PSL 2025: ಪಾಕಿಸ್ತಾನ್ ಸೂಪರ್ ಲೀಗ್​ಗೆ ವಿದೇಶಿ ಆಟಗಾರರು ಗುಡ್ ಬೈ?

Operation Sindoor: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ (Operation Sindoor) ಮೂಲಕ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ 9 ಕಡೆ ವಾಯು ದಾಳಿ ನಡೆಸಿದೆ.

PSL 2025: ಪಾಕಿಸ್ತಾನ್ ಸೂಪರ್ ಲೀಗ್​ಗೆ ವಿದೇಶಿ ಆಟಗಾರರು ಗುಡ್ ಬೈ?
Warner - Allen - Kane

Updated on: May 07, 2025 | 9:53 AM

ಭಾರತದ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ್ ಸೂಪರ್ ಲೀಗ್​ಗೂ (PSL 2025) ಕಾರ್ಮೋಡ ಆವರಿಸಿದೆ. ಅದು ಕೂಡ ಅರ್ಧದಲ್ಲೇ ವಿದೇಶಿ ಆಟಗಾರರು ಕೈಕೊಡುವ ಆತಂಕದೊಂದಿಗೆ ಎಂಬುದು ವಿಶೇಷ. ಇತ್ತ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಶುರು ಮಾಡಿದ ಬೆನ್ನಲ್ಲೇ ಅತ್ತ ಪಾಕಿಸ್ತಾನ್ ಸೂಪರ್ ಲೀಗ್​ನಿಂದ ವಿದೇಶಿ ಆಟಗಾರರು ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನಲೆಯಲ್ಲಿ, ಪಿಎಸ್​ಎಲ್ ಟೂರ್ನಿ ಆಡುತ್ತಿರುವ ವಿದೇಶಿ ಆಟಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಫಾರಿನ್ ಪ್ಲೇಯರ್ಸ್ ಅರ್ಧದಲ್ಲೇ ಟೂರ್ನಿ ತೊರೆದು ತವರಿಗೆ ಹಿಂತಿರುಗುವ ಸಾಧ್ಯತೆ ಹೆಚ್ಚಿದೆ.

ಈ ಬಾರಿಯ ಐಪಿಎಲ್​ನಲ್ಲಿ ಅವಕಾಶ ವಂಚಿತರಾದ ಬಹುತೇಕ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಭಾರತ ಮತ್ತು ಪಾಕಿಸ್ತಾನ್ ನಡುವೆ ಯುದ್ಧ ಬೀತಿ ಎದುರಾದ ಬೆನ್ನಲ್ಲೇ ವಿದೇಶಿ ಆಟಗಾರರು ಲೀಗ್​ನಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್-10 ಅರ್ಧದಲ್ಲೇ ಮೊಟಕುಗೊಂಡರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿರುವ ವಿದೇಶಿ ಆಟಗಾರರ ಪಟ್ಟಿ ಹೀಗಿದೆ:

ಇಸ್ಲಾಮಾಬಾದ್ ಯುನೈಟೆಡ್ ತಂಡ: ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ), ರಿಲೆ ಮೆರೆಡಿತ್ (ಆಸ್ಟ್ರೇಲಿಯಾ), ಬೆನ್ ಡ್ವಾರ್ಹುಯಿಸ್; ಕಾಲಿನ್ ಮನ್ರೋ (ನ್ಯೂಝಿಲೆಂಡ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ಸೌತ್ ಆಫ್ರಿಕಾ), ಆಂಡ್ರೀಸ್ ಗೌಸ್ (ಯುಎಸ್​ಎ), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್).

ಕರಾಚಿ ಕಿಂಗ್ಸ್ ತಂಡ: ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್) ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಲಿಟ್ಟನ್ ದಾಸ್ (ಬಾಂಗ್ಲಾದೇಶ್), ಜೇಮ್ಸ್ ವಿನ್ಸ್ (ಇಂಗ್ಲೆಂಡ್), ಟಿಮ್ ಸೈಫರ್ಟ್ (ನ್ಯೂಝಿಲೆಂಡ್), ಆಡಮ್ ಮಿಲ್ನ್ (ನ್ಯೂಝಿಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್).

ಲಾಹೋರ್ ಖಲಂದರ್ಸ್ ತಂಡ: ರಿಶಾದ್ ಹೊಸೈನ್ (ಬಾಂಗ್ಲಾದೇಶ್), ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಟಾಮ್ ಕರನ್ (ಇಂಗ್ಲೆಂಡ್), ಡೇವಿಡ್ ವೀಝ (ನಮೀಬಿಯಾ), ಕುಸಾಲ್ ಪೆರೆರಾ (ಶ್ರೀಲಂಕಾ), ಡೆರಿಲ್ ಮಿಚೆಲ್ (ನ್ಯೂಝಿಲೆಂಡ್), ಸಿಕಂದರ್ ರಾಝ (ಝಿಂಬಾಬ್ವೆ).

ಮುಲ್ತಾನ್ ಸುಲ್ತಾನ್ಸ್ ತಂಡ: ಡೇವಿಡ್ ವಿಲ್ಲಿ (ಇಂಗ್ಲೆಂಡ್), ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್), ಮೈಕೆಲ್ ಬ್ರೇಸ್‌ವೆಲ್ (ನ್ಯೂಝಿಲೆಂಡ್), ಗುಡಕೇಶ್ ಮೋಟೀ (ವೆಸ್ಟ್ ಇಂಡೀಸ್), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಶೈ ಹೋಪ್ (ವೆಸ್ಟ್ ಇಂಡೀಸ್), ಜೋಶ್ ಲಿಟಲ್ (ಐರ್ಲೆಂಡ್).

ಪೇಶಾವರ್ ಝಲ್ಮಿ ತಂಡ: ನಜೀಬುಲ್ಲಾ ಝದ್ರಾನ್ (ಅಫ್ಘಾನಿಸ್ತಾನ್), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ) ನಹಿದ್ ರಾಣಾ (ಬಾಂಗ್ಲಾದೇಶ್), ಟಾಮ್ ಕೊಹ್ಲರ್-ಕ್ಯಾಡ್ಮೋರ್ (ಇಂಗ್ಲೆಂಡ್), ಲಿಝಾಡ್ ವಿಲಿಯಮ್ಸ್ (ಸೌತ್ ಆಫ್ರಿಕಾ), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್).

ಇದನ್ನೂ ಓದಿ: IPL 2025: ಹೀಗಾದ್ರೆ RCB ಐಪಿಎಲ್​ನಿಂದ ಹೊರಬೀಳುತ್ತೆ..!

ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ: ಫಿನ್ ಅಲೆನ್ (ನ್ಯೂಝಿಲೆಂಡ್), ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಕೈಲ್ ಜೇಮಿಸನ್, (ನ್ಯೂಝಿಲೆಂಡ್), ರೈಲಿ ರೊಸ್ಸೌ (ಸೌತ್ ಆಫ್ರಿಕಾ), ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್).