NZ vs PAK: ಬಾಬರ್- ರಿಜ್ವಾನ್ ಫ್ಲಾಪ್, ಕೊನೆಯ ಓವರ್ನಲ್ಲಿ ಸಿಕ್ಸರ್! ತ್ರಿಕೋನ ಸರಣಿ ಗೆದ್ದ ಪಾಕಿಸ್ತಾನ
NZ vs PAK: ಪಾಕ್ ತಂಡದ ಇಫ್ತಿಕರ್ ಅಹ್ಮದ್ ಕೊನೆಯ ಓವರ್ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು.
ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯನ್ನು (tri-series) ಪಾಕಿಸ್ತಾನ ತಂಡ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಪಾಕ್ ತಂಡ, ಆತಿಥೇಯ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತ್ರಿಕೋನ ಸರಣಿಯನ್ನು ತಮ್ಮದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ (New Zealand) 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್ ಗಳಿಸಿತು. ಇದಕ್ಕುತ್ತರವಾಗಿ 164 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ( Pakistan team) 5 ವಿಕೆಟ್‌ಗಳನ್ನು ಕಳೆದುಕೊಂಡು 3 ಎಸೆತಗಳು ಬಾಕಿ ಇರುವಂತೆಯೆ ಗುರಿ ತಲುಪಿತು. ಪಾಕ್ ತಂಡದ ಇಫ್ತಿಕರ್ ಅಹ್ಮದ್ (Iftikar Ahmed) ಕೊನೆಯ ಓವರ್ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು.
ಇಷ್ಟು ದಿನ ಪಾಕ್ ತಂಡದ ಫ್ಲಾಪ್ ಸ್ಟಾರ್ ಎನಿಸಿಕೊಂಡಿದ್ದ ಇಫ್ತಿಕರ್ ಅಹ್ಮದ್, ಬಾಬರ್ ಪಡೆಯ ಈ ಸರಣಿ ಗೆಲುವಿನ ಹೀರೋ ಎನಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ನಿರಂತರವಾಗಿ ವಿಫಲರಾಗಿದ್ದ ಇಫ್ತಿಕರ್ ಅಹ್ಮದ್, ನ್ಯೂಜಿಲೆಂಡ್ ನೆಲದಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಈ ಪಂದ್ಯದಲ್ಲಿ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಮಿಂಚಿದಿದ್ದರೂ ಪಾಕ್ ತಂಡ ಸರಣಿ ಗೆಲ್ಲುವಲ್ಲಿ ತಂಡದ ಮಧ್ಯಮ ಕ್ರಮಾಂಕ ಹೆಚ್ಚು ಪ್ರಭಾವ ಬೀರಿತು. ಇದರೊಂದಿಗೆ ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಸರಣಿ ಗೆದ್ದಿರುವುದು ಪಾಕಿಸ್ತಾನಕ್ಕೆ ಆನೆ ಬಲ ಬಂದಂತ್ತಾಗಿದೆ. 2022ರ ಟಿ20 ವಿಶ್ವಕಪ್‌ಗೂ ಮುನ್ನ ಈ ಗೆಲುವು ಅವರಿಗೆ ಟಾನಿಕ್‌ನಂತಿದ್ದು, ಇದರ ಪರಿಣಾಮವನ್ನು ಈಗ ಐಸಿಸಿ ಟೂರ್ನಿಯಲ್ಲೂ ಕಾಣಬಹುದಾಗಿದೆ.
Sealed with a six! ?
Pakistan win the #NZTriSeries final by five wickets ?#PAKvNZ pic.twitter.com/5Ga5tPhdme
— Pakistan Cricket (@TheRealPCB) October 14, 2022
ಬಾಬರ್-ರಿಜ್ವಾನ್ ಫ್ಲಾಪ್ ನಡುವೆಯೂ ಗೆದ್ದ ಪಾಕಿಸ್ತಾನ
ಪಾಕಿಸ್ತಾನದ ಈ ಗೆಲುವು ತುಂಬಾ ಅವಶ್ಯಕವಾಗಿತ್ತು. ಏಕೆಂದರೆ ಈ ಸರಣಿ ಗೆಲುವಿನೊಂದಿಗೆ ಪಾಕ್ ತಂಡದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಂತ್ತಾಗಿದೆ. ಪಾಕಿಸ್ತಾನ ತಂಡದ ಪ್ರಮುಖ ಸಮಸ್ಯೆಯಾಗಿದ್ದ ಮಧ್ಯಮ ಕ್ರಮಾಂಕ ಅಂತಿಮ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದೆ. ಈ ಸರಣಿಗೂ ಮೊದಲು ಬಾಬರ್ ಮತ್ತು ರಿಜ್ವಾನ್ ಒಂದು ವೇಳೆ ಬ್ಯಾಟಿಂಗ್ನಲ್ಲಿ ವಿಫಲವಾದರೆ ಪಾಕಿಸ್ತಾ ಗೆಲ್ಲುವುದು ಕಷ್ಟ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಈ ಸರಣಿ ಮುನ್ನೆಲೆಗೆ ಬಂದಿದೆ.
ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನದ ಪ್ಲೇಯಿಂಗ್ XI ನ ಭಾಗವಾಗಿದ್ದರು. ಆದರೆ ಇವರಿಬ್ಬರಿಗೂ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಬರ್ 14 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರೆ, ರಿಜ್ವಾನ್ 29 ಎಸೆತಗಳಲ್ಲಿ 34 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರರ್ಥ ಈ ಇಬ್ಬರ ನಡುವೆ ಯಾವುದೇ ಪಾಲುದಾರಿಕೆ ಕಂಡುಬಂದಿಲ್ಲ. ಇದರ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಗೆಲುವಿಗೆ ಅಗತ್ಯ ರನ್ ಗಳಿಸಿದ್ದರಿಂದ ಪಾಕಿಸ್ತಾನ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿತು.
Published On - 11:18 am, Fri, 14 October 22