Virat Kohli: ಟೀಂ ಇಂಡಿಯಾದ ಆ 2594 ದಿನಗಳು; ಕಿಂಗ್ ಕೊಹ್ಲಿಗೆ ಇಂದು ಬಹಳ ಮಹತ್ವದ ದಿನ..!

Virat Kohli: ಒಟ್ಟಾರೆ ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವಹಿಸಿದರು. ಈ 68 ಪಂದ್ಯಗಳಲ್ಲಿ ಭಾರತ 40 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, 17 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಉಳಿದಂತೆ 11 ಪಂದ್ಯಗಳು ಡ್ರಾಗೊಂಡವು.

Virat Kohli: ಟೀಂ ಇಂಡಿಯಾದ ಆ 2594 ದಿನಗಳು; ಕಿಂಗ್ ಕೊಹ್ಲಿಗೆ ಇಂದು ಬಹಳ ಮಹತ್ವದ ದಿನ..!
virat kohli
Follow us
TV9 Web
| Updated By: ಪೃಥ್ವಿಶಂಕರ

Updated on:Dec 09, 2022 | 11:50 AM

ಸದ್ಯ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಫಾರ್ಮ್​ನೊಂದಿಗೆ ಬಳಲುತ್ತಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ (Virat Kohli) ಡಿಸೆಂಬರ್ 9 ಬಹಳ ವಿಶೇಷ ದಿನ. ಏಕೆಂದರೆ, ಇದೇ ದಿನದಂದು ಕಿಂಗ್ ಕೊಹ್ಲಿಗೆ ಅಂತಾರಾಷ್ಟ್ರೀಯ ತಂಡದ ನಾಯಕತ್ವ ನೀಡಲಾಯಿತು. ವಾಸ್ತವವಾಗಿ 2014 ರಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದರು. ಆ ಬಳಿಕ ಅವರ ಸ್ಥಾನಕ್ಕೆ ಟೆಸ್ಟ್​ನಲ್ಲಿ ಭಾರತವನ್ನು ನಂಬರ್ ಒನ್ ಸ್ಥಾನಕ್ಕೇರಿಸಿದ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಲಾಯಿತು. ಈ ದಿನದಂದು ಅಂದರೆ ಡಿಸೆಂಬರ್ 9 ರಂದು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಟೆಸ್ಟ್ ನಾಯಕನಾಗಿ (Test captain) ತಮ್ಮ ಮೊದಲ ಪಂದ್ಯವನ್ನು ಆಡಿದರು.

ನಾಯಕನಾಗಿ ಆಸ್ಟ್ರೇಲಿಯಾ ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಕೊಹ್ಲಿಗೆ ಶುಭಾರಂಭ ಸಿಗಲಿಲ್ಲ. ಈ ಪಂದ್ಯದಲ್ಲಿ ಭಾರತ 48 ರನ್‌ಗಳಿಂದ ಸೋತಿತ್ತು. ಹೀಗಾಗಿ ಕೊಹ್ಲಿಯ ನಾಯಕತ್ವದ ವೃತ್ತಿಜೀವನವು ಸೋಲಿನೊಂದಿಗೆ ಪ್ರಾರಂಭವಾಯಿತು. ಆದರೆ ಈ ಒಂದು ಸೋಲಿನ ನಂತರ ಭಾರತ ಟೆಸ್ಟ್ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ ಕೊಹ್ಲಿ, ವಿದೇಶಿ ನೆಲದಲ್ಲಿ ಈ ಹಿಂದೆ ಯಾವ ಭಾರತದ ನಾಯಕನೂ ಮಾಡದಂತಹ ದಾಖಲೆಯನ್ನು ಮಾಡಿದರು.

ಟೆಸ್ಟ್ ಮಾದರಿಯಲ್ಲಿ ಭಾರತದ ಭವಿಷ್ಯ ಬದಲಿಸಿದ ಕೊಹ್ಲಿ

9 ಡಿಸೆಂಬರ್ 2014 ರಂದು ಟೆಸ್ಟ್ ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಆಡಿದ ಕೊಹ್ಲಿ, 15 ಜನವರಿ 2022 ರಂದು ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದರು. ಈ 2594 ದಿನಗಳ ಟೀಮ್ ಇಂಡಿಯಾದ ಪ್ರಯಾಣವು ಸುವರ್ಣಮಯವಾಗಿತ್ತು. ಈ ಅವಧಿಯಲ್ಲಿ ಕೊಹ್ಲಿ ತಾನು ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬುದನ್ನು ಸಾಬೀತುಪಡಿಸಿದರು. ಸ್ವತಃ ಭಾರತದ ನೆಲದಲ್ಲಿಯೇ ಮಣಿಸಲು ಕಷ್ಟವಾಗಿದ್ದ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳನ್ನು ಅವರ ನೆಲದಲ್ಲಿಯೇ ಮಣಿಸಿದ ದಾಖಲೆಯನ್ನು ಕೊಹ್ಲಿ ಬರದರು.

IPL 2023: ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲಿ ಮಹತ್ವ ಬದಲಾವಣೆಗೆ ಮುಂದಾದ ಬಿಸಿಸಿಐ..!

ನಾಯಕನಾಗಿ ಕೊಹ್ಲಿಯ ದೊಡ್ಡ ದಾಖಲೆ

ಒಟ್ಟಾರೆ ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವಹಿಸಿದರು. ಈ 68 ಪಂದ್ಯಗಳಲ್ಲಿ ಭಾರತ 40 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, 17 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಉಳಿದಂತೆ ಇನ್ನು 11 ಪಂದ್ಯಗಳು ಡ್ರಾಗೊಂಡವು. ಅದರಲ್ಲೂ ಬರೋಬ್ಬರಿ 40 ಟೆಸ್ಟ್ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ ಕೊಹ್ಲಿ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎಂಬ ದಾಖಲೆಯನ್ನೂ ಬರೆದರು.

ಇದಿಷ್ಟೇ ಅಲ್ಲದೆ ಟೆಸ್ಟ್​ನಲ್ಲಿ ಕೊಹ್ಲಿ ಬರೆದ ದಾಖಲೆಗಳು ಇಂತಿವೆ

  1. 2016ರಲ್ಲಿ ಕೊಹ್ಲಿ ನಾಯಕರಾಗಿದ್ದಾಗಲೇ ಟೀಂ ಇಂಡಿಯಾ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ತಲುಪಿತ್ತು. 2009ರ ನಂತರ ಭಾರತ ತಂಡ ಈ ಸಾಧನೆ ಮಾಡಿದ್ದು ಇದೇ ಮೊದಲು.
  2. ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವವಹಿಸಿಕೊಂಡ ದಾಖಲೆಯನ್ನೂ ವಿರಾಟ್ ಕೊಹ್ಲಿ ಬರೆದಿದ್ದಾರೆ. ವಿರಾಟ್ 68 ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರೆ, ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ ನಾಯಕತ್ವ ನಿರ್ವಹಿಸಿದ್ದರು.
  3. ಅಲ್ಲದೆ ಭಾರತದಲ್ಲಿ ಗರಿಷ್ಠ 24 ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಈ ಹಿಂದೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು, ಅವರು ನಾಯಕನಾಗಿ ಭಾರತದಲ್ಲಿ 21 ಪಂದ್ಯಗಳನ್ನು ಗೆದ್ದಿದ್ದರು.
  4. ಅಲ್ಲದೆ ಕಾಂಗರೂಗಳನ್ನು ಅವರ ನೆಲದಲ್ಲಿಯೇ ಸತತ ಎರಡು ಬಾರಿ ಮಣಿಸಿದ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಹಾಗೆಯೇ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದ 6 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದ ಶ್ರೇಯಾ ಕೊಹ್ಲಿಯದ್ದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Fri, 9 December 22