AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ದಶಕದ ಅತ್ಯಂತ ಕೆಟ್ಟ ಫೀಲ್ಡಿಂಗ್ ತಂಡ’; ಪಾಕ್ ತಂಡ ಮಾನ ಕಳೆದ ಅಂಪೈರ್ ರಿಚರ್ಡ್​ ಕಿಟಲ್​ಬರೋ! ವಿಡಿಯೋ

AUS vs PAK: ಮೊದಲ ದಿನ ಪಾಕಿಸ್ತಾನದ ಕಳಪೆ ಫೀಲ್ಡಿಂಗ್‌ನ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದರು. ಪಾಕಿಸ್ತಾನ ತಂಡ ಒಂದು ಎಸೆತದಲ್ಲಿ ಎರಡು ಬಾರಿ ವಿಕೆಟ್ ಪಡೆಯುವ ಅವಕಾಶ ಪಡೆದುಕೊಂಡಿತು. ಆದರೆ ಮಾಜಿ ನಾಯಕ ಬಾಬರ್ ಮತ್ತು ವಿಕೆಟ್ ಕೀಪರ್ ಮಾಡಿದ ಕಳಪೆ ಫೀಲ್ಡಿಂಗ್ ಈ ಅವಕಾಶವನ್ನು ಕಿತ್ತುಕೊಂಡಿತು.

‘ಈ ದಶಕದ ಅತ್ಯಂತ ಕೆಟ್ಟ ಫೀಲ್ಡಿಂಗ್ ತಂಡ’; ಪಾಕ್ ತಂಡ ಮಾನ ಕಳೆದ ಅಂಪೈರ್ ರಿಚರ್ಡ್​ ಕಿಟಲ್​ಬರೋ! ವಿಡಿಯೋ
ಪಾಕ್ ತಂಡ, ಅಂಪೈರ್ ರಿಚರ್ಡ್​ ಕಿಟಲ್​ಬರೋ
Follow us
ಪೃಥ್ವಿಶಂಕರ
|

Updated on:Dec 15, 2023 | 3:49 PM

ಆತಿಥೇಯ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia vs Pakistan) ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 14 ರಿಂದ ಆರಂಭವಾಗಿದೆ. ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿರುವ ಆಸ್ಟ್ರೇಲಿಯಾ ತಂಡ 487 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ಕೂಡ ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ನೀಡುತ್ತಿದೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ (David Warner) 164 ರನ್​ಗಳ ಇನ್ನಿಂಗ್ಸ್ ಆಡಿದರೆ, ಆಲ್​ರೌಂಡರ್ ಮಿಚೆಲ್ ಮಾರ್ಷ್ ಕೂಡ 90 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಇಬ್ಬರ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಮೇಲುಗೈ ಸಾಧಿಸಿದ್ದರೆ, ಇತ್ತ ಪಾಕಿಸ್ತಾನ ತಂಡ ಕೂಡ ತನ್ನ ಕಳಪೆ ಫೀಲ್ಡಿಂಗ್​ನಿಂದಾಗಿ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿ, ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕುವುದಕ್ಕೆ ಸುಲಭ ದಾರಿ ಮಾಡಿಕೊಟ್ಟಿತು. ಇದೀಗ ಪಾಕ್ ಆಟಗಾರರ ಕಳಪೆ ಫೀಲ್ಡಿಂಗ್‌ ಅನ್ನು ಅಂಪೈರ್ ರಿಚರ್ಡ್​ ಕಿಟಲ್​ಬರೋ (Richard Kettleborough) ಲೇವಡಿ ಮಾಡಿ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಅಂಪೈರ್ ರಿಚರ್ಡ್​ ಕಿಟಲ್​ಬರೋ ಹಂಚಿಕೊಂಡಿರುವ ಈ ವಿಡಿಯೋ ಸುಮಾರು 6 ನಿಮಿಷಗಳಷ್ಟು ಸುದೀರ್ಘವಾಗಿದೆ. ಇದರಲ್ಲಿ ಕಳೆದ ವರ್ಷಗಳಲ್ಲಿ ಕ್ರಿಕೆಟ್​ನ ಮೂರು ಮಾದರಿಗಳ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಮಾಡಿರುವ ಕಳಪೆ ಫೀಲ್ಡಿಂಗ್​ನ ತುಣುಕಗಳಿವೆ. ವಿಡಿಯೋವನ್ನು ಹಂಚಿಕೊಂಡಿರುವುದಲ್ಲದೆ ‘ಪಾಕಿಸ್ತಾನ ಬಹುಶಃ ಈ ದಶಕದ ಅತ್ಯಂತ ಕೆಟ್ಟ ಫೀಲ್ಡಿಂಗ್ ತಂಡ’ ಎಂಬ ಕ್ಯಾಪ್ಷನ್ ಕೂಡ ರಿಚರ್ಡ್​ ಕಿಟಲ್​ಬರೋ ನೀಡಿದ್ದಾರೆ.

ವಾರ್ನರ್​ಗೆ ಹಲವು ಜೀವದಾನ

ಇನ್ನು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಕೂಡ ಪಾಕ್ ತಂಡದ ಕಳಪೆ ಫೀಲ್ಡಿಂಗ್​ಗೆ ಕೈಗನ್ನಡಿಯಾಗಿತ್ತು. ತಂಡ ಮೊದಲ ದಿನದಾಟದಲ್ಲಿ ಹಲವು ಅವಕಾಶಗಳನ್ನು ಕೈಚೆಲ್ಲಿತು. ಇತ್ತ ಪಾಕಿಸ್ತಾನದ ಕಳಪೆ ಫೀಲ್ಡಿಂಗ್‌ನ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದರು. ಪಾಕಿಸ್ತಾನ ತಂಡ ಒಂದು ಎಸೆತದಲ್ಲಿ ಎರಡು ಬಾರಿ ವಿಕೆಟ್ ಪಡೆಯುವ ಅವಕಾಶ ಪಡೆದುಕೊಂಡಿತು. ಆದರೆ ಮಾಜಿ ನಾಯಕ ಬಾಬರ್ ಮತ್ತು ವಿಕೆಟ್ ಕೀಪರ್ ಮಾಡಿದ ಕಳಪೆ ಫೀಲ್ಡಿಂಗ್ ಈ ಅವಕಾಶವನ್ನು ಕಿತ್ತುಕೊಂಡಿತು.

ಇನಿಂಗ್ಸ್‌ನ 64ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಆಘಾ ಸಲ್ಮಾನ್ ಅವರ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಮುಂದೆ ಹೋಗಿ ಚೆಂಡನ್ನು ಆಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಮೊದಲು ವಿಕೆಟ್ ಕೀಪರ್ ಸರ್ಫರಾಜ್ ಬಳಿಗೆ ಹೋಯಿತು. ಆದರೆ ಸರ್ಫರಾಜ್ ಆ ಚೆಂಡನ್ನು ಹಿಡಿಯಲಿಲ್ಲ. ಇತ್ತ ಸ್ಲಿಪ್‌ನಲ್ಲಿ ನಿಂತಿದ್ದ ಬಾಬರ್ ಚೆಂಡನ್ನು ಹಿಡಿದರಾದರೂ ಅದನ್ನು ಸ್ಟಂಪ್​ಗೆ ಹೊಡೆಯಲಿಲ್ಲ. ಸರ್ಫರಾಜ್ ಸ್ಟಂಪಿಂಗ್ ಅವಕಾಶವನ್ನು ಕಳೆದುಕೊಂಡರೆ, ಬಾಬರ್ ರನ್ ಔಟ್ ತಪ್ಪಿಸಿದರು. ಇದರ ಲಾಭ ಪಡೆದ ವಾರ್ನರ್ ಶತಕದ ಇನ್ನಿಂಗ್ಸ್ ಆಡಿದರು.

ಫೈನಲ್ ಪಂದ್ಯಕ್ಕೆ ರಿಚರ್ಡ್ ಕೆಟಲ್‌ಬರೋ ಅಂಪೈರ್! ಭಾರತಕ್ಕೆ ಸೋಲು ಖಚಿತ ಎಂದ ಫ್ಯಾನ್ಸ್..!

164 ರನ್​ಗಳ ಇನ್ನಿಂಗ್ಸ್ ಆಡಿದ ವಾರ್ನರ್

ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್, 11 ಎಸೆತಗಳಲ್ಲಿ 16 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ164 ರನ್​ಗಳ ಇನ್ನಿಂಗ್ಸ್‌ ಆಡಿದರು. ವಾರ್ನರ್​ ಅವರ ಈ ಶತಕದಾಟದಲ್ಲಿ ಪಾಕ್ ಫೀಲ್ಡರ್​ಗಳ ಕೊಡುಗೆಯೂ ಇತ್ತು. ವಾರ್ನರ್ ಅವರನ್ನು ಔಟ್ ಮಾಡುವ ಮೊದಲ ಅವಕಾಶ ಕೈತಪ್ಪಿದ ಬಳಿಕ ಮತ್ತೊಂದು ಅವಕಾಶವೂ ಒದಗಿ ಬಂತು. ಆದರೆ ಅದನ್ನು ಸಹ ಕೈಚೆಲ್ಲಲಾಯಿತು. ಅಮರ್ ಜಮಾಲ್ ಬೌಲ್ ಮಾಡಿದ 75ನೇ ಓವರ್​ನಲ್ಲಿ ವಾರ್ನರ್ ಅವರನ್ನು ಎರಡು ಬಾರಿ ಔಟ್ ಮಾಡುವ ಅವಕಾಶವನ್ನು ಪಾಕ್ ಆಟಗಾರರು ಕಳೆದುಕೊಂಡರು. ವಾರ್ನರ್ ತನ್ನ 26 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದಾಗ, ಶೆಹಜಾದ್ ಸುಲಭವಾದ ಕ್ಯಾಚ್ ಅನ್ನು ಮಿಡ್ ಆನ್‌ನಲ್ಲಿ ಕೈಚೆಲ್ಲಿದರು. ನಂತರ ವಾರ್ನರ್ 150 ರನ್ ಬಾರಿಸಿ ಆಡುತ್ತಿದ್ದಾಗ ಸರ್ಫರಾಜ್ ಅಹ್ಮದ್ ಕಷ್ಟಕರವಾದ ಸ್ಟಂಪಿಂಗ್ ಅವಕಾಶವನ್ನು ಕಳೆದುಕೊಂಡರು. ಇದರ ಲಾಭ ಪಡೆದ ವಾರ್ನರ್ 164 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಕ್ಯಾಚ್​ಗಳನ್ನು ಕೈಚೆಲ್ಲಿದಲ್ಲದೆ ಪಾಕ್ ಆಟಗಾರರು ಹಲವು ಬಾರಿ ಕಳಪೆ ಫೀಲ್ಡಿಂಗ್ ಮಾಡಿ ಸರಾಗವಾಗಿ ರನ್ ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Fri, 15 December 23

ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ