T20 World Cup: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು; ತವರಿಗೆ ಮರಳದ ಪಾಕ್ ತಂಡ! ಹೋಗಿದ್ದೆಲ್ಲಿಗೆ ಗೊತ್ತಾ?
T20 World Cup: ಬಾಂಗ್ಲಾದೇಶ ಪ್ರವಾಸದಲ್ಲಿ ಪಾಕಿಸ್ತಾನ 3 ಟಿ20 ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಟಿ20 ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ.
2021ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ದುಬೈನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಪ್ರವಾಸ ಮುಗಿದ ನಂತರ ಪಾಕಿಸ್ತಾನ ತಂಡ ತನ್ನ ಬ್ಯಾಕ್ ಪ್ಯಾಕ್ ಮಾಡಿಕೊಂಡು ಇತ್ತೀಚೆಗೆ ದುಬೈನಿಂದ ಹಾರಿತ್ತು. ಆದರೆ ಆ ವಿಮಾನ ಪಾಕಿಸ್ತಾನದಲ್ಲಿ ಇಳಿಯಲಿಲ್ಲ. ಬದಲಿಗೆ ವಿಮಾನ ಕರಾಚಿ, ಇಸ್ಲಾಮಾಬಾದ್ ಅಥವಾ ಲಾಹೋರ್ ತಲುಪದೆ ಢಾಕಾದಲ್ಲಿ ಇಳಿಯಿತು. ಬಾಬರ್ ಅಜಮ್ & ತಂಡ ಸೆಮಿಫೈನಲ್ ಸೋಲಿನ ಬಗ್ಗೆ ಗಾಬರಿಯಾಗಿ ಡಾಕಾಗೆ ಹೋಗಲಿಲ್ಲ. ಬದಲಿಗೆ ಬಾಂಗ್ಲಾದೇಶದ ವಿರುದ್ಧ ಕ್ರಿಕೆಟ್ ಸರಣಿಯನ್ನು ಆಡಲು ಅಲ್ಲಿಗೆ ಹೋಗಿದೆ. ಪಾಕಿಸ್ತಾನದ ಬಾಂಗ್ಲಾದೇಶ ಪ್ರವಾಸವು ನವೆಂಬರ್ 19 ರಂದು ಪ್ರಾರಂಭವಾಗುತ್ತದೆ.
2021 ರ ಟಿ 20 ವಿಶ್ವಕಪ್‌ಗೆ ತಂಡದ ಭಾಗವಾಗಿದ್ದ 17 ಸದಸ್ಯರನ್ನು ಒಳಗೊಂಡಂತೆ ಬಾಂಗ್ಲಾದೇಶ ಪ್ರವಾಸಕ್ಕಾಗಿ ಪಾಕಿಸ್ತಾನ 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಿದೆ. ಗುಂಪು ಹಂತದಲ್ಲಿ ಸೋಲನ್ನು ಎದುರಿಸದ ಏಕೈಕ ತಂಡ ಪಾಕಿಸ್ತಾನ. ತಂಡವು ಅಜೇಯವಾಗಿ ಸೆಮಿಫೈನಲ್‌ಗೆ ತಲುಪಿತು, ಆದರೆ ಆಸ್ಟ್ರೇಲಿಯಾ ವಿರುದ್ಧದ ಸೋಲು ಅವರ ಎಲ್ಲಾ ಪ್ರಯತ್ನಗಳನ್ನು ಬುಡಮೇಲು ಮಾಡಿತು.
ಪಾಕಿಸ್ತಾನದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ ಬಾಂಗ್ಲಾದೇಶ ಪ್ರವಾಸದಲ್ಲಿ ಪಾಕಿಸ್ತಾನ 3 ಟಿ20 ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಟಿ20 ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ನವೆಂಬರ್ 19 ಮತ್ತು ನವೆಂಬರ್ 20 ರಂದು ಢಾಕಾದಲ್ಲಿ ಮೊದಲ ಎರಡು ಟಿ20 ಪಂದ್ಯಗಳು ನಡೆಯಲಿವೆ. ಮೂರನೇ ಟಿ20 ಪಂದ್ಯ ಢಾಕಾದಲ್ಲಿ ನಡೆಯಲಿದೆ, ಆದರೆ ಅದು ನವೆಂಬರ್ 22 ರಂದು ನಡೆಯಲಿದೆ. ಟಿ20 ಸರಣಿಯ ನಂತರ, ನವೆಂಬರ್ 26 ರಂದು ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ನವೆಂಬರ್ 26 ರಿಂದ 30 ರವರೆಗೆ ಚಿತ್ತಗಾಂಗ್‌ನಲ್ಲಿ ಮತ್ತು ಎರಡನೇ ಟೆಸ್ಟ್ ಡಿಸೆಂಬರ್ 4 ರಿಂದ 8 ರವರೆಗೆ ಢಾಕಾದಲ್ಲಿ ನಡೆಯಲಿದೆ.
ಪಾಕಿಸ್ತಾನ ತಂಡ ದುಬೈನಿಂದ ಢಾಕಾಗೆ ತೆರಳಿದೆ ಪಾಕಿಸ್ತಾನ ತಂಡ ಬಾಂಗ್ಲಾದೇಶಕ್ಕೆ ತೆರಳಿರುವುದಾಗಿ ಪಿಸಿಬಿ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದೆ. ವಿಮಾನ ನಿಲ್ದಾಣದಲ್ಲಿರುವ ಆಟಗಾರರ ಫೋಟೋಗಳನ್ನು ಹಂಚಿಕೊಂಡ ಅವರು, ಆಟಗಾರರು ದುಬೈನಿಂದ ಢಾಕಾಗೆ ತೆರಳಿದ್ದಾರೆ ಎಂದು ತಿಳಿಸಿದರು.
Pakistan team departs from Dubai to Dhaka for three T20I and two Test match series against Bangladesh which begins on 19 November.#BANvPAK | #HarHaalMainCricket pic.twitter.com/0lJqAHFYie
— Pakistan Cricket (@TheRealPCB) November 12, 2021
Published On - 7:22 pm, Sat, 13 November 21