ದಾಖಲೆಯ ಗೆಲುವಿನ ನಡುವೆಯೂ ಪಾಕ್ ತಂಡಕ್ಕೆ ಆತಂಕ; ಮತ್ತೊಮ್ಮೆ ಗಾಯಕ್ಕೆ ತುತ್ತಾದ ಸ್ಟಾರ್ ವೇಗಿ..!
Asia Cup 2023: ವಾಸ್ತವವಾಗಿ ಪಾಕ್ ತಂಡದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಇಂಜುರಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಏಷ್ಯಾಕಪ್ 2023 ರ ಆರಂಭಿಕ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ನೇಪಾಳ ವಿರುದ್ಧದ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದಲ್ಲಿ ಕೇವಲ 5 ಓವರ್ ಬೌಲ್ ಮಾಡಿದ ಅಫ್ರಿದಿ 27 ರನ್ ನೀಡಿ 2 ವಿಕೆಟ್ ಪಡೆದರು.
2023ರ ಏಷ್ಯಾಕಪ್‌ನಲ್ಲಿ (Asia Cup 2023) ಪಾಕಿಸ್ತಾನ ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. 15 ವರ್ಷಗಳ ನಂತರ ಏಷ್ಯಾಕಪ್‌ಗೆ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ ತಂಡ, ನೇಪಾಳವನ್ನು (Pakistan vs Nepal) ಮೊದಲ ಪಂದ್ಯದಲ್ಲಿ 238 ರನ್‌ಗಳಿಂದ ಸೋಲಿಸಿತು. ಮುಲ್ತಾನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನಾಯಕ ಬಾಬರ್ ಆಝಮ್ (Babar Azam) ಮತ್ತು ಇಫ್ತಿಕರ್ ಅಹ್ಮದ್ (Iftikhar Ahmed) ಪಾಕಿಸ್ತಾನದ ಪರ ಅದ್ಭುತ ಶತಕಗಳನ್ನು ಬಾರಿಸಿದರು. ಇದರ ಆಧಾರದ ಮೇಲೆ ತಂಡವು 342 ರನ್ ಗಳಿಸಿತು. ಇದಾದ ಬಳಿಕ ನೇಪಾಳದ ಬ್ಯಾಟಿಂಗ್ ಬೆನ್ನೇಲುಬು ಮುರಿದ ಶಾಹೀನ್ ಶಾ ಅಫ್ರಿದಿ (Shaheen Afridi) ಮತ್ತು ಹ್ಯಾರಿಸ್ ರೌಫ್ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಆದರೆ ಈ ದಾಖಲೆಯ ಜಯದ ನಡುವೆಯೂ ಪಾಕ್ ತಂಡಕ್ಕೆ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೇವಲ 5 ಓವರ್ ಬೌಲ್ ಮಾಡಿದ ಅಫ್ರಿದಿ
ವಾಸ್ತವವಾಗಿ ಪಾಕ್ ತಂಡದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಇಂಜುರಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಏಷ್ಯಾಕಪ್ 2023 ರ ಆರಂಭಿಕ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ನೇಪಾಳ ವಿರುದ್ಧದ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದಲ್ಲಿ ಕೇವಲ 5 ಓವರ್ ಬೌಲ್ ಮಾಡಿದ ಅಫ್ರಿದಿ 27 ರನ್ ನೀಡಿ 2 ವಿಕೆಟ್ ಪಡೆದರು. ಆದರೆ ಫೀಲ್ಡಿಂಗ್ ಮಾಡುವಾಗ ಕೊಂಚ ತೊಂದರೆಗೀಡಾದವರಂತೆ ಕಂಡ ಅಫ್ರಿದಿ ಅವರನ್ನು ತಂಡದ ವೈದ್ಯರು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಇದು ಪಾಕ್ ತಂಡದ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.
Not sure Shaheen Afridi is in his usual rhythm.
— Harsha Bhogle (@bhogleharsha) August 30, 2023
PAK vs NEP: ಚೊಚ್ಚಲ ಶತಕ ಸಿಡಿಸಿ ಪಾಕ್ ತಂಡದ 9 ವರ್ಷಗಳ ಬರ ನೀಗಿಸಿದ ಇಫ್ತಿಕರ್..!
ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ
ಏಕೆಂದರೆ ಕೇವಲ ಇನ್ನೇರಡು ದಿನಗಳಲ್ಲಿ ಪಾಕಿಸ್ತಾನ, ಭಾರತದೆದುರು ಹೈವೋಲ್ಟೇಜ್ ಪಂದ್ಯವನ್ನು ಆಡಬೇಕಿದೆ. ಹೀಗಾಗಿ ಟೀಂ ಇಂಡಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಅಫ್ರಿದಿ ತಂಡದ ಬೌಲಿಂಗ್ ವಿಭಾಗದ ಆದಾರ ಸ್ತಂಭವಾಗಿದ್ದಾರೆ. ಅದಾಗ್ಯೂ ಶಾಹಿನ್ ಇಂಜುರಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಭಾರತ ವಿರುದ್ಧದ ಪಂದ್ಯವನ್ನು ಗಣನೆಗೆ ತೆಗೆದುಕೊಂಡು ಅಫ್ರಿದಿಗೆ ವಿಶ್ರಾಂತಿ ನೀಡುವ ಸಲುವಾಗಿ ಪಾಕ್ ಮಂಡಳಿ ಈ ರೀತಿ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ.
Shaheen Afridi felt some discomfort and left the field 🤐#PAKvsNEP #AsiaCup2023 pic.twitter.com/U7NI9Dt6kR
— Hamxa 🏏🇵🇰 (@hamxashahbax21) August 30, 2023
ಸ್ಟಾರ್ ವೇಗಿ 100% ಫಿಟ್ ಆಗಿರುವುದು ಅಗತ್ಯ
ಅಷ್ಟಕ್ಕೂ ಶಾಹೀನ್ ಅಫ್ರಿದಿ ಇಂಜುರಿಯಿಂದ ಬಳಲುತ್ತಿರುವುದು ಇದೇ ಮೊದಲಲ್ಲ. ಈ ವೇಗಿ ಮೊಣಕಾಲಿನ ಗಾಯದಿಂದ 2022 ರ ಏಷ್ಯಾಕಪ್ನಿಂದ ಹೊರಬಿದ್ದಿದ್ದರು. ಆ ಬಳಿಕ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಅಫ್ರಿದಿ, ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2022 ಫೈನಲ್‌ನಲ್ಲಿ ಕೇವಲ 2.1 ಓವರ್ ಮಾತ್ರ ಬೌಲ್ ಮಾಡಿ ಪೆವಿಲಿಯನ್ ಸೇರಿಕೊಂಡಿದ್ದರು. ಇದೀಗ ಅಫ್ರಿದಿ ಆಟದ ಮಧ್ಯದಲ್ಲೇ ಮೈದಾನ ತೊರೆದಿರುವುದು ಪಾಕ್ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಏಷ್ಯಾಕಪ್ ಮುಗಿದ ಬಳಿಕ ವಿಶ್ವಕಪ್ ಇದೆ. ಹೀಗಾಗಿ ಪಾಕಿಸ್ತಾನಕ್ಕೆ ತಮ್ಮ ಸ್ಟಾರ್ ವೇಗಿ 100% ಫಿಟ್ ಆಗಿರುವುದು ಅಗತ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 am, Thu, 31 August 23