ಫ್ರೀ ಹಿಟ್ ಬಾಲ್ನಲ್ಲೂ ವಿಕೆಟ್ ಒಪ್ಪಿಸಿದ ಪಾಕ್ ಕ್ರಿಕೆಟಿಗ! ವಿಡಿಯೋ ನೋಡಿ
ವಾಸ್ತವವಾಗಿ, ಶಾಟ್ ಆಡಿದ ನಂತರ, ರೋಹೈಲ್ ಕ್ರೀಸ್‌ನಲ್ಲಿ ಓಡುವ ಬದಲು, ನಿಧಾನವಾಗಿ ನಡೆಯುತ್ತಾ ಸಾಗಿದರು. ಇದನ್ನು ನೋಡಿದ ಉಸ್ಮಾನ್ ವಿಕೆಟ್‌ಗೆ ನೇರವಾಗಿ ಚೆಂಡನ್ನು ಎಸೆದರು.
ಸಾಮಾನ್ಯವಾಗಿ ಟಿ20 ಕ್ರಿಕೆಟ್‌ನಲ್ಲಿ (T20 cricket) ಬ್ಯಾಟ್ಸ್‌ಮನ್‌ಗಳು ಬಾಲಿಶ ತಪ್ಪುಗಳನ್ನು ಮಾಡುವ ಮೂಲಕ ತಮ್ಮ ವಿಕೆಟ್‌ಗಳನ್ನು ಕಳೆದುಕೊಳ್ಳುವುದನ್ನು ಇಡೀ ಜಗತ್ತೇ ನೋಡಿದೆ. ಕೆಲವು ಬ್ಯಾಟ್ಸ್‌ಮನ್‌ಗಳು ಫುಲ್ಟಾಸ್ ಬಾಲ್ನಲ್ಲಿ ಬೌಲ್ಡ್ ಆದರೆ, ಇನ್ನು ಕೆಲವರು ಹಿಟ್ ವಿಕೆಟ್ ಆಗುತ್ತಾರೆ. ಆದರೆ ಪಾಕಿಸ್ತಾನದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೋಹೈಲ್ ನಜೀರ್ (Rohail Nazir) ವಿಕೆಟ್ ಕಳೆದುಕೊಂಡ ರೀತಿ ನೀಡಿ ಎಲ್ಲರೂ ಆಶ್ಚರ್ಯಚಕಿತರಾದರು. ಅದಕ್ಕೆ ಪ್ರಮುಖ ಕಾರಣ ರೊಹೇಲ್ ನಜೀರ್ ಔಟಾಗಿದ್ದು, ಒಂದು ಫ್ರೀ ಹಿಟ್ ಬಾಲ್ನಲ್ಲಿ. ಫ್ರೀ ಹಿಟ್ ಎಸೆತದಲ್ಲಿ ರೋಹೈಲ್ ನಜೀರ್ ವಿಕೆಟ್ ಒಪ್ಪಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
ರೋಹೈಲ್ ನಜೀರ್ ರನ್ ಔಟ್
ಈ ವೇಳೆ ಪಾಕಿಸ್ತಾನದಲ್ಲಿ ನ್ಯಾಷನಲ್ ಟಿ20 ಕಪ್ ಪಂದ್ಯಾವಳಿ ನಡೆಯುತ್ತಿದ್ದು, ಇದರಲ್ಲಿ ಉತ್ತರ ತಂಡದ ಪರ ಆಡುತ್ತಿರುವ ರೋಹೈಲ್ ನಜೀರ್, ಆರನೇ ಓವರ್‌ನಲ್ಲಿ ಫ್ರೀ ಹಿಟ್ ಪಡೆದರು. ಬೌಲರ್ ಇಹ್ಸಾನುಲ್ಲಾ ಫ್ರೀ ಹಿಟ್‌ನಲ್ಲಿ ಉತ್ತಮ ಲೈನ್ ಮತ್ತು ಲೆಂಗ್ತ್ ಬೌಲ್ ಮಾಡಿದರು, ಅದರ ಲಾಭವನ್ನು ರೋಹೈಲ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ನೇರವಾಗಿ ಗಾಳಿಗೆ ಹೋಯಿತು. ಬಳಿಕ ಕವರ್ಸ್ನಲ್ಲಿ ನಿಂತಿದ್ದ ಖಾಲಿದ್ ಉಸ್ಮಾನ್ ಕ್ಯಾಚ್ ಪಡೆದರು. ಆದರೆ, ಫ್ರೀ ಹಿಟ್ ನಿಂದಾಗಿ ರೋಹೈಲ್ ಕ್ಯಾಚ್ ಔಟ್ ಆಗಲಿಲ್ಲ. ಆದರೆ ಕ್ಯಾಚ್ ಹಿಡಿದ ಉಸ್ಮಾನ್ ಸೀದಾ ಚೆಂಡನ್ನು ನಾನ್ ಸ್ಟ್ರೈಕರ್ ವಿಕೆಟ್‌ಗೆ ಥ್ರೋ ಎಸೆದರು. ಚೆಂಡು ನೇರ ವಿಕೆಟ್‌ಗೆ ತಗಲಿತು, ಹೀಗಾಗಿ ರೋಹೈಲ್ ರನೌಟ್ ಆದರು. ವಾಸ್ತವವಾಗಿ, ಶಾಟ್ ಆಡಿದ ನಂತರ, ರೋಹೈಲ್ ಕ್ರೀಸ್‌ನಲ್ಲಿ ಓಡುವ ಬದಲು, ನಿಧಾನವಾಗಿ ನಡೆಯುತ್ತಾ ಸಾಗಿದರು. ಇದನ್ನು ನೋಡಿದ ಉಸ್ಮಾನ್ ವಿಕೆಟ್‌ಗೆ ನೇರವಾಗಿ ಚೆಂಡನ್ನು ಎಸೆದರು. ರೋಹೈಲ್ ನಜೀರ್ ಅವರ ಸೋಮಾರಿತನ ಅಥವಾ ಅವರ ನಿರ್ಲಕ್ಷ್ಯ ಅವರ ವಿಕೆಟ್ ಬಿಳುವುದಕ್ಕೆ ಕಾರಣವೆಂಬುದು ಇಲ್ಲಿ ಸ್ಪಷ್ಟವಾಗಿತು.
ರೋಹೈಲ್ ನಜೀರ್ ಕಳಪೆ ಪ್ರದರ್ಶನ
ರಾಷ್ಟ್ರೀಯ ಟಿ 20 ಕಪ್‌ನಲ್ಲಿ ರೋಹೈಲ್ ನಜೀರ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಬಲಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ 4 ಇನ್ನಿಂಗ್ಸ್‌ಗಳಲ್ಲಿ 11.75 ಸರಾಸರಿಯಲ್ಲಿ 47 ರನ್ ಗಳಿಸಲು ಮಾತ್ರ ಶಕ್ತರಾಗಿದ್ದಾರೆ. ರೋಹೈಲ್ ಇದುವರೆಗೆ ಒಂದೇ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. ಅಂದಹಾಗೆ, ನಾವು ಪಂದ್ಯದ ಬಗ್ಗೆ ಮಾತನಾಡುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ತಂಡ 152 ರನ್ ಗಳಿಸಿತು. ಪ್ರತಿಕ್ರಿಯೆಯಾಗಿ ಖೈಬರ್ ಪಖ್ತುಂಕ್ವಾ ತಂಡವು 146 ರನ್ ಗಳಿಸಲಷ್ಟೇ ಶಕ್ತವಾಯಿತು. ಸಿಂಧು ತಂಡ ರಾಷ್ಟ್ರೀಯ ಟಿ20 ಕಪ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, ಈ ತಂಡ 9 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆ. ಖೈಬರ್ ಎರಡನೇ ಮತ್ತು ಉತ್ತರ ತಂಡ ಮೂರನೇ ಸ್ಥಾನದಲ್ಲಿದೆ. ಬಲೂಚಿಸ್ತಾನ ನಾಲ್ಕನೇ, ದಕ್ಷಿಣ ಪಂಜಾಬ್ ಐದನೇ ಸ್ಥಾನದಲ್ಲಿದೆ. ಸೆಂಟ್ರಲ್ ಪಂಜಾಬ್ ತಂಡ ಆರನೇ ಸ್ಥಾನದಲ್ಲಿದೆ.
Published On - 5:42 pm, Thu, 15 September 22