NZ vs SL ICC World Cup 2023: ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್​ಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Nov 09, 2023 | 8:01 PM

New Zealand vs Sri Lanka, ICC world Cup 2023: ಏಕದಿನ ಕ್ರಿಕೆಟ್​ನಲ್ಲಿ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಇದುವರೆಗೆ 102 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ನ್ಯೂಝಿಲೆಂಡ್ 52 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ 41 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು 8 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್​ನಲ್ಲಿ ಟೈನಲ್ಲಿ ಅಂತ್ಯ ಕಂಡಿತ್ತು.

NZ vs SL ICC World Cup 2023: ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್​ಗೆ ಭರ್ಜರಿ ಜಯ
New Zealand vs Sri Lanka

ಏಕದಿನ ವಿಶ್ವಕಪ್​ನ 41ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 46.4 ಓವರ್​ಗಳಲ್ಲಿ 171 ರನ್​ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ 23.2 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ಸೆಮಿಫೈನಲ್ ಆಡುವುದು ಬಹುತೇಕ ಖಚಿತವಾಗಿದೆ.

ಏಕದಿನ ಕ್ರಿಕೆಟ್​ನಲ್ಲಿ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಇದುವರೆಗೆ 102 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ನ್ಯೂಝಿಲೆಂಡ್ 52 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ 41 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು 8 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್​ನಲ್ಲಿ ಟೈನಲ್ಲಿ ಅಂತ್ಯ ಕಂಡಿತ್ತು.

ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೆರಾ (ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ದುಶನ್ ಹೇಮಂತ, ಮಹೀಶ್ ತೀಕ್ಷಣ , ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಮತೀಶ ಪತಿರಾಣ, ಲಹಿರು ಕುಮಾರ.

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.

LIVE Cricket Score & Updates

The liveblog has ended.
  • 09 Nov 2023 07:50 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್​ಗೆ ಭರ್ಜರಿ ಜಯ

    ಶ್ರೀಲಂಕಾ ನೀಡಿದ 171 ರನ್​ಗಳ ಗುರಿಯನ್ನು 23.2 ಓವರ್​ಗಳಲ್ಲಿ ಚೇಸ್ ಮಾಡಿದ ನ್ಯೂಝಿಲೆಂಡ್.

    ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್​ಗಳ ಗೆಲುವು ದಾಖಲಿಸಿ ಸೆಮಿಫೈನಲ್​ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡ ನ್ಯೂಝಿಲೆಂಡ್ ತಂಡ.

    ಶ್ರೀಲಂಕಾ– 171 (46.4)

    ನ್ಯೂಝಿಲೆಂಡ್– 172/5 (23.2)

  • 09 Nov 2023 07:46 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್​ ತಂಡದ 5ನೇ ವಿಕೆಟ್ ಪತನ

    ಏಂಜೆಲೊ ಮ್ಯಾಥ್ಯೂಸ್ ಎಸೆದ 23ನೇ ಓವರ್​ನ 4ನೇ ಎಸೆತದಲ್ಲಿ ಕ್ಯಾಚ್ ನೀಡಿದ ಡೇರಿಲ್ ಮಿಚೆಲ್.

    31 ಎಸೆತಗಳಲ್ಲಿ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೇರಿಲ್ ಮಿಚೆಲ್.

    ಕ್ರೀಸ್​ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೆನ್ ಫಿಲಿಪ್ಸ್​ ಬ್ಯಾಟಿಂಗ್.

    NZ 164/5 (23)

      

  • 09 Nov 2023 07:28 PM (IST)

    NZ vs SL ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ 144 ರನ್ ಕಲೆಹಾಕಿದ ನ್ಯೂಝಿಲೆಂಡ್.

    3 ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾ.

    ಕ್ರೀಸ್​ನಲ್ಲಿ ಮಾರ್ಕ್​ ಚಾಪ್ಮನ್ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.

    NZ 144/3 (20)

    ನ್ಯೂಝಿಲೆಂಡ್ ತಂಡದ ಗೆಲುವಿಗೆ ಕೇವಲ 28 ರನ್​ಗಳ ಅವಶ್ಯಕತೆ.

      

  • 09 Nov 2023 07:03 PM (IST)

    NZ vs SL ICC World Cup 2023 Live Score: ಶತಕ ಪೂರೈಸಿದ ನ್ಯೂಝಿಲೆಂಡ್

    15 ಓವರ್​ಗಳ ಮುಕ್ತಾಯದ ವೇಳೆಗೆ 103 ರನ್ ಕಲೆಹಾಕಿದ ನ್ಯೂಝಿಲೆಂಡ್.

    2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಶ್ರೀಲಂಕಾ ತಂಡ.

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.

    NZ 103/2 (15)

     ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಔಟ್.

  • 09 Nov 2023 06:55 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್​ನ 2ನೇ ವಿಕೆಟ್ ಪತನ

    ಮಹೀಶ್ ತೀಕ್ಷಣ ಎಸೆದ 14ನೇ ಓವರ್​ನ 3ನೇ ಎಸೆತದಲ್ಲಿ ಕ್ಯಾಚ್ ನೀಡಿದ ರಚಿನ್ ರವೀಂದ್ರ.

    34 ಎಸೆತಗಳಲ್ಲಿ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಯುವ ಎಡಗೈ ದಾಂಡಿಗ.

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.

    NZ 88/2 (13.3)

      

  • 09 Nov 2023 06:48 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್ ಮೊದಲ ವಿಕೆಟ್ ಪತನ

    ದುಷ್ಮಂತ ಚಮೀರಾ ಎಸೆದ 13ನೇ ಓವರ್​ನ 2ನೇ ಎಸೆತದಲ್ಲಿ ಫ್ರಂಟ್​ ಫೀಲ್ಡರ್​ಗೆ ಕ್ಯಾಚ್ ನೀಡಿದ ಡೆವೊನ್ ಕಾನ್ವೆ.

    42 ಎಸೆತಗಳಲ್ಲಿ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೆವೊನ್ ಕಾನ್ವೆ.

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.

    NZ 86/1 (13)

      

      

  • 09 Nov 2023 06:39 PM (IST)

    NZ vs SL ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 73 ರನ್ ಕಲೆಹಾಕಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ (44) ಹಾಗೂ ರಚಿನ್ ರವೀಂದ್ರ (29) ಬ್ಯಾಟಿಂಗ್.

    NZ 73/0 (10)

    ನ್ಯೂಝಿಲೆಂಡ್​ಗೆ 171 ರನ್ ​ಗಳ ಗುರಿ ನೀಡಿರುವ ಶ್ರೀಲಂಕಾ.

      

  • 09 Nov 2023 06:25 PM (IST)

    NZ vs SL ICC World Cup 2023 Live Score: ಭರ್ಜರಿ ಸಿಕ್ಸರ್

    ಧನಂಜಯ ಡಿಸಿಲ್ವಾ ಎಸೆದ 8ನೇ ಓವರ್​ನ 3ನೇ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರಚಿನ್ ರವೀಂದ್ರ.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.

    NZ 63/0 (8)

      

      

  • 09 Nov 2023 06:22 PM (IST)

    NZ vs SL ICC World Cup 2023 Live Score: ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್

    ದಿಲ್ಶನ್ ಮಧುಶಂಕ ಎಸೆದ 7ನೇ ಓವರ್​ನ 2ನೇ ಮತ್ತು 3ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್​ಗಳನ್ನು ಬಾರಿಸಿದ ಡೆವೊನ್ ಕಾನ್ವೆ,

    ಈ ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್ ತಂಡ.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.

    NZ 51/0 (7)

      

  • 09 Nov 2023 06:13 PM (IST)

    NZ vs SL ICC World Cup 2023 Live Score: 5 ಓವರ್​ಗಳು ಮುಕ್ತಾಯ

    ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 5ನೇ ಓವರ್​ನಲ್ಲಿ ಮೂರು ಫೋರ್​ಗಳನ್ನು ಬಾರಿಸಿದ ಡೆವೊನ್ ಕಾನ್ವೆ.

    5 ಓವರ್​ಗಳ ಮುಕ್ತಾಯದ ವೇಳೆಗೆ 32 ರನ್ ಕಲೆಹಾಕಿದ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.

    NZ 32/0 (5)

      

  • 09 Nov 2023 06:01 PM (IST)

    NZ vs SL ICC World Cup 2023 Live Score: ಆಕರ್ಷಕ ಬೌಂಡರಿ

    ಮಹೀಶ್ ತೀಕ್ಷಣ ಎಸೆದ 2ನೇ ಓವರ್​ನ ಕೊನೆಯ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಎಡಗೈ ದಾಂಡಿಗ ರಚಿನ್ ರವೀಂದ್ರ.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.

    NZ 12/0 (2)

      

  • 09 Nov 2023 05:57 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್​ ಇನಿಂಗ್ಸ್​ ಆರಂಭ

    ದಿಲ್ಶನ್ ಮಧುಶಂಕ ಎಸೆದ ಮೊದಲ ಓವರ್​ನ 5ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಫೋರ್ ಬಾರಿಸಿದ ಡೆವೊನ್ ಕಾನ್ವೆ.

    ಇದು ನ್ಯೂಝಿಲೆಂಡ್ ಇನಿಂಗ್ಸ್​ನ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.

    NZ 4/0 (1)

      

  • 09 Nov 2023 05:32 PM (IST)

    NZ vs SL ICC World Cup 2023 Live Score: ಅಲ್ಪ ಮೊತ್ತ ಶ್ರೀಲಂಕಾ ಆಲೌಟ್

    46.4 ಓವರ್​ಗಳಲ್ಲಿ 171 ರನ್​ಗಳಿಗೆ ಆಲೌಟ್ ಆದ ಶ್ರೀಲಂಕಾ.

    ಶ್ರೀಲಂಕಾ ಪರ ಕುಸಾಲ್ ಪೆರೇರಾ (51) ಗರಿಷ್ಠ ಸ್ಕೋರರ್.

    ನ್ಯೂಝಿಲೆಂಡ್ ಪರ 10 ಓವರ್​ಗಳಲ್ಲಿ 37 ರನ್ ನೀಡಿದ 3 ವಿಕೆಟ್ ಪಡೆದು ಮಿಂಚಿದ ಟ್ರೆಂಟ್ ಬೌಲ್ಟ್​.

    ಶ್ರೀಲಂಕಾ– 171 (46.4)

    ನ್ಯೂಝಿಲೆಂಡ್ ತಂಡಕ್ಕೆ 172 ರನ್​ಗಳ ಸುಲಭ ಗುರಿ ನೀಡಿದ ಶ್ರೀಲಂಕಾ.

      

  • 09 Nov 2023 04:24 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್ ಭರ್ಜರಿ ಬೌಲಿಂಗ್

    32 ಓವರ್​ಗಳ ಮುಕ್ತಾಯದ ವೇಳೆಗೆ 128 ರನ್ ಕಲೆಹಾಕಿದ ಶ್ರೀಲಂಕಾ ತಂಡ.

    8 ವಿಕೆಟ್ ಕಬಳಿಸಿರುವ ನ್ಯೂಝಿಲೆಂಡ್ ತಂಡದ ಬೌಲರ್​ಗಳು.

    ಕ್ರೀಸ್​ನಲ್ಲಿ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.

    SL 128/8 (32)

      

  • 09 Nov 2023 03:59 PM (IST)

    NZ vs SL ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 114 ರನ್​ ಕಲೆಹಾಕಿದ ಶ್ರೀಲಂಕಾ.

    8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್​ಗಳು.

    ಕ್ರೀಸ್​ನಲ್ಲಿ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.

    SL 114/8 (25)

    ಪಾತುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವಾ, ಕುಸಾಲ್ ಪೆರೇರಾ ಹಾಗೂ ಚಮಿಕಾ ಕರುಣರತ್ನೆ ಔಟ್.

      

  • 09 Nov 2023 03:52 PM (IST)

    NZ vs SL ICC World Cup 2023 Live Score: ಶ್ರೀಲಂಕಾದ 8ನೇ ವಿಕೆಟ್ ಪತನ

    ಲಾಕಿ ಫರ್ಗುಸನ್ ಎಸೆದ 24ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಚಮಿಕಾ ಕರುಣರತ್ನೆ.

    ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ.

    ಕ್ರೀಸ್​ನಲ್ಲಿ ಮಹೀಶ್ ತೀಕ್ಷಣ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.

    SL 113/8 (24)

      

      

  • 09 Nov 2023 03:37 PM (IST)

    NZ vs SL ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 111 ರನ್​ ಕಲೆಹಾಕಿದ ಶ್ರೀಲಂಕಾ ತಂಡ.

    ಈಗಾಗಲೇ 7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್​ಗಳು.

    ಕ್ರೀಸ್​ನಲ್ಲಿ ಮಹೀಶ್ ತೀಕ್ಷಣ ಹಾಗೂ ಚಮಿಕಾ ಕರುಣರತ್ನೆ ಬ್ಯಾಟಿಂಗ್.

    SL 111/7 (20)

     ಪಾತುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವಾ ಹಾಗೂ ಕುಸಾಲ್ ಪೆರೇರಾ ಔಟ್.

  • 09 Nov 2023 03:30 PM (IST)

    NZ vs SL ICC World Cup 2023 Live Score: ಶ್ರೀಲಂಕಾದ 7ನೇ ವಿಕೆಟ್ ಪತನ

    ಮಿಚೆಲ್ ಸ್ಯಾಂಟ್ನರ್ ಎಸೆದ 19ನೇ ಓವರ್​ನ 3ನೇ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ಧನಂಜಯ ಡಿಸಿಲ್ವಾ.

    24 ಎಸೆತಗಳಲ್ಲಿ 19 ರನ್​ ಗಳಿಸಿ ವಿಕೆಟ್ ಒಪ್ಪಿಸಿದ ಧನಂಜಯ ಡಿಸಿಲ್ವಾ.

    ಕ್ರೀಸ್​ನಲ್ಲಿ ಮಹೀಶ್ ತೀಕ್ಷಣ ಹಾಗೂ ಚಮಿಕಾ ಕರುಣರತ್ನೆ ಬ್ಯಾಟಿಂಗ್.

    SL 105/7 (19)

      

      

  • 09 Nov 2023 03:23 PM (IST)

    NZ vs SL ICC World Cup 2023 Live Score: ಶ್ರೀಲಂಕಾದ 6ನೇ ವಿಕೆಟ್ ಪತನ

    ಮಿಚೆಲ್ ಸ್ಯಾಂಟ್ನರ್ ಎಸೆದ 17ನೇ ಓವರ್​ನ 4ನೇ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ಏಂಜೆಲೊ ಮ್ಯಾಥ್ಯೂಸ್.

    27 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮ್ಯಾಥ್ಯೂಸ್.

    ಕ್ರೀಸ್​ನಲ್ಲಿ ಧನಂಜಯ ಡಿಸಿಲ್ವಾ ಹಾಗೂ ಚಮಿಕಾ ಕರುಣರತ್ನೆ ಬ್ಯಾಟಿಂಗ್.

    SL 104/6 (17)

      

      

  • 09 Nov 2023 03:18 PM (IST)

    NZ vs SL ICC World Cup 2023 Live Score: ಶತಕ ಪೂರೈಸಿದ ಶ್ರೀಲಂಕಾ

    ಟಿಮ್ ಸೌಥಿ ಎಸೆದ 16ನೇ ಓವರ್​ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಧನಂಜಯ ಡಿಸಿಲ್ವಾ.

    ಈ ಸಿಕ್ಸ್​ನೊಂದಿಗೆ ಶತಕ ಪೂರೈಸಿದ ಶ್ರೀಲಂಕಾ ತಂಡ.

    ಕ್ರೀಸ್​ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.

    SL 102/5 (16)

      

  • 09 Nov 2023 03:12 PM (IST)

    NZ vs SL ICC World Cup 2023 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳಲ್ಲಿ 95 ರನ್​ ಕಲೆಹಾಕಿದ ಶ್ರೀಲಂಕಾ ತಂಡ.

    ಪವರ್​ಪ್ಲೇನಲ್ಲೇ 5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನ್ಯೂಝಿಲೆಂಡ್ ಬೌಲರ್​ಗಳು.

    ಕ್ರೀಸ್​ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.

    SL 95/5 (15)

    ಪಾತುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಔಟ್.

      

  • 09 Nov 2023 03:04 PM (IST)

    NZ vs SL ICC World Cup 2023 Live Score: ಶ್ರೀಲಂಕಾ ಎಚ್ಚರಿಕೆಯ ಬ್ಯಾಟಿಂಗ್

    ಕೇವಲ 85 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ತಂಡ.

    ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್​ಗಳು.

    ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿರುವ ಲಂಕಾ ತಂಡದ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.

    SL 85/5 (13)

      

  • 09 Nov 2023 02:51 PM (IST)

    NZ vs SL ICC World Cup 2023 Live Score: ಶ್ರೀಲಂಕಾದ 5ನೇ ವಿಕೆಟ್ ಪತನ

    ಲಾಕಿ ಫರ್ಗುಸನ್ ಎಸೆದ 10ನೇ ಓವರ್​ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಕುಸಾಲ್ ಪೆರೇರಾ.

    28 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕುಸಾಲ್ ಪೆರೇರಾ.

    10 ಓವರ್​ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 74 ರನ್ ಕಲೆಹಾಕಿದ ಶ್ರೀಲಂಕಾ.

    SL 74/5 (10)

      

  • 09 Nov 2023 02:43 PM (IST)

    NZ vs SL ICC World Cup 2023 Live Score: ಶ್ರೀಲಂಕಾದ 4ನೇ ವಿಕೆಟ್ ಪತನ

    ಟ್ರೆಂಟ್ ಬೌಲ್ಟ್ ಎಸೆದ 9ನೇ ಓವರ್​ನ 2ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದ ಚರಿತ್ ಅಸಲಂಕಾ.

    8 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಚರಿತ್ ಅಸಲಂಕಾ.

    ಕ್ರೀಸ್​ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 70/4 (9)

      

      

  • 09 Nov 2023 02:39 PM (IST)

    NZ vs SL ICC World Cup 2023 Live Score: ಅರ್ಧಶತಕ ಪೂರೈಸಿದ ಪೆರೇರಾ

    ಲಾಕಿ ಫರ್ಗುಸನ್ ಎಸೆದ 8ನೇ ಓವರ್​ನ ಮೂರನೇ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ಕುಸಾಲ್ ಪೆರೇರಾ.

    ಈ ಫೋರ್​ನೊಂದಿಗೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೆರೇರಾ.

    ಕ್ರೀಸ್​ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 70/3 (8)

      

  • 09 Nov 2023 02:32 PM (IST)

    NZ vs SL ICC World Cup 2023 Live Score: ಪೆರೇರಾ ಭರ್ಜರಿ ಬ್ಯಾಟಿಂಗ್

    ಟಿಮ್ ಸೌಥಿ ಎಸೆದ 6ನೇ ಓವರ್​ನಲ್ಲಿ 1 ಭರ್ಜರಿ ಸಿಕ್ಸ್​ ಹಾಗೂ 3 ಫೋರ್​ಗಳೊಂದಿಗೆ 18 ರನ್ ಚಚ್ಚಿದ ಕುಸಾಲ್ ಪೆರೇರಾ.

    17 ಎಸೆತಗಳಲ್ಲಿ 39 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಪೆರೇರಾ.

    ಕ್ರೀಸ್​ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 52/3 (6)

      

  • 09 Nov 2023 02:27 PM (IST)

    NZ vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್

    ಟ್ರೆಂಟ್ ಬೌಲ್ಟ್ ಎಸೆದ 5ನೇ ಓವರ್​ನ ಮೊದಲ ಎಸೆತದಲ್ಲೇ ರಚಿನ್ ರವೀಂದ್ರಗೆ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್.

    7 ಎಸೆತಗಳಲ್ಲಿ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್.

    4ನೇ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ಹೊರ ನಡೆದ ಸದೀರ ಸಮರವಿಕ್ರಮ (1).

    ಕ್ರೀಸ್​ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 34/3 (5)

      

  • 09 Nov 2023 02:21 PM (IST)

    NZ vs SL ICC World Cup 2023 Live Score: ಪೆರೇರಾ ಪವರ್-ಸಿಕ್ಸ್

    ಟಿಮ್ ಸೌಥಿ ಎಸೆದ 4ನೇ ಓವರ್​ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಪೆರೇರಾ.

    5ನೇ ಎಸೆತದಲ್ಲಿ ಪೆರೇರಾ ಬ್ಯಾಟ್​ನಿಂದ ಮತ್ತೊಂದು ಫೋರ್.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 30/1 (4)

      

  • 09 Nov 2023 02:16 PM (IST)

    NZ vs SL ICC World Cup 2023 Live Score: ಮೊದಲ ಬೌಂಡರಿ

    ಟ್ರೆಂಟ್ ಬೌಲ್ಟ್ ಎಸೆದ 3ನೇ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಕುಸಾಲ್ ಪೆರೇರಾ.

    ಇದು ಶ್ರೀಲಂಕಾ ಇನಿಂಗ್ಸ್​ನ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 15/1 (3)

      

  • 09 Nov 2023 02:11 PM (IST)

    NZ vs SL ICC World Cup 2023 Live Score: ಶ್ರೀಲಂಕಾದ ಮೊದಲ ವಿಕೆಟ್ ಪತನ

    ಟಿಮ್ ಸೌಥಿ ಎಸೆದ 2ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.

    8 ಎಸೆತಗಳಲ್ಲಿ 2 ರನ್​ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ.

    ನ್ಯೂಝಿಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಅನುಭವಿ ಬೌಲರ್ ಟಿಮ್ ಸೌಥಿ.

    SL 3/1 (2)

      

      

  • 09 Nov 2023 02:07 PM (IST)

    Karnataka Breaking News Live: ​ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯ ವೇಳೆ ಹೃದಯಾಘಾತವಾಗಿ ವ್ಯಾಪಾರಿ ಸಾವು

    ಬೆಂಗಳೂರಿನ ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವೇಳೆ ಹೃದಯಾಘಾತದಿಂದ ವ್ಯಾಪಾರಿ ಕೃಷ್ಣ(49) ಮೃತಪಟ್ಟಿದ್ದಾರೆ. ಜಯನಗರದಲ್ಲಿ ಕಳೆದ 25 ವರ್ಷಗಳಿಂದ ತಾಯಿ ರತ್ನಮ್ಮ ಜೊತೆ ವ್ಯಾಪಾರಕ್ಕೆ ಸಹಾಯ ಮಾಡ್ತಿದ್ದ ಕೃಷ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

  • 09 Nov 2023 02:07 PM (IST)

    NZ vs SL ICC World Cup 2023 Live Score: ಶ್ರೀಲಂಕಾ ಇನಿಂಗ್ಸ್​ ಆರಂಭ

    ಮೊದಲ ಓವರ್​ನಲ್ಲಿ ಕೇವಲ 1 ರನ್ ನೀಡಿದ ಎಡಗೈ ವೇಗಿ ಟ್ರೆಂಟ್ ಬೌಲ್ಟ್​.

    ಕ್ರೀಸ್​ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಪೆರೇರಾ ಬ್ಯಾಟಿಂಗ್.

    SL 1/0 (1)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡುತ್ತಿರುವ ನ್ಯೂಝಿಲೆಂಡ್ ತಂಡ.

      

  • 09 Nov 2023 01:57 PM (IST)

    Karnataka Breaking News Live: ಪಾಟೀಲ್​ ಬಂಧನದಲ್ಲಿ ಎಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಗೃಹ ಇಲಾಖೆ ಕ್ರಮ

    ಕೆಇಎ ಪರೀಕ್ಷೆ ಅಕ್ರಮದ ಆರೋಪಿ R.D.ಪಾಟೀಲ್ ನಾಪತ್ತೆ ಪ್ರಕರಣ ಸಂಬಂಧ ಪಾಟೀಲ್​ ಬಂಧನದಲ್ಲಿ ಎಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಅಫಜಲಪುರ ಸಿಪಿಐ ಪಂಡಿತ್ ಸಗರಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. R.D.ಪಾಟೀಲ್ ಬಂಧನಕ್ಕೆ ತೆರಳಿದ್ದ ಅಫಜಲಪುರ ಸಿಪಿಐ ಪಂಡಿತ್ ಸಗರ ಅವರು ಬಂಧಿಸಲು ತೆರಳಿದ್ದ ವೇಳೆಯಲ್ಲೇ ಆರೋಪಿ ಎಸ್ಕೇಪ್ ಆಗಿದ್ದ. ಪಾರ್ಟ್‌ಮೆಂಟ್ ಗೋಡೆ ಹಾರಿ ಎಸ್ಕೇಪ್ ಆಗಿದ್ದ. ಪಂಡಿತ್​ಗೆ 10.30ಕ್ಕೆ ಮಾಹಿತಿ ನೀಡಿದ್ರೂ ಆರೋಪಿ ಹಿಡಿಯಲು ತಡವಾಗಿ ಸ್ಥಳಕ್ಕೆ ಆಗಮಿಸಿದ್ದರು. ಹೀಗಾಗಿ ಕಾರಣ ಹೇಳಿ ನೋಟಿಸ್ ಜಾರಿ ಮಾಡಲಾಗಿದೆ.

  • 09 Nov 2023 01:39 PM (IST)

    Karnataka Breaking News Live: ದೆಹಲಿಗೆ ಹೋಗಿದ್ದರ ಹಿಂದಿನ ಕಾರಣ ಬಿಚ್ಟಿಟ್ಟ ಡಿಸಿಎಂ ಡಿಕೆಶಿ

  • 09 Nov 2023 01:38 PM (IST)

    NZ vs SL ICC World Cup 2023 Live Score: ಶ್ರೀಲಂಕಾ​ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

  • 09 Nov 2023 01:37 PM (IST)

    NZ vs SL ICC World Cup 2023 Live Score: ನ್ಯೂಝಿಲೆಂಡ್​ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.

  • 09 Nov 2023 01:34 PM (IST)

    NZ vs SL ICC World Cup 2023 Live Score: ಟಾಸ್ ಗೆದ್ದ ನ್ಯೂಝಿಲೆಂಡ್

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • Published On - Nov 09,2023 1:33 PM

    Follow us
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು