AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರುಷ್ಕಾ ದಂಪತಿಗಳಿಗೆ ಗಂಡು ಮಗು ಜನನ; ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ! ವಿಡಿಯೋ ವೈರಲ್

Virat Kohli- Anushka Sharma: ವಿರುಷ್ಕಾ ದಂಪತಿಗಳು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿರುವ ಸುದ್ದಿ ಹೊರಬಿದ್ದ ಕೂಡಲೇ ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.ಈ ನಡುವೆ ಪಾಕಿಸ್ತಾನದಲ್ಲೂ ಸಹ ವಿರಾಟ್ ಕೊಹ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಿರುಷ್ಕಾ ದಂಪತಿಗಳಿಗೆ ಗಂಡು ಮಗು ಜನನ; ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ! ವಿಡಿಯೋ ವೈರಲ್
ವಿರಾಟ್ ಕೊಹ್ಲಿ ದಂಪತಿಗಳು
ಪೃಥ್ವಿಶಂಕರ
|

Updated on:Feb 21, 2024 | 4:40 PM

Share

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಏಕೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂಬುದಕ್ಕೆ ನಿಖರ ಕಾರಣ ಹೊರಬಿದ್ದಿದೆ. ವಿರುಷ್ಕಾ ದಂಪತಿಗಳು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದು, ಈ ಸಂತಸದ ವಿಚಾರವನ್ನು ದಂಪತಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ತನ್ನ ಮಗನಿಗೆ ಅಕಾಯ್​ (Akaay) ಎಂದು ಹೆಸರಿಟ್ಟಿರುವುದಾಗಿಯೂ ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಹೊರಬಿದ್ದ ಕೂಡಲೇ ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕೊಹ್ಲಿ ಅಭಿಮಾನಿಗಳ ಮನದಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಪಾಕಿಸ್ತಾನದಲ್ಲೂ ಸಹ ವಿರಾಟ್ ಕೊಹ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮಗೆ ಗಂಡು ಮಗು ಜನಿಸಿದ ಸಂತೋಷದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕೂಡಲೇ ಈ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ವೈರಲ್ ಆಗಿದೆ. ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ವಿರಾಟ್ ಮತ್ತೆ ತಂದೆಯಾಗುತ್ತಿರುವುದನ್ನು ಅಭಿನಂದಿಸುವುದರ ಜೊತೆಗೆ ಅಕಾಯ್ ಕ್ರಿಕೆಟ್‌ನಲ್ಲಿ ಮಿಂಚುವುದರ ಜತೆಗೆ ತಂದೆಯ ಸಾಧನೆಗಳನ್ನು ಮೀರಿಸಲಿ ಎಂದು ಹಾರೈಸಿದ್ದಾರೆ.

ಇದಲ್ಲದೆ ಏಷ್ಯಾದಲ್ಲೇ ಅಧಿಕ ಇನ್ಸ್​ಸ್ಟಾಗ್ರಾಮ್ ಫಾಲೋವರ್ಸ್​ಗಳನ್ನು ಹೊಂದಿರುವ ವಿರಾಟ್ ಕೊಹ್ಲಿ, ತನಗೆ ಮಗ ಹುಟ್ಟಿದ್ದಾನೆ ಎಂಬ ಪೋಸ್ಟ್ ಅನ್ನು ಹರಿಬಿಟ್ಟ ಕೇವಲ ಒಂದು ಗಂಟೆಯೊಳಗೆ ಅದು ಐದು ಮಿಲಿಯನ್​ಗೂ ಹೆಚ್ಚು ಲೈಕ್ಸ್ ಪಡೆದುಕೊಂಡಿತ್ತು. ಈ ಮೂಲಕ ಕೊಹ್ಲಿ ಪೋಸ್ಟ್ ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಎಂಬ ದಾಖಲೆ ಸೃಷ್ಟಿಸಿದೆ. ಇದರೊಂದಿಗೆ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಜೂನಿಯರ್ ಕೊಹ್ಲಿ ಈಗಷ್ಟೇ ದಾಖಲೆಗಳ ಚೇಸಿಂಗ್ ಆರಂಭಿಸಿದ್ದೇನೆ ಎಂದು ಕ್ರೇಜಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೊಹ್ಲಿ ಮಾಡಿರುವ ಪೋಸ್ಟ್ ಇದುವರೆಗೆ 8 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ತಂಡದಿಂದ ಹೊರಗಿರುವ ಕೊಹ್ಲಿ

ಕೊಹ್ಲಿ ಹಾಗೂ ಅನುಷ್ಕಾ ದಂಪತಿಗೆ ಈಗಾಗಲೇ ವಾಮಿಕಾ ಎಂಬ ಮೂರು ವರ್ಷದ ಮಗಳಿದ್ದಾಳೆ. ವೈಯಕ್ತಿಕ ಕಾರಣಗಳಿಗಾಗಿ ಕೊಹ್ಲಿ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದಿದ್ದರು. ಆದರೆ ಆ ನಂತರ ಸಂಪೂರ್ಣ ಸರಣಿಯಿಂದಲೇ ಹೊರಗುಳಿಯುವ ನಿರ್ಧಾರಕ್ಕೆ ಬಂದಿದ್ದರು. ಜನವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪರ ಕೊನೆಯದಾಗಿ ಆಡಿದ್ದ ಕೊಹ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 46 ಮತ್ತು 12 ರನ್ ಕಲೆಹಾಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Wed, 21 February 24