ಯೂಜಿಲೆಂಡ್ ಸರಣಿ ಸೋತಿದೆ

ನ್ಯೂಜಿಲೆಂಡ್ ಮೊದಲ ಮತ್ತು ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎದುರು ತಲಾ 5 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಸರಣಿ ಸೋತಿರುವ ತಂಡ ಈಗ ಕೊನೆಯ ಟೆಸ್ಟ್‌ನಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸುವ ಜವಾಬ್ದಾರಿಯಾಗಿದೆ. ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಕಿವೀಸ್ ತಂಡ ಇಂಗ್ಲೆಂಡ್ ಎದುರು 299 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು, ಜಾನಿ ಬೈರ್‌ಸ್ಟೋವ್ ಅವರ ಬಿರುಸಿನ ಇನ್ನಿಂಗ್ಸ್‌ನ ಆಧಾರದ ಮೇಲೆ ಕೊನೆಯ ದಿನ ಆತಿಥೇಯರು ಅದನ್ನು ಸಾಧಿಸಿದರು. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಜೂನ್ 23 ರಿಂದ ಲೀಡ್ಸ್‌ನಲ್ಲಿ ನಡೆಯಲಿದೆ.