Jay Shah: ಜಯ್ ಶಾ ಪರ ಮತ ಚಲಾಯಿಸದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ

ICC Chairman: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಜಯ್ ಶಾ ಪಾಲಾಗಿದೆ. 2019 ರಿಂದ 2024 ರವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು ಇದೀಗ ಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಈ ಸ್ಥಾನಕ್ಕೇರಿದ ಐದನೇ ಮತ್ತು ಅತ್ಯಂತ ಕಿರಿಯ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Jay Shah: ಜಯ್ ಶಾ ಪರ ಮತ ಚಲಾಯಿಸದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ
Jay Shah - PCB
Follow us
ಝಾಹಿರ್ ಯೂಸುಫ್
|

Updated on:Aug 29, 2024 | 8:08 AM

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿಯಲಿದ್ದು, ಇದಾದ ಬಳಿಕ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಆಗಸ್ಟ್ 27 ರಂದು ಜಯ್ ಶಾ ಅವರು 15 ಸದಸ್ಯರ ಬೆಂಬಲದೊಂದಿಗೆ ಐಸಿಸಿ ಮುಖ್ಯಸ್ಥರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಇತ್ತ ಜಯ್ ಶಾ ಅವರಿಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಸ್ಪರ್ಧಿಯಾಗಿ ಯಾರು ಸಹ ನಾಮಪತ್ರ ಸಲ್ಲಿಸಿರಲಿಲ್ಲ. ಅದರಂತೆ ಜಯ್ ಶಾ ಇದೀಗ ಐಸಿಸಿ ಗದ್ದುಗೆ ಏರಿದ್ದಾರೆ. ಒಟ್ಟು 16 ಸದಸ್ಯರಲ್ಲಿ ಜಯ್ ಶಾಗೆ 15 ಸದಸ್ಯರ ಬೆಂಬಲ ವ್ಯಕ್ತವಾದರೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮತ ಹಾಕಿರಲಿಲ್ಲ ಎಂಬುದು ವಿಶೇಷ.

ಪಾಕ್ ತಟಸ್ಥ ನಿಲುವು:

ಐಸಿಸಿ ಅಧ್ಯಕ್ಷರ ಆಯ್ಕೆಯನ್ನು 16 ಸದಸ್ಯರು ನಿರ್ಧರಿಸುತ್ತವೆ. ಅಂದರೆ ವಿಶ್ವದ 12 ಕ್ರಿಕೆಟ್ ಮಂಡಳಿ ಹಾಗೂ ಪದಾಧಿಕಾರಿಗಳು ಮತದಾನ ಮಾಡುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಇದಲ್ಲಿ ವಿಜೇತರನ್ನು ನಿರ್ಧರಿಸಲು, ಒಂಬತ್ತು ಮತಗಳ ಬಹುಮತದ ಅಗತ್ಯವಿದೆ (51%). ಆದರೆ ನಾಮಪತ್ರ ಸಲ್ಲಿಕೆಯ ವೇಳೆಯೇ ಜಯ್ ಶಾ ಅವರಿಗೆ 15 ಸದಸ್ಯರುಗಳ ಬೆಂಬಲ ವ್ಯಕ್ತವಾಗಿತ್ತು. ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು ತಟಸ್ಥ ನಿಲುವು ತಳೆದಿದ್ದರು.

ನಾಮನಿರ್ದೇಶನದ ಹಂತದಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಡೀ ಪ್ರಕ್ರಿಯೆಯನ್ನು ಮೂಕ ಪ್ರೇಕ್ಷಕನಂತೆ ವೀಕ್ಷಿಸಿದ್ದರು. ಅಲ್ಲದೆ ತಟಸ್ಥ ನಿಲುವಿನೊಂದಿಗೆ ಕೊನೆಯವರೆಗೆ ನಿಂತರು. ಇದಾಗ್ಯೂ ಜಯ್ ಶಾ ಅವರು 15 ಮತಗಳೊಂದಿಗೆ ಆವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷ.

ಪಾಕಿಸ್ತಾನ್ ತಟಸ್ಥ ನಿಲುವೇಕೆ?

ಜಯ್ ಶಾ ಅಧ್ಯಕ್ಷರಾಗುವುದು ಪಾಕ್ ಕ್ರಿಕೆಟ್ ಮಂಡಳಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಮುಂಬರುವ ಚಾಂಪಿಯನ್ಸ್ ಟ್ರೋಫಿ. ಅಂದರೆ ಜಯ್ ಶಾ ಅಧ್ಯಕ್ಷರಾಗುವುದರಿಂದ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರವಾಗುವ ಭೀತಿ ಎದುರಾಗಿದೆ.

ಏಕೆಂದರೆ 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಜರುಗಲಿದೆ. ಆದರೆ ಪಾಕ್​ನಲ್ಲಿ ಟೂರ್ನಿ ನಡೆದರೆ ಭಾರತ ಹಿಂದೇಟು ಹಾಕುವ ಸಾಧ್ಯತೆ ಹೆಚ್ಚು. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಮನವಿ ಮಾಡಲಿದೆ.

ಈ ಮನವಿಯನ್ನು ಐಸಿಸಿ ಪುರಸ್ಕರಿಸಬೇಕಿದೆ. ಇತ್ತ ಜಯ್ ಶಾ ಅಧ್ಯಕ್ಷರಾಗುವುದರಿಂದ ಭಾರತದ ಮನವಿಗೆ ಬೆಂಬಲ ವ್ಯಕ್ತವಾಗಲಿದೆ. ಇದರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕ್ ಕ್ರಿಕೆಟ್ ಮಂಡಳಿ ಮುಂದಿದೆ.

ಒಂದು ವೇಳೆ ಐಸಿಸಿಯ ನಿರ್ಧಾರಕ್ಕೆ ಪಾಕಿಸ್ತಾನ್ ಒಪ್ಪದಿದ್ದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಬಹುದು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ಪ್ರತಿಭಟನೆಗಳ ಕಾರಣ ಮಹಿಳಾ ಟಿ20 ವಿಶ್ವಕಪ್ ಅನ್ನು ಯುಎಇ ಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: Dinesh Karthik: ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ RCB ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್

ಇದೇ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಬೇರೆ ದೇಶಕ್ಕೆ ಸ್ಥಳಾಂತರವಾಗುವ ಆತಂಕ ಇದೀಗ ಪಾಕ್ ಕ್ರಿಕೆಟ್ ಮಂಡಳಿಗೆ ಎದುರಾಗಿದೆ. ಇದೇ ಕಾರಣದಿಂದಾಗಿಯೇ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗುವುದನ್ನು ಪಿಸಿಬಿ ಬಯಸಿರಲಿಲ್ಲ. ಆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಬೆಂಬಲದ ಹೊರತಾಗಿಯೂ ಜಯ್ ಶಾ ಅವರು ಅವಿರೋಧವಾಗಿ ಆಯ್ಕೆಯಾಗಿ ಐಸಿಸಿ ಮುಖ್ಯಸ್ಥನ ಸ್ಥಾನಕ್ಕೇರಿದ್ದಾರೆ.

Published On - 8:05 am, Thu, 29 August 24

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು