AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs SA: ಪಾಕ್ ಎದುರು ಸೋತ ಆಫ್ರಿಕಾ; ಸೇಮಿಸ್ ತಲುಪಲು ಕೊನೆಯ ಪಂದ್ಯ ಗೆಲ್ಲಲೇಬೇಕು ಭಾರತ..!

ICC Men T20 World Cup Pakistan vs South Africa Match Report: ನವೆಂಬರ್ 3 ರ ಗುರುವಾರ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮಳೆಯ ಸಹಾಯದಿಂದ ದಕ್ಷಿಣ ಆಫ್ರಿಕಾವನ್ನು 33 ರನ್‌ಗಳ (ಡಕ್‌ವರ್ತ್-ಲೂಯಿಸ್ ನಿಯಮ) ಬೃಹತ್ ಅಂತರದಿಂದ ಸೋಲಿಸಿತು.

PAK vs SA: ಪಾಕ್ ಎದುರು ಸೋತ ಆಫ್ರಿಕಾ; ಸೇಮಿಸ್ ತಲುಪಲು ಕೊನೆಯ ಪಂದ್ಯ ಗೆಲ್ಲಲೇಬೇಕು ಭಾರತ..!
ಮೊದಲ ಕಾಕತಾಳೀಯ- 2022ರ ಟಿ20 ವಿಶ್ವಕಪ್‌ನಂತೆಯೇ ಆಸ್ಟ್ರೇಲಿಯಾ 1992 ರ ಏಕದಿನ ವಿಶ್ವಕಪ್​ಗೂ ಆತಿಥ್ಯವಹಿಸಿತ್ತು.
TV9 Web
| Edited By: |

Updated on:Nov 03, 2022 | 6:09 PM

Share

2022 ರ ಟಿ 20 ವಿಶ್ವಕಪ್‌ನಲ್ಲಿ (T20 World Cup 2022) ಸೆಮಿಫೈನಲ್ ರೇಸ್ ತುಂಬಾ ರೋಚಕ ಹಂತ ತಲುಪಿದೆ. ಅದರಲ್ಲೂ ಇದುವರೆಗೂ ಟೂರ್ನಿಯಿಂದ ಹೊರಹೋಗುವ ಹಂತದಲ್ಲಿದ್ದ ಪಾಕಿಸ್ತಾನ ತಮ್ಮ ಸೇಮಿಸ್ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 3 ರ ಗುರುವಾರ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮಳೆಯ ಸಹಾಯದಿಂದ ದಕ್ಷಿಣ ಆಫ್ರಿಕಾವನ್ನು (Pakistan defeated South Africa) 33 ರನ್‌ಗಳ (ಡಕ್‌ವರ್ತ್-ಲೂಯಿಸ್ ನಿಯಮ) ಬೃಹತ್ ಅಂತರದಿಂದ ಸೋಲಿಸಿತು. ಇದರೊಂದಿಗೆ ಪಾಕಿಸ್ತಾನಕ್ಕೆ 4 ಅಂಕ ಲಭಿಸಿದ್ದು, ಇದರ ಆಧಾರದಲ್ಲಿ ಪಾಕಿಸ್ತಾನ ಕೊನೆಯ ಪಂದ್ಯದವರೆಗೂ ಭರವಸೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಈ ಫಲಿತಾಂಶ ದಕ್ಷಿಣ ಆಫ್ರಿಕಾಕ್ಕೆ ಹೊಡೆತ ನೀಡಿದ್ದು, ಟೀಂ ಇಂಡಿಯಾ ಕೂಡ ಈಗ ಕೊನೆಯ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ.

1999 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಒಮ್ಮೆಯೂ ಸೋಲನನುಭವಿಸಿದ ಪಾಕ್ ತಂಡ, ಈ ಪಂದ್ಯದಲ್ಲಿಯೂ ಉಪನಾಯಕ ಶಾದಾಬ್ ಖಾನ್ ಅವರ ಅದ್ಭುತ ಆಲ್-ರೌಂಡ್ ಪ್ರದರ್ಶನದ ಹಿನ್ನೆಲೆಯಲ್ಲಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸಿತು. ಹಾಗೆಯೇ ಹಿಂದಿನ ಅನೇಕ ಪಂದ್ಯಾವಳಿಗಳಂತೆ, ದಕ್ಷಿಣ ಆಫ್ರಿಕಾದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮತ್ತೊಮ್ಮೆ ಮಳೆಯು ದೊಡ್ಡ ಪಾತ್ರವನ್ನು ವಹಿಸಿತು. ಪಾಕಿಸ್ತಾನದ 186 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೊದಲ 3 ಓವರ್‌ಗಳಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ರಿಲೆ ರೂಸೋ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಇವರಿಬ್ಬರನ್ನೂ ಶಾಹೀನ್ ಶಾ ಅಫ್ರಿದಿ ಬಲಿಪಶು ಮಾಡಿದರು.

ಪಂದ್ಯ ತಿರುಗಿಸಿದ ಶಾದಾಬ್

ಆದರೆ, ತಂಡದ ಪರ ನಾಯಕ ತೆಂಬಾ ಬವುಮಾ ತಮ್ಮ ಕಳಪೆ ಫಾರ್ಮ್‌ನ ಸರಣಿಗೆ ಸ್ವಲ್ಪ ಬ್ರೇಕ್ ಹಾಕಿ, 36 ರನ್ (19 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸುವ ಮೂಲಕ ತಂಡವನ್ನು ಕೆಟ್ಟ ಆರಂಭದಿಂದ ಹೊರತರಲು ಪ್ರಯತ್ನಿಸಿದರು. ಇಲ್ಲಿಯೂ ಶಾದಾಬ್ ಖಾನ್ ಮ್ಯಾಚ್ ಚೇಂಜಿಂಗ್ ಓವರ್ ಬೌಲ್ ಮಾಡಿದರು. ಎಂಟನೇ ಓವರ್​ ಬೌಲಿಂಗ್ ಮಾಡಲು ಬಂದ ಶಾದಾಬ್ ಮೊದಲ ಎಸೆತದಲ್ಲಿ ಬವುಮಾ ಮತ್ತು ಮೂರನೇ ಎಸೆತದಲ್ಲಿ ಏಡನ್ ಮಾರ್ಕ್ರಾಮ್ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಸಂಕಷ್ಟ ಹೆಚ್ಚಿಸಿದರು. ನಂತರ ಆಫ್ರಿಕಾ ಇನ್ನಿಂಗ್ಸ್​ನ 9ನೇ ಓವರ್‌ನಲ್ಲಿ ಮಳೆ ಬಂದ ಕಾರಣ ಆಟವನ್ನು ನಿಲ್ಲಿಸಲಾಯಿತು. ಈ ವೇಳೆಗೆ ದಕ್ಷಿಣ ಆಫ್ರಿಕಾದ ಸ್ಕೋರ್ 4 ವಿಕೆಟ್‌ಗೆ 69 ಆಗಿತ್ತು.

ವಿಲನ್ ಆದ ಮಳೆ

ಮಳೆಯ ನಂತರ ಆಟ ಆರಂಭವಾದಾಗ ದಕ್ಷಿಣ ಆಫ್ರಿಕಾಕ್ಕೆ 30 ಎಸೆತಗಳಲ್ಲಿ 73 ರನ್‌ಗಳ ಟಾರ್ಗೆಟ್ ನೀಡಲಾಯಿತು. ಮೊದಲ ಓವರ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಶಾದಾಬ್ ಖಾನ್ ಮೇಲೆ 14 ರನ್ ಗಳಿಸಿದರು. ನಂತರ ಮುಂದಿನ ಓವರ್‌ನಲ್ಲಿ ಕ್ಲಾಸೆನ್ ಶಾಹೀನ್ ಮೇಲೆ ಸತತ 2 ಬೌಂಡರಿಗಳನ್ನು ಬಾರಿಸಿದರು. ಆದರೆ ದೊಡ್ಡ ಹೊಡೆತವನ್ನು ಆಡುವ ಪ್ರಯತ್ನದಲ್ಲಿ ಅವರು ಅದೇ ಓವರ್‌ನಲ್ಲಿ ಔಟಾದರು. ಇಲ್ಲಿಂದ ಪಾಕಿಸ್ತಾನದ ವೇಗಿಗಳು ತಮ್ಮ ಹಿಡಿತವನ್ನು ಬಿಗಿಗೊಳಿಸಿ, ದಕ್ಷಿಣ ಆಫ್ರಿಕಾವನ್ನು ಕೇವಲ 108 ರನ್ಗಳಿಗೆ (9 ವಿಕೆಟ್) ನಿರ್ಬಂಧಿಸುವ ಮೂಲಕ ದೊಡ್ಡ ಗೆಲುವು ದಾಖಲಿಸಿದರು.

ಮುಂದುವರೆದ ಬಾಬರ್ ಕಳಪೆ ಫಾರ್ಮ್​

ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಉದ್ದೇಶದಿಂದ ಪಾಕಿಸ್ತಾನ ತಂಡ ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಬಂದಿಳಿದಿತ್ತು. ನಾಯಕ ಬಾಬರ್ ಅಜಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು, ಇದರಿಂದಾಗಿ ತಂಡವು ಮಳೆಯ ಸಾಧ್ಯತೆಯ ನಡುವೆ ಮುಂಚಿತವಾಗಿ ದೊಡ್ಡ ಸ್ಕೋರ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾವನ್ನು ಒತ್ತಡಕ್ಕೆ ಸಿಲುಕಿಸಿತು. ಆದಾಗ್ಯೂ, ಪಾಕಿಸ್ತಾನದ ಆರಂಭ ಯಥಾಸ್ಥಿತಿಯಾಗಿತ್ತು ತಂಡದ ಆರಂಭಿಕರಿಬ್ಬರು ಬಹುಬೇಗನೇ ಪೆವಿಲಿಯನ್ ಸೇರಿದರು. ಮೊಹಮ್ಮದ್ ರಿಜ್ವಾನ್ ಮೊದಲ ಓವರ್‌ನಲ್ಲಿಯೇ ಔಟಾದರೆ, ನಾಯಕ ಬಾಬರ್ ಅಜಮ್ ಮತ್ತು ಶಾನ್ ಮಸೂದ್ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು.

ಇಫ್ತಿಕರ್-ಶಾದಾಬ್ ಬ್ಯಾಟಿಂಗ್

ಹೀಗಾಗಿ ಏಳನೇ ಓವರ್ ಅಂತ್ಯಕ್ಕೆ ಪಾಕಿಸ್ತಾನ ಕೇವಲ 43 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇದರಲ್ಲೂ ಮೊಹಮ್ಮದ್ ಹ್ಯಾರಿಸ್ ಬ್ಯಾಟ್‌ನಿಂದ ಕೇವಲ 11 ಎಸೆತಗಳಲ್ಲಿ 28 ರನ್‌ಗಳು ಬಂದಿದ್ದವು. ಈ ಯುವ ಬ್ಯಾಟ್ಸ್‌ಮನ್‌ಗೆ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿದ್ದು, ತ್ವರಿತ ಇನ್ನಿಂಗ್ಸ್‌ ಆಡಿದರು. ಇಲ್ಲಿಂದ ಇಫ್ತಿಕರ್ ಅಹ್ಮದ್ ಮತ್ತೊಮ್ಮೆ ಪಾಕಿಸ್ತಾನದ ಇನ್ನಿಂಗ್ಸ್ ನಿಭಾಯಿಸಿದರು.

ಭಾರತದ ವಿರುದ್ಧ ಬಲಿಷ್ಠ ಅರ್ಧಶತಕ ಬಾರಿಸಿದ ಇಫ್ತಿಕರ್ ಮೊದಲು ಮೊಹಮ್ಮದ್ ನವಾಜ್ ಜತೆ 52 ರನ್ ಜತೆಯಾಟವಾಡಿದರು. ಇದಾದ ಬಳಿಕ ಶಾದಾಬ್ ಖಾನ್ ಜತೆಗೂಡಿ ಕೇವಲ 36 ಎಸೆತಗಳಲ್ಲಿ ಬಿರುಸಿನ 82 ರನ್ ಕೂಡಿಹಾಕಿದರು.

ಈ ವೇಳೆ ಸಣ್ಣಗೆ ಮಳೆ ಸುರಿದಿದ್ದರಿಂದ ಬೌಲಿಂಗ್ ಮತ್ತು ಫೀಲ್ಡಿಂಗ್ ಸ್ವಲ್ಪ ಕಷ್ಟವಾಯಿತು. ಆದರೆ, ಕೊನೆಯ ಓವರ್‌ಗಳಲ್ಲಿ ಆಫ್ರಿಕಾದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರ ಲಾಭ ಪಡೆದ ಶಾದಾಬ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅದೇ ವೇಳೆಗೆ ಇಫ್ತಿಕಾರ್ ಕೂಡ ಅರ್ಧಶತಕ ಗಳಿಸಿದರು. ದಕ್ಷಿಣ ಆಫ್ರಿಕಾ ಕೊನೆಯ 8 ಎಸೆತಗಳಲ್ಲಿ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದು ಕೊಂಚ ನೆಮದಿಯ ನಿಟ್ಟುಸಿರು ಬಿಟ್ಟು ಪಾಕಿಸ್ತಾನವನ್ನು 185 ರನ್‌ಗಳಿಗೆ ನಿಲ್ಲಿಸಿತು.

Published On - 5:58 pm, Thu, 3 November 22

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ