ಎರಡು ಪಂದ್ಯಗಳನ್ನು ಸೋತಿರುವ ಪಾಕ್ ತಂಡಕ್ಕೆ ಈಗಲೂ ಇದೆ ಸೇಮಿಸ್​ಗೇರುವ ಅವಕಾಶ..!

T20 World Cup 2022: ಪಾಕಿಸ್ತಾನ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, 2 ರಲ್ಲೂ ಸೊತಿದೆ. ಆದರೆ ಬಾಬರ್ ಪಡೆಗೆ ಇನ್ನೂ 3 ಪಂದ್ಯಗಳು ಬಾಕಿ ಉಳಿದಿವೆ.

ಎರಡು ಪಂದ್ಯಗಳನ್ನು ಸೋತಿರುವ ಪಾಕ್ ತಂಡಕ್ಕೆ ಈಗಲೂ ಇದೆ ಸೇಮಿಸ್​ಗೇರುವ ಅವಕಾಶ..!
ಆರನೇ ಕಾಕತಾಳೀಯ - 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಸೆಮಿಫೈನಲ್‌ ಟಿಕೆಟ್ ಖಚಿತ ಪಡಿಸಿಕೊಳ್ಳಲು ಗುಂಪು ಹಂತದ ಕೊನೆಯ ದಿನದವರೆಗೂ ಕಾಯಬೇಕಾಗಿತ್ತು. 2022ರ ಟಿ20 ವಿಶ್ವಕಪ್‌ನಲ್ಲೂ ಅದೇ ರೀತಿಯ ಘಟನೆ ಮತ್ತೊಮ್ಮೆ ಮರುಕಳಿಸಿತು. ಕೊನೆಯ ದಿನದಂದು ಸೌತ್ ಆಫ್ರಿಕಾ ಸೋಲುವ ಮೂಲಕ ಪಾಕಿಸ್ತಾನ ತನ್ನ ಸೆಮಿಫೈನಲ್‌ ಟಿಕೆಟ್ ಖಚಿತಪಡಿಸಿಕೊಂಡಿದೆ.
Follow us
TV9 Web
| Updated By: ಪೃಥ್ವಿಶಂಕರ

Updated on: Oct 28, 2022 | 12:47 PM

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಹಲವು ಅಚ್ಚರಿಯ ಪಲಿತಾಂಶಗಳು ಹೊರಬೀಳುತ್ತಿವೆ. ಆ ಪಲಿತಾಂಶಗಳು ಬಲಿಷ್ಠ ತಂಡಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕ್ರಿಕೆಟ್​ ಶಿಶುಗಳ ಎದುರು ಏಷ್ಯನ್ ಚಾಂಪಿಯನ್ ಲಂಕಾ ತಂಡ ಸೋಲುಂಡಿತ್ತು. ಆ ಬಳಿಕ ಎರಡು ಬಾರಿಯ ಚಾಂಪಿಯನ್ ವಿಂಡೀಸ್ ಕೂಡ ಎರಡೆರಡು ಬಾರಿ ದುರ್ಬಲ ತಂಡಗಳೆದುರು ಮಕಾಡೆ ಮಲಗಿತ್ತು. ಇದರ ಫಲವಾಗಿ ಕೆರಿಬಿಯನ್ ದೈತ್ಯರು ಟೂರ್ನಿಯಿಂದಲೇ ಹೊರಬಿದ್ದರು. ಈಗ ಸೂಪರ್ 12 ಸುತ್ತಿನಲ್ಲೂ ಈ ಅನಿರೀಕ್ಷಿತ ಪಲಿತಾಂಶಗಳು ಹೊರಬೀಳುತ್ತಿದ್ದು, ಬಲಿಷ್ಠ ಇಂಗ್ಲೆಂಡ್ ತಂಡವೂ ಈ ಆಘಾತಕ್ಕೆ ತುತ್ತಾಗಿದೆ. ಅದು ಸಾಲದೆಂಬಂತೆ ಪಾಕಿಸ್ತಾನ (Pakistan) ತಂಡ ಕೂಡ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸೋಲನುಭಿವಿಸಿದೆ. ಈ ಮೊದಲು ಭಾರತ ಎದುರು ಸೋತಿದ್ದ ಪಾಕ್ ತಂಡಕ್ಕೆ ಈ ಪಂದ್ಯದ ಗೆಲುವು ಅತ್ಯಗತ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಸೋತಿರುವ ಬಾಬರ್ ಪಡೆಗೆ ಸೇಮಿಸ್ ಹಾದಿ ಅಂತ್ಯವಂತಲೇ ಹೇಳಲಾಗುತ್ತಿದೆ. ಅದಾಗ್ಯೂ ಪಾಕ್ ತಂಡಕ್ಕೆ ಈಗಲೂ ಸಹ ಸೇಮಿಸ್​ಗೇರುವ ಅವಕಾಶಗಳು ಇವೆ.

ಪಾಕಿಸ್ತಾನ ಸೆಮಿಫೈನಲ್ ತಲುಪುವುದು ಹೇಗೆ?

ಪಾಕಿಸ್ತಾನ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, 2 ರಲ್ಲೂ ಸೊತಿದೆ. ಆದರೆ ಬಾಬರ್ ಪಡೆಗೆ ಇನ್ನೂ 3 ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಉಳಿದಿರುವ ಈ ಮೂರು ಪಂದ್ಯಗಳಲ್ಲಿ ಮೂರನ್ನು ಬಾಬರ್ ಪಡೆ ಗೆಲ್ಲಬೇಕಿದೆ. ಪಾಕ್ ತಂಡದ ಮುಂದಿನ ಎದುರಾಳಿಗಳಾಗಿ ಬಾಂಗ್ಲಾದೇಶ, ನೆದರ್ಲೆಂಡ್ಸ್ ಅಲ್ಲದೆ ದಕ್ಷಿಣ ಆಫ್ರಿಕಾ ಕೂಡ ಇದೆ. ಪಾಕಿಸ್ತಾನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೆ, ಅದರ ಖಾತೆಗೆ 6 ಅಂಕಗಳು ಬೀಳಲಿವೆ. ಆದರೆ ಈ 3 ಪಂದ್ಯಗಳನ್ನು ಪಾಕಿಸ್ತಾನ ಭಾರೀ ಅಂತರದಿಂದ ಗೆಲ್ಲುವ ಮೂಲಕ ಅದರ ನೆಟ್ ರನ್ ​ರೇಟ್​ ಅನ್ನು ಕೂಡ ಸುಧಾರಿಸಬೇಕು.

ಇದನ್ನೂ ಓದಿ: ಟ್ರೆಂಡ್ ಆಯ್ತು ‘ಫ್ರಾಡ್ ಪಾಕ್ ಮಿ. ಬೀನ್’; ಜಿಂಬಾಬ್ವೆ- ಪಾಕ್ ಪ್ರಧಾನಿಗಳ ಟ್ಟಿಟರ್ ವಾರ್! ಏನಿದು ಪ್ರಕರಣ?

ಇದರ ಜೊತೆಗೆ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಹಾಗೂ ಒಂದರಲ್ಲಿ ಗೆದ್ದು, ಒಂದು ಪಂದ್ಯವನ್ನು ಪಲಿತಾಂಶವಿಲ್ಲದೆ ಕೊನೆಗೊಳಿಸಿರುವ ಸೌತ್ ಆಫ್ರಿಕಾ ತಂಡಗಳು ಮುಂದಿನ 3 ಪಂದ್ಯಗಳಲ್ಲಿ ಸೋಲಬೇಕು. ಸದ್ಯದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಎರಡೂ ಪಂದ್ಯಗಳನ್ನು ಗೆದ್ದು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ರೋಹಿತ್ ಪಡೆ ಬಾಂಗ್ಲಾದೇಶ, ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಬೇಕಿದೆ. ಒಂದು ವೇಳೆ ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದರೆ ಅದರ ಸೆಮಿಫೈನಲ್ ಟಿಕೆಟ್ ಖಚಿತವಾಗಲಿದೆ.

ಆಫ್ರಿಕಾ ಸೋಲಬೇಕು

ದಕ್ಷಿಣ ಆಫ್ರಿಕಾ ಕೋಟಾದಲ್ಲೂ ಮೂರು ಪಂದ್ಯಗಳು ಇನ್ನು ಬಾಕಿ ಉಳಿದಿವೆ. ಅದರಲ್ಲಿಯೂ ಎರಡು ಪಂದ್ಯ ಗೆದ್ದರೆ ಈ ತಂಡವೂ ಸೆಮಿಫೈನಲ್ ತಲುಪಲಿದೆ. ಹೀಗಾಗಿ ಪಾಕ್ ತಂಡ ಸೇಮಿಸ್​​ಗೇರಬೇಕೆಂದರೆ, ದಕ್ಷಿಣ ಆಫ್ರಿಕಾ ತಂಡ, ಟೀಮ್ ಇಂಡಿಯಾದೆದುರು ಸೋಲಬೇಕು. ನಂತರ ಉಳಿಯುವ ಎರಡು ಪಂದ್ಯಗಳಲ್ಲಿ ಒಂದನ್ನು ಸೋಲಬೇಕು ಅಥವಾ ಮಳೆಯಿಂದ ಪಂದ್ಯಗಳು ನಡೆಯಲು ಸಾಧ್ಯವಾಗದಿದ್ದರೆ ಮಾತ್ರ ಬಾಬರ್ ಪಡೆ ಸೆಮಿ ಫೈನಲ್ ಆಡಬಹುದಾಗಿದೆ.

ಈಗಾಗಲೇ 2 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ಒಂದರಲ್ಲಿ ಗೆದ್ದು 2 ಅಂಕಗಳನ್ನು ತನ್ನದಾಗಿಸಿಕೊಂಡಿದೆ. ಇನ್ನುಳಿದಂತೆ ಒಂದು ಪಂದ್ಯ ಪಲಿತಾಂಶವಿಲ್ಲದೆ ಅಂತ್ಯಗೊಂಡಿರುವುದರಿಂದ ಆಫ್ರಿಕಾಗೆ ಕೇವಲ 1 ಅಂಕ ಮಾತ್ರ ಲಭಿಸಿದೆ. ಹೀಗಾಗಿ ಸದ್ಯ ಆಫ್ರಿಕಾ ತಂಡ 3 ಅಂಕಗಳನ್ನು ತನ್ನ ಖಾತೆಯಲ್ಲಿ ಇರಿಸಿಕೊಂಡಿದೆ. ಈಗ ಆಫ್ರಿಕಾ ಭಾರತದೆದುರು ಸೋತು, ನಂತರ ಜಿಂಬಾಬ್ವೆ ವಿರುದ್ಧದ ಪಂದ್ಯ ಮಳೆಯಿಂದ ನಡೆಯದಿದ್ದರೆ, ಆಗ ಆಫ್ರಿಕಾಗೆ 1 ಅಂಕ ಮಾತ್ರ ಸಿಗಲಿದೆ. ಇದರಿಂದ ಒಟ್ಟಾರೆಯಾಗಿ ಆಫ್ರಿಕಾ ಖಾತೆಯಲ್ಲಿ 4 ಅಂಕಗಳು ಮಾತ್ರ ಸಿಗಲಿವೆ. ಈ ವೇಳೆ ಪಾಕಿಸ್ತಾನ ಉಳಿದ 3 ಪಂದ್ಯಗಳನ್ನು ಗೆದ್ದರೆ (ಆಫ್ರಿಕಾ ವಿರುದ್ಧದ ಪಂದ್ಯವನ್ನು ಸೇರಿದಂತೆ) 6 ಅಂಕಗಳನ್ನು ಸಂಪಾಧಿಸುತ್ತದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶ ಪಡೆಯುವ ಪಾಕಿಸ್ತಾನ ಸುಲಭವಾಗಿ ಸೇಮಿಸ್​ ಆಡಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ