
ಪಾಕಿಸ್ತಾನ ಸೂಪರ್ ಲೀಗ್ (PSL) ಆರಂಭ ಆಗಿದೆ. ಮಾರ್ಚ್ 26ರಂದು ಓಪನಿಂಗ್ ಮ್ಯಾಚ್ ನಡೆದಿದೆ. ಆದರೆ, ಈ ಪಂದ್ಯವನ್ನು ನೋಡಲು ಒಬ್ಬೇ ಒಬ್ಬರೂ ಬಂದಿರಲಿಲ್ಲ. ಹಾಗಂತ ಇದರ ಮೇಲೆ ಯಾರೊಬ್ಬರಿಗೂ ಆಸಕ್ತಿ ಇಲ್ಲ ಎಂದಲ್ಲ. ಇದಕ್ಕೆ ಕಾರಣ ಆಗಿದ್ದು ಇಸ್ರೇಲ್-ಅಮೆರಿಕ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ. ಈ ಯುದ್ಧ ಪಿಎಸ್ಎಲ್ ಮೇಲೆ ನೇರ ಪರಿಣಾಮ ಬೀರಿದೆ.
ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಒಟ್ಟೂ 8 ತಂಡಗಳು ಆಡುತ್ತಿವೆ. ಮಾರ್ಚ್ 26ರಿಂದ ಆರಂಭ ಆಗಿ ಮೇ 3ರಂದು ಫೈನಲ್ ನಡೆಯಲಿದೆ. ಯುದ್ಧದ ಪರಿಸ್ಥಿತಿಯಿಂದ ಇರಾನ್ ಹಾರ್ಮೂಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಹೀಗಾಗಿ, ತೈಲ ಹಾಗೂ ಗ್ಯಾಸ್ ಹಡಗು ಇಲ್ಲಿಂದ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪಾಕಿಸ್ತಾನದಲ್ಲಿ ತೈಲದ ಕೊರತೆ ಉಂಟಾಗಿದೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಪಿಎಸ್ಎಲ್ಗೆ ಅಭಿಮಾನಿಗಳು ಬರದಂತೆ ತಡೆ ಹಾಕಲಾಗಿದೆ. ಅಲ್ಲದೆ, ಎಲ್ಲಾ ಪಂದ್ಯಗಳು ಕೇವಲ ಕರಾಚಿ ಹಾಗೂ ಲಾಹೋರ್ನಲ್ಲಿ ಮಾತ್ರ ನಡೆಯಲಿವೆ. ಈ ಬಗ್ಗೆ ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಆರ್ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ
ಒಂದೊಮ್ಮೆ ಮೇ 3ರ ಒಳಗೆ ಸದ್ಯದ ಯುದ್ಧದ ಪರಿಸ್ಥಿತಿ ಕೊನೆಯಾಗಿ ತೈಲ ಹಾಗೂ ಗ್ಯಾಸ್ ಮತ್ತೆ ಪೂರೈಕೆ ಆದರೆ, ಫ್ಯಾನ್ಸ್ನ ಮತ್ತೆ ಕರೆಸಿಕೊಳ್ಳಲಾಗುವುದು ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಸದ್ಯ ಖಾಲಿ ಸ್ಟೇಡಿಯಂ ಹಾಗೂ ಫೋಟೋ ಹಾಗೂ ವಿಡಿಯೋಗಳನ್ನು ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ‘ಪಾಕಿಸ್ತಾನಕ್ಕೆ ಅವಮಾನ. ಪಿಎಸ್ಎಲ್ ಪಂದ್ಯ ನೋಡಲು ಯಾರೊಬ್ಬರೂ ಬಂದಿಲ್ಲ’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ ಎಂಬುದು ಕೆಲವರಿಗೆ ಗೊತ್ತಾಗಿದೆ.
ಲಾಹೋರ್ ಹಾಗೂ ಹೈದರಾಬಾದ್ ಮಧ್ಯೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಲಾಹೋರ್ 69 ರನ್ಗಳ ಗೆಲುವು ಕಂಡಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Fri, 27 March 26