T20 World Cup: ಟಿ20 ವಿಶ್ವಕಪ್‌ಗೆ 16 ಅಂಪೈರ್‌ಗಳ ಆಯ್ಕೆ; ಭಾರತ- ಪಾಕ್ ಪಂದ್ಯಕ್ಕೆ ಅಂಪೈರ್ಸ್ ಯಾರು?
T20 World Cup: ಐಸಿಸಿ ಪ್ರಕಟಿಸಿದ 16 ಅಂಪೈರ್‌ಗಳ ಎಲೈಟ್ ಪ್ಯಾನೆಲ್‌ನಲ್ಲಿರುವ ಏಕೈಕ ಭಾರತೀಯ ನಿತಿನ್ ಮೆನನ್. ಟಿ20 ವಿಶ್ವಕಪ್‌ನಲ್ಲಿ ಅಂಪೈರಿಂಗ್ ಮಾಡುವ ಉದ್ದೇಶದಿಂದ ನಿತಿನ್ ಮೆನನ್ ಕೂಡ ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದಾರೆ.

ಬಹು ನಿರೀಕ್ಷಿತ ಟಿ20 ವಿಶ್ವಕಪ್ (T20 World Cup) ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿರುವ ಈ ಪಂದ್ಯಗಳ ಅಂಗವಾಗಿ 8 ತಂಡಗಳು ಗುಂಪು ಮಟ್ಟದಲ್ಲಿ ಮತ್ತು 8 ತಂಡಗಳು ಸೂಪರ್ 12 ರಲ್ಲಿ ಆಡಲಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ವಿಶೇಷವಾಗಿ ತಂಡದ ಆಟಗಾರರನ್ನು ಹೊರತುಪಡಿಸಿ, ಮೈದಾನದಲ್ಲಿ ಪಂದ್ಯ ನಡೆಯುವಾಗ ಅಂಪೈರ್ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಟಿ20 ವಿಶ್ವಕಪ್‌ಗೆ ವಿವಿಧ ದೇಶಗಳ ಒಟ್ಟು 16 ಮಂದಿ ಅಂಪೈರ್‌ಗಳನ್ನು ಐಸಿಸಿ ಆಯ್ಕೆ ಮಾಡಿದೆ. ಅವರಲ್ಲಿ ಭಾರತದ ನಿತಿನ್ ಮೆನನ್ ಕೂಡ ಇದ್ದಾರೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯದಲ್ಲಿ ಯಾರು ಅಂಪೈರಿಂಗ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಈಗಾಗಲೇ ಹೊರಬಿದ್ದಿದೆ.
ಐಸಿಸಿ ಪ್ರಕಟಿಸಿದ 16 ಅಂಪೈರ್‌ಗಳ ಎಲೈಟ್ ಪ್ಯಾನೆಲ್‌ನಲ್ಲಿರುವ ಏಕೈಕ ಭಾರತೀಯ ನಿತಿನ್ ಮೆನನ್. ಟಿ20 ವಿಶ್ವಕಪ್‌ನಲ್ಲಿ ಅಂಪೈರಿಂಗ್ ಮಾಡುವ ಉದ್ದೇಶದಿಂದ ನಿತಿನ್ ಮೆನನ್ ಕೂಡ ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದಾರೆ. ಇವರಲ್ಲದೇ ಪ್ಯಾನೆಲ್‌ನಲ್ಲಿ ಮೂವರು ಅಂಪೈರ್‌ಗಳಿದ್ದು, ಅವರಿಗೆ ಇದು 7ನೇ ವಿಶ್ವಕಪ್. ಅಂದರೆ ಅವರು ಐಸಿಸಿ ಈವೆಂಟ್‌ಗಳಲ್ಲಿ ಸಾಕಷ್ಟು ಅನುಭವವನ್ನು ಹೊಂದಿರುತ್ತಾರೆ.
16 ಅಂಪೈರ್‌ಗಳ ಪಟ್ಟಿ ಪ್ರಕಟಿಸಿದ ಐಸಿಸಿ
ಐಸಿಸಿ ಮೊದಲ ಸುತ್ತಿನ ಮತ್ತು ಸೂಪರ್ 12 ಹಂತದ ಪಂದ್ಯಗಳ ಅಂಪೈರ್‌ಗಳ ಹೆಸರನ್ನು ಪ್ರಕಟಿಸಿದೆ. ಸೆಮಿ-ಫೈನಲ್ ಮತ್ತು ಫೈನಲ್‌ಗೆ ಅಂಪೈರ್‌ಗಳನ್ನು ನಂತರ ಪ್ರಕಟಿಸಲಾಗುವುದು. ಈ ಬಗ್ಗೆ ಐಸಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಟೂರ್ನಮೆಂಟ್‌ನಲ್ಲಿ ಒಟ್ಟು 16 ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ. ಇವರಲ್ಲಿ ರಿಚರ್ಡ್ ಕೆಟಲ್‌ಬರೋ, ನಿತಿನ್ ಮೆನನ್, ಕುಮಾರ್ ಧರ್ಮಸೇನಾ ಮತ್ತು ಮರೈಸ್ ಎರಾಸ್ಮಸ್ ಅವರು 2021 ರ ಫೈನಲ್‌ನಲ್ಲಿ ಅಂಪೈರ್ ಮಾಡಿದ ಅನುಭವ ಹೊಂದಿದ್ದಾರೆ.
ಮ್ಯಾಚ್ ರೆಫರಿ ಯಾರು?
ಐಸಿಸಿ ಮ್ಯಾಚ್ ರೆಫರಿ ಪ್ಯಾನೆಲ್‌ನ ಮುಖ್ಯ ರೆಫರಿ ರಂಜನ್ ಮದುಗಲೆ ಕೂಡ ಈ ಟಿ20 ವಿಶ್ವಕಪ್‌ನ ಭಾಗವಾಗಲಿದ್ದಾರೆ. ಇವರಲ್ಲದೆ, ಜಿಂಬಾಬ್ವೆ ಇಂಗ್ಲೆಂಡ್‌ನ ಕ್ರಿಸ್ಟೋಫರ್ ಬ್ರಾಡ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ಬೂನ್ ಕೂಡ ಮ್ಯಾಚ್ ರೆಫರಿ ಪ್ಯಾನೆಲ್‌ನಲ್ಲಿ ಸೇರ್ಪಡೆಗೊಳ್ಳಲಿದ್ದಾರೆ.
ಎರಾಸ್ಮಸ್, ಟಕರ್ ಮತ್ತು ಅಲೀಮ್ ದಾರ್ಗೆ ಇದು 7 ನೇ ವಿಶ್ವಕಪ್
ಅಕ್ಟೋಬರ್ 16 ರಂದು ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಮೊದಲ ಸುತ್ತಿನ ಪಂದ್ಯಕ್ಕೆ ಪೈಕ್ರಾಫ್ಟ್ ರೆಫರಿಯಾಗಿರುತ್ತಾರೆ. ಪಾಲ್ ರೀಫೆಲ್ ಟಿವಿ ಅಂಪೈರ್ ಆಗಿದ್ದು, ಎರಾಸ್ಮಸ್ ನಾಲ್ಕನೇ ಅಂಪೈರ್ ಆಗಲಿದ್ದಾರೆ. ಇದು ಎರಾಸ್ಮಸ್, ಟಕರ್ ಮತ್ತು ಅಲೀಮ್ ದಾರ್ ಅವರ ಏಳನೇ ಟಿ 20 ವಿಶ್ವಕಪ್ ಎಂಬುದು ವಿಶೇಷವಾಗಿದೆ.
ಇಂಡೋ-ಪಾಕ್ ಪಂದ್ಯಕ್ಕೆ ಅಂಪೈರ್ ಯಾರು?
ಈಗ ಪ್ರಶ್ನೆ ಏನೆಂದರೆ, ಅಕ್ಟೋಬರ್ 23 ರಂದು ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾದಾಗ ಆನ್-ಫೀಲ್ಡ್ ಅಂಪೈರ್ ಯಾರು ಎಂಬುದಾಗಿದೆ? ವರದಿಗಳ ಪ್ರಕಾರ, ಈ ಹೈ ವೋಲ್ಟೇಜ್ ಪಂದ್ಯದಲ್ಲಿ ರಾಡ್ನಿ ಟಕರ್ ಮತ್ತು ಮರೈಸ್ ಎರಾಸ್ಮಸ್ ಆನ್-ಫೀಲ್ಡ್ ಅಂಪೈರ್‌ಗಳಾಗಿರುತ್ತಾರೆ.
ಟಿ20 ವಿಶ್ವಕಪ್‌ನ 16 ಅಂಪೈರ್‌ಗಳು
ಆಡ್ರಿಯನ್ ಹೋಲ್ಡ್‌ಸ್ಟಾಕ್, ಅಲೀಮ್ ದಾರ್, ಅಹ್ಸಾನ್ ರಜಾ, ಕ್ರಿಸ್ಟೋಫರ್ ಬ್ರೌನ್, ಕ್ರಿಸ್ಟೋಫರ್ ಗ್ಯಾಫ್ನಿ, ಜೋಯಲ್ ವಿಲ್ಸನ್, ಕುಮಾರ್ ಧರ್ಮಸೇನಾ, ಲ್ಯಾಂಗ್ಟನ್ ರೌಸೆರ್, ಮರೈಸ್ ಎರಾಸ್ಮಸ್, ಮೈಕೆಲ್ ಗಾಫ್, ನಿತಿನ್ ಮೆನನ್, ಪಾಲ್ ರೀಫೆಲ್, ಪಾಲ್ ವಿಲ್ಸನ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋಕ್
