ವಿಶ್ವಕಪ್‌ನಲ್ಲಿ ಧೋನಿ-ಕೊಹ್ಲಿಯ ವಿಕೆಟ್ ಪಡೆದ ಪಾಕ್ ಬೌಲರ್ ಕಡಲೆಕಾಯಿ ಮಾರುತ್ತಿರುವ ವಿಡಿಯೋ ವೈರಲ್

| Updated By: ಝಾಹಿರ್ ಯೂಸುಫ್

Updated on: Jan 10, 2022 | 9:46 PM

ವಹಾಬ್ ರಿಯಾಜ್ ಪಾಕಿಸ್ತಾನ್ ಪರ 27 ಟೆಸ್ಟ್ ಪಂದ್ಯಗಳಲ್ಲಿ 83 ವಿಕೆಟ್ ಪಡೆದಿದ್ದಾರೆ. ಹಾಗೆಯೇ 91 ಏಕದಿನ ಪಂದ್ಯಗಳಲ್ಲಿ 120 ವಿಕೆಟ್ ಹಾಗೂ 36 ಟಿ20ಗಳಲ್ಲಿ 34 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಧೋನಿ-ಕೊಹ್ಲಿಯ ವಿಕೆಟ್ ಪಡೆದ ಪಾಕ್ ಬೌಲರ್ ಕಡಲೆಕಾಯಿ ಮಾರುತ್ತಿರುವ ವಿಡಿಯೋ ವೈರಲ್
wahab riaz
Follow us on

ವಿಶ್ವಕಪ್ 2011, ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಅಂದು ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದ್ದರೆ, ಪಾಕ್ ಬೌಲಿಂಗ್ ಲೈನಪ್ ಅತ್ಯುತ್ತಮವಾಗಿತ್ತು. ಅದರಲ್ಲೂ ಟೂರ್ನಿಯುದ್ದಕ್ಕೂ ಪಾಕ್ ವೇಗಿ ವಹಾಬ್ ರಿಯಾಝ್ ಕಮಾಲ್ ಮಾಡಿದ್ದರು. ಅದರಂತೆ ಸೆಮಿಫೈನಲ್​ನಲ್ಲೂ ಭಾರತದ ವಿರುದ್ಧ ಅದ್ಭುತ ಬೌಲಿಂಗ್‌ ಮಾಡಿದ ವಹಾಬ್ ಐದು ವಿಕೆಟ್‌ ಉರುಳಿಸಿದ್ದರು. ಅಂದು ವಹಾಬ್ ರಿಯಾಜ್ ಪಡೆದದ್ದು ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ಸ್ಟಾರ್​ ಆಟಗಾರರ ವಿಕೆಟ್​ಗಳನ್ನು. ಆ ಮೂಲಕ ಟೀಮ್ ಇಂಡಿಯಾವನ್ನು ಕೇವಲ 260 ರನ್​ಗೆ ಕಟ್ಟಿಹಾಕಿದ್ದರು. ಇದಾಗ್ಯೂ ಟೀಮ್ ಇಂಡಿಯಾ ಬೌಲರುಗಳ ಪರಾಕ್ರಮದಿಂದ ಅಂದು ಭಾರತ ತಂಡವು 29 ರನ್​ಗಳಿಂದ ಜಯ ಸಾಧಿಸಿತ್ತು.

ಅಂದು ಭಾರತ ವಿರುದ್ದ ಮಿಂಚಿ ಮರೆಯಾಗಿದ್ದ ವಹಾಬ್ ರಿಯಾಜ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಎಂಬುದಷ್ಟೇ ವ್ಯತ್ಯಾಸ. ಹೌದು, ಪಾಕ್ ವೇಗಿ ಸೋಮವಾರ ಪಾಕಿಸ್ತಾನದ ರಸ್ತೆಯಲ್ಲಿ ಕಡಲೆಕಾಯಿ ಮಾರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹೀಗೆ ವಿಡಿಯೋ ವೈರಲ್ ಮಾಡಿದ್ದು ಮತ್ಯಾರೂ ಅಲ್ಲ ವಹಾಬ್ ರಿಯಾಜೇ ಎಂಬುದು ವಿಶೇಷ.

ವಹಾಬ್ ರಿಯಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಡಲೆಕಾಯಿ ಹುರಿಯುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಾರ್ವಜನಿಕರೊಂದಿಗೆ ಕಡ್ಲೆಕಾಯಿ ಬೇಕಾ..ಎಂದು ಕೇಳುತ್ತಾ ಕಡಲೆಕಾಯಿ ಮಾರಾಟ ಮಾಡಲು ನಿಂತಿರುವುದು ಕಂಡು ಬರುತ್ತದೆ. ಅಷ್ಟೇ ಅಲ್ಲದೆ ನಾನು ಕಡಲೆಕಾಯಿ ಮಾರುತಿದ್ದೀನಿ. ಬಾಲ್ಯದ ದಿನಗಳು ನೆನಪಾಗುತ್ತಿದೆ ಎಂದು ವಹಾಬ್ ರಿಯಾಜ್ ಬರೆದುಕೊಂಡಿದ್ದಾರೆ. ಇದಾಗ್ಯೂ ವಹಾಬ್ ರಿಯಾಜ್ ಆರ್ಥಿಕ ಪರಿಸ್ಥಿತಿಯಂತು ಹದಗೆಟ್ಟಿಲ್ಲ. ಏಕೆಂದರೆ ಅವರು ಈಗಲೂ ಟಿ20 ಲೀಗ್ ಆಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕಮೆಂಟೇಟರ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ವಹಾಬ್ ರಿಯಾಜ್ ಪಾಕಿಸ್ತಾನ್ ಪರ 27 ಟೆಸ್ಟ್ ಪಂದ್ಯಗಳಲ್ಲಿ 83 ವಿಕೆಟ್ ಪಡೆದಿದ್ದಾರೆ. ಹಾಗೆಯೇ 91 ಏಕದಿನ ಪಂದ್ಯಗಳಲ್ಲಿ 120 ವಿಕೆಟ್ ಹಾಗೂ 36 ಟಿ20ಗಳಲ್ಲಿ 34 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pakistan fast bowler wahab riaz selling chana roadside, video viral)