PAK vs NEP: ಚೊಚ್ಚಲ ಶತಕ ಸಿಡಿಸಿ ಪಾಕ್ ತಂಡದ 9 ವರ್ಷಗಳ ಬರ ನೀಗಿಸಿದ ಇಫ್ತಿಕರ್..!
Iftikhar Ahmed: ಸೆಪ್ಟೆಂಬರ್ 3ಕ್ಕೆ 33ನೇ ವರ್ಷಕ್ಕೆ ಕಾಲಿಡಲಿರುವ ಇಫ್ತಿಕಾರ್, ತಂಡ ಸಂಕಷ್ಟದಲ್ಲಿದ್ದಾಗ, ಕ್ಯಾಪ್ಟನ್ ಬಾಬರ್ ಜೊತೆ ಪ್ರಚಂಡ ಜೊತೆಯಾಟ ನಡೆಸಿದರು. ಇವರಿಬ್ಬರೂ ತಂಡವನ್ನು 300 ರನ್‌ಗಳ ಆಚೆ ಕೊಂಡೊಯ್ದರು. ಈ ವೇಳೆ ಮೊದಲು ನಾಯಕ ಬಾಬರ್ ಶತಕ ಬಾರಿಸಿದರೆ ನಂತರ ಇಫ್ತಿಕರ್ ಕೂಡ 49 ನೇ ಓವರ್‌ನಲ್ಲಿ ತಮ್ಮ ಶತಕವನ್ನು ಪೂರೈಸಿದರು.
ನೇಪಾಳ ವಿರುದ್ಧದ ಮೊದಲ ಪಂದ್ಯದಲ್ಲಿ 238 ರನ್‌ಗಳ ದಾಖಲೆಯ ಜಯ ಸಾಧಿಸಿದ ಪಾಕಿಸ್ತಾನ (Pakistan vs Nepal) ಏಷ್ಯಾಕಪ್‌ನಲ್ಲಿ(Asia Cup 2023) ಶುಭಾರಂಭ ಮಾಡಿದೆ. ಕ್ರಿಕೆಟ್ ಶಿಶುಗಳ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಬಾಬರ್ ಪಡೆ 6 ವಿಕೆಟ್ ಕಳೆದುಕೊಂಡು 342 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೇಪಾಳ 104 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತು. ಇನ್ನು ಈ ಪಂದ್ಯದಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಝಮ್ (Babar Azam) ಮತ್ತು ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್ ಇಫ್ತಿಕರ್ ಅಹ್ಮದ್ (Iftikhar Ahmed) ಶತಕ ಸಿಡಿಸಿ ಮಿಂಚಿದರು. ಎಂದಿನಂತೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಮತ್ತೊಂದು ಅದ್ಭುತ ಶತಕ ಬಾರಿಸಿದರೆ, ಸ್ಫೋಟಕ ಬ್ಯಾಟಿಂಗ್ ಮೂಲಕ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದ ಇಫ್ತಿಕರ್‌ಗೆ ಈ ಪಂದ್ಯ ಅತ್ಯಂತ ವಿಶೇಷವಾಗಿತ್ತು. ಇಫ್ತಿಕರ್ ಕೇವಲ 67 ಎಸೆತಗಳಲ್ಲಿ ಶತಕ ಸಿಡಿಸಿ ಪಾಕಿಸ್ತಾನ ತಂಡದ ಒಂಬತ್ತು ವರ್ಷಗಳ ಕಾಯುವಿಕೆಯನ್ನೂ ಅಂತ್ಯಗೊಳಿಸಿದರು.
ಮುಲ್ತಾನ್‌ನಲ್ಲಿ ನಡೆದ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ , ನಾಯಕ ಬಾಬರ್ ಮತ್ತು ಇಫ್ತಿಕರ್ ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ಪಾಕಿಸ್ತಾನ 342 ರನ್‌ಗಳ ದೊಡ್ಡ ಸ್ಕೋರ್ ದಾಖಲಿಸಿತು. ನಾಯಕ ಬಾಬರ್ ತಂಡಕ್ಕೆ 151 ರನ್‌ಗಳ ದೊಡ್ಡ ಇನ್ನಿಂಗ್ಸ್ ಆಡಿದರು. ಆದರೆ ಈ ಪಂದ್ಯ ಇಫ್ತಿಕರ್‌ಗೆ ಅತ್ಯಂತ ವಿಶೇಷವಾಗಿತ್ತು. ಕೇವಲ 15ನೇ ಏಕದಿನ ಪಂದ್ಯವನ್ನಾಡುತ್ತಿರುವ ಇಫ್ತಿಕರ್ ಈ ಮಾದರಿಯಲ್ಲಿ ಮೊದಲ ಬಾರಿಗೆ ಶತಕ ಸಿಡಿಸಿದ್ದಾರೆ. ವಾಸ್ತವವಾಗಿ, ಇದು ಏಕದಿನದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಅವರ ಮೊದಲ ಶತಕವಾಗಿದೆ.
Asia cup 2023: ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ; ಉಭಯ ತಂಡಗಳು ಹೀಗಿವೆ
ಇಫ್ತಿಕಾರ್ ಕಾಯುವಿಕೆ ಅಂತ್ಯ
ಸೆಪ್ಟೆಂಬರ್ 3ಕ್ಕೆ 33ನೇ ವರ್ಷಕ್ಕೆ ಕಾಲಿಡಲಿರುವ ಇಫ್ತಿಕಾರ್, ತಂಡ ಸಂಕಷ್ಟದಲ್ಲಿದ್ದಾಗ, ಕ್ಯಾಪ್ಟನ್ ಬಾಬರ್ ಜೊತೆ ಪ್ರಚಂಡ ಜೊತೆಯಾಟ ನಡೆಸಿದರು. ಇವರಿಬ್ಬರೂ ತಂಡವನ್ನು 300 ರನ್‌ಗಳ ಆಚೆ ಕೊಂಡೊಯ್ದರು. ಈ ವೇಳೆ ಮೊದಲು ನಾಯಕ ಬಾಬರ್ ಶತಕ ಬಾರಿಸಿದರೆ ನಂತರ ಇಫ್ತಿಕರ್ ಕೂಡ 49 ನೇ ಓವರ್‌ನಲ್ಲಿ ತಮ್ಮ ಶತಕವನ್ನು ಪೂರೈಸಿದರು.
6️⃣7️⃣-ball 💯 – 3️⃣rd fastest century in ODIs in Pakistan 💪
A special maiden ODI hundred for @IftiMania 👏#PAKvNEP | #AsiaCup2023 pic.twitter.com/GfdlPTS3j4
— Pakistan Cricket (@TheRealPCB) August 30, 2023
9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಶತಕ
ಇಫ್ತಿಕರ್ ಶತಕದ ಕಾಯುವಿಕೆ ಅಂತ್ಯಗೊಳಿಸಿದ್ದಲ್ಲದೆ, ಕಳೆದ 9 ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿ ನಡೆಯದ ಸಾಧನೆಯನ್ನೂ ಮಾಡಿದ್ದಾರೆ. 2014ರ ನಂತರ ಏಕದಿನದಲ್ಲಿ ಪಾಕಿಸ್ತಾನ ಪರ 6ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಶತಕ ಸಿಡಿಸಿದ್ದು ಇದೇ ಮೊದಲು. ಇಫ್ತಿಕರ್ಗೂ ಮೊದಲು ಉಮರ್ ಅಕ್ಮಲ್ ಈ ಕೆಲಸ ಮಾಡಿದ್ದರು. ಇಫ್ತಿಕರ್ ಕೇವಲ 71 ಎಸೆತಗಳಲ್ಲಿ 109 ರನ್ ಗಳಿಸಿ ಅಜೇಯರಾಗಿ ಉಳಿದರು. ಇಫ್ತಿಕರ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.
ಇದಕ್ಕೂ ಮುನ್ನ ಬಾಬರ್ ಅಜಮ್ ತಮ್ಮ ವೃತ್ತಿ ಬದುಕಿನ 19ನೇ ಶತಕ ದಾಖಲಿಸಿದ್ದರು. ಇದರೊಂದಿಗೆ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ವೇಳೆ ಬಾಬರ್ ಇಫ್ತಿಕರ್ ಅಹ್ಮದ್ ಜೊತೆ ಐದನೇ ವಿಕೆಟ್‌ಗೆ 214 ರನ್‌ಗಳ ಅದ್ಭುತ ಜೊತೆಯಾಟವನ್ನು ಹಂಚಿಕೊಂಡರು. ಇದು ಪಾಕಿಸ್ತಾನವನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ದಿತು. ಪಾಕ್ ಪರ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಐದನೇ ವಿಕೆಟ್‌ಗೆ ನಡೆದ ದಾಖಲೆಯ ದ್ವಿಶತಕದ ಜೊತೆಯಾಟ ಇದಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:19 am, Thu, 31 August 23