ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಯಾರು ಊಹಿಸದ ಅನಗತ್ಯ ದಾಖಲೆ ಬರೆದ ಭಾರತ..!
ODI World Cup 2023: ಆಸ್ಟ್ರೇಲಿಯಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಭಾರತ ಕೇವಲ 2 ಓವರ್‌ಗಳಲ್ಲಿ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಮತ್ತು ನಂತರ ಶ್ರೇಯಸ್ ಅಯ್ಯರ್ ಅವರ ವಿಕೆಟ್ಗಳನ್ನು ಶೂನ್ಯಕ್ಕೆ ಕಳೆದುಕೊಂಡಿತು. ಈ ಮೂಲಕ ಏಕದಿನ ಮಾದರಿಯ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಭಾರತ ತಂಡ ಈ ಬೇಡದ ದಾಖಲೆಯನ್ನು ತಲೆ ಖಾತೆಗೆ ಹಾಕಿಕೊಂಡಿತು.
ಐಸಿಸಿ ವಿಶ್ವಕಪ್‌ನಲ್ಲಿ (World Cup 2023) ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು (India vs Australia) 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐದು ಬಾರಿಯ ಚಾಂಪಿಯನ್ಗಳಿಗೆ ಸೋಲಿನ ಶಾಕ್ ನೀಡಿದೆ. ಆದರೆ ಇದೇ ಪಂದ್ಯದಲ್ಲಿ ಭಾರತ ತಂಡ ನಾಚಿಕೆಗೇಡಿನ ದಾಖಲೆ ಕೂಡ ಬರೆದಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಭಾರತ ಕೇವಲ 2 ಓವರ್‌ಗಳಲ್ಲಿ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಮತ್ತು ನಂತರ ಶ್ರೇಯಸ್ ಅಯ್ಯರ್ ( Rohit Sharma, Ishan Kishan, and Shreyas Iyer) ಅವರ ವಿಕೆಟ್ಗಳನ್ನು ಶೂನ್ಯಕ್ಕೆ ಕಳೆದುಕೊಂಡಿತು. ಈ ಮೂಲಕ ಏಕದಿನ ಮಾದರಿಯ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಭಾರತ ತಂಡ ಈ ಬೇಡದ ದಾಖಲೆಯನ್ನು ತಲೆ ಖಾತೆಗೆ ಹಾಕಿಕೊಂಡಿತು.
ಆಸೀಸ್ ಪೆವಿಲಿಯನ್ ಪರೇಡ್
ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭಾರತದ ಬೌಲರ್ಗಳ ಮಾರಕ ದಾಳಿಯ ಮುಂದೆ ಸಂಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ ಕೇವಲ 199 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ 41 ರನ್ ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸ್ಟೀವ್ ಸ್ಮಿತ್ 46 ರನ್ ಬಾರಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಲಬುಶೇನ್ 27 ರನ್ ಹಾಗೂ ಮಿಚೆಲ್ ಸ್ಟಾರ್ಕ್ 28 ರನ್ಗಳ ಕೊಡುಗೆ ನೀಡಿದರು. ಟೀಂ ಇಂಡಿಯಾ ಪರ ಮ್ಯಾಜಿಕ್ ಮಾಡಿದ ಜಡೇಜಾ 3 ವಿಕೆಟ್, ಬುಮ್ರಾ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಸಿರಾಜ್, ಪಾಂಡ್ಯ, ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
0,0,0.. ಭಾರತಕ್ಕೆ ಆಘಾತ; ಖಾತೆಯನ್ನೇ ತೆರೆಯದ ಕಿಶನ್, ರೋಹಿತ್, ಶ್ರೇಯಸ್..!
ಗೆಲುವಿನ ದಡ ಸೇರಿಸಿದ ಕೊಹ್ಲಿ- ರಾಹುಲ್
ಆಸೀಸ್ ತಂಡವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕಿದ್ದರಿಂದ ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಭಾರತದ ಇನ್ನಿಂಗ್ಸ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಒಂದರ ಮೇಲೆ ಒಂದರಂತೆ ಆಘಾತ ಎದುರಾಯಿತು. ತಂಡದ ಮೂವರು ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಒಂದು ಓವರ್ಗಳ ಅಂತರದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, 4ನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಕೂಡ ಖಾತೆ ತೆರೆಯಲ್ಲಿಲ್ಲ. ಹೀಗಾಗಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಆ ಬಳಿಕ ಜೊತೆಯಾದ ಕೊಹ್ಲಿ ಹಾಗೂ ರಾಹುಲ್ ದಾಖಲೆಯ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ವಿಶ್ವಕಪ್‌ನಲ್ಲಿ ಬೇಡದ ದಾಖಲೆ
ತಂಡದ ಆರಂಭಿಕರಿಬ್ಬರು ಶೂನ್ಯ ಸುತ್ತುವ ಮೂಲಕ ವಿಶ್ವಕಪ್‌ನಲ್ಲಿ ಬೇಡದ ದಾಖಲೆ ನಿರ್ಮಿಸಿದ್ದಾರೆ. ವಾಸ್ತವವಾಗಿ ಭಾರತದ ಆರಂಭಿಕರಿಬ್ಬರೂ ಶೂನ್ಯಕ್ಕೆ ಔಟಾಗಿರುವುದು ವಿಶ್ವಕಪ್ ಇತಿಹಾಸದಲ್ಲಿ ಇದು ಎರಡನೇ ಬಾರಿ. ಇದಕ್ಕೂ ಮೊದಲು 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಆರಂಭಿಕರು ಡಕ್‌ಗೆ ಔಟಾಗಿದ್ದರು.
ಏಕದಿನ ಇತಿಹಾಸದಲ್ಲಿ ಮೊದಲ ಸಲ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡಕ್ಕೆ ಇದು ಅತ್ಯಂತ ಕಳಪೆ ಆರಂಭವಾಗಿದೆ. ಏಕದಿನ ಪಂದ್ಯದಲ್ಲಿ ಟಾಪ್ ನಾಲ್ವರು ಬ್ಯಾಟ್ಸ್ಮನ್ಗಳ ಪೈಕಿ ಮೂವರು ಶೂನ್ಯಕ್ಕೆ ಔಟಾಗಿ ಪೆವಿಲಿಯನ್ಗೆ ಮರಳಿದ್ದು ಟೀಂ ಇಂಡಿಯಾ ಪಾಲಿಗೆ ಇದೇ ಮೊದಲು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ