ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಐಪಿಎಲ್ 2022 (IPL 2022)ರಲ್ಲಿ ಮುಳುಗಿರಬಹುದು, ಆದರೆ ಈ ಸೀಸನ್ ಖಂಡಿತವಾಗಿಯೂ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ (Umran Malik) ಅವರ ಅದೃಷ್ಟವನ್ನು ತಿರುಗಿಸಿದೆ. ಜಮ್ಮುವಿನ ಮೂಲದ ಉಮ್ರಾನ್ ಈ ಸೀಸನ್ನಲ್ಲಿ ತಮ್ಮದೇ ವೇಗದಿಂದ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಖ್ಯಾತ ಕ್ರಿಕೆಟಿಗರು ಕೂಡ ಇವರ ವೇಗಕ್ಕೆ ತಲೆಬಾಗಿದ್ದಾರೆ. ಐಪಿಎಲ್ 2022 ರಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ, ಈ ಯುವ ಸ್ಟಾರ್ ಅನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಕೂಡ ಮಾಡಲಾಗಿದೆ. ಉಮ್ರಾನ್‌ನ ವೇಗ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಆದರೆ, ಪಕ್ಕದ ದೇಶದ ಯುವ ವೇಗದ ಬೌಲರ್ ಶಾಹೀನ್ ಅಫ್ರಿದಿಗ್ಯಾಕೋ (shaheen Afridi) ಉಮ್ರಾನ್ ಖ್ಯಾತಿ ಹೊಟ್ಟೆಕಿಚ್ಚು ಮೂಡಿಸಿದಂತಿದೆ.
ಶಾಹೀನ್ ಅಫ್ರಿದಿ ಪಾಕಿಸ್ತಾನದ ಸ್ಟಾರ್ ಯುವ ಬೌಲರ್
ಪಾಕಿಸ್ತಾನದ ಶಾಹೀನ್ ಅಫ್ರಿದಿ ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಂಡರ್-19 ವಿಶ್ವಕಪ್ ನಂತರ, ಶಾಹೀನ್‌ಗೆ ನೇರವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಲಾಯಿತು. ಕ್ರಮೇಣ ಅವರು ಎಲ್ಲಾ ಮೂರು ತಂಡಗಳಲ್ಲಿ ಸ್ಥಾನ ಪಡೆದರು. ಇತ್ತೀಚೆಗಷ್ಟೇ ಉಮ್ರಾನ್ ಬಗ್ಗೆ ಕೇಳಿದಾಗ ಅವರು ವಿಭಿನ್ನ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಉಮ್ರಾನ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ! ಮುಂದೊಂದು ದಿನ ಅಖ್ತರ್ ದಾಖಲೆ ಮುರಿಯುತ್ತಾನೆ; ಬ್ರೆಟ್ ಲೀ
ಉಮ್ರಾನ್ ಮಲಿಕ್ ವೇಗಕ್ಕೆ ಶಾಹೀನ್ ಅಫ್ರಿದಿ ಉತ್ತರ
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ಸುದ್ದಿಗಾರರೊಂದಿಗೆ ಮಾತನಾಡುವಾಗ ಐಪಿಎಲ್‌ನಲ್ಲಿ ಉಮ್ರಾನ್ ಮಲಿಕ್ ಮತ್ತು ಲಾಕಿ ಫರ್ಗುಸನ್ ಅವರ ವೇಗದ ಬಗ್ಗೆ ಶಾಹೀನ್ ಅಫ್ರಿದಿ ಅವರನ್ನು ಕೇಳಲಾಯಿತು. ಮಲಿಕ್ರನ್ನು ತೆಗಳುತ್ತಾ ಹೇಳಿಕೆ ನೀಡಿದ ಅಫ್ರಿದಿ, ವೇಗದಿಂದ ಮಾತ್ರ ಏನೂ ಆಗುವುದಿಲ್ಲ ಎಂದರು. “ನೀವು ಲೈನ್ ಅಂಡ್ ಲೆಂಥ್ ಹೊಂದಿಲ್ಲದಿದ್ದರೆ ವೇಗವು ನಿಮಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಎಂದು ಶಾಹೀನ್ ಹೇಳಿದರು. ಮೂರು ಏಕದಿನ ಪಂದ್ಯಗಳ ಈ ಸರಣಿಯು ಜೂನ್ 8 ರಿಂದ ಪ್ರಾರಂಭವಾಗಲಿದ್ದು, ಜೂನ್ 12 ರವರೆಗೆ ನಡೆಯಲಿದೆ ಮತ್ತು ಎಲ್ಲಾ ಪಂದ್ಯಗಳು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಅನುಭವಿಗಳನ್ನು ಮೆಚ್ಚಿಸಿದ ಉಮ್ರಾನ್ ಮಲಿಕ್
IPL-15 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡುತ್ತಿರುವ ಜಮ್ಮು ವೇಗಿ ಉಮ್ರಾನ್ ತಮ್ಮ ವೇಗದಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ನಿಯಮಿತವಾಗಿ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಉಮ್ರಾನ್ ಇದುವರೆಗೆ 21 ವಿಕೆಟ್‌ಗಳನ್ನು ಪಡೆದಿದ್ದು, ಈ ಅವಧಿಯಲ್ಲಿ 25 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಪಂದ್ಯಾವಳಿಯ ಅತ್ಯಂತ ಯಶಸ್ವಿ ಬೌಲರ್‌ಗಳ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ವೇಗದ ಮೂಲಕ ಎಲ್ಲರನ್ನೂ ರೋಮಾಂಚನಗೊಳಿಸಿರುವ ಯುವ ವೇಗಿ ಉಮ್ರಾನ್ ಮಲಿಕ್ ಭಾರತಕ್ಕೆ ಅತ್ಯುತ್ತಮ ಬೌಲರ್ ಆಗಲಿದ್ದಾರೆ ಎಂದು ಶ್ರೀಲಂಕಾದ ಮಾಜಿ ವೇಗಿ ಚಮಿಂದಾ ವಾಸ್ ಹೇಳಿದ್ದಾರೆ.