AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಯುನೈಟೆಡ್‌ ಸ್ಪಿರಿಟ್ಸ್‌ ಕಂಪನಿಯು ಆರ್​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್​​​ಗೆ 16,706 ಕೋಟಿ ರೂ.ಗೆ ಮಾರಾಟ ಮಾಡಿದೆ. ಆರ್​ಸಿಬಿ ಹೆಸರು ಬದಲಾಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದವು. ಈ ವದಂತಿಗಳಿಗೆ ಆದಿತ್ಯಾ ಬಿರ್ಲಾ ಸಮೂಹದ ಅನನ್ಯಾ ಬಿರ್ಲಾ ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿರೋ ಸ್ಪಷ್ಟನೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ
ಅನನ್ಯಾ ಬಿರ್ಲಾ
ರಾಜೇಶ್ ದುಗ್ಗುಮನೆ
|

Updated on:Mar 26, 2026 | 12:49 PM

Share

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಆರ್​​​ಸಿಬಿ (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್​​​ಗೆ ಮಾರಾಟ ಮಾಡಿದೆ. 16,706 ಕೋಟಿ ರೂಪಾಯಿಗೆ ಈ ಡೀಲ್ ಪೂರ್ಣಗೊಂಡಿದೆ. ಟೈಮ್ಸ್ ಆಫ್ ಇಂಡಿಯಾ ಸೇರಿ ಕೆಲವು ಕಂಪನಿಗಳು ಆದಿತ್ಯಾ ಬಿರ್ಲಾಗೆ ಬೆಂಬಲ ನೀಡಿವೆ. ಈ ಮಧ್ಯೆ ಆರ್​​​ಸಿಬಿ ಹೆಸರು ಬದಲಾವಣೆ ಆಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ವದಂತಿ ಬಗ್ಗೆ ಅನನ್ಯಾ ಬಿರ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಷಯಗಳಿಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಮಲ್ಯ ಬೆಂಗಳೂರಿನವರು. ಹೀಗಾಗಿ, ತಂಡದಲ್ಲಿ ಬೆಂಗಳೂರು ಬರುವಂತ ನೋಡಿಕೊಂಡರು. ಎಲ್ಲವನ್ನೂ ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಇಟ್ಟರು. ಈ ಹೆಸರು ಈಗ ಅಭಿಮಾನಿಗಳ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹೀಗಾಗಿ, ಹೆಸರು ಬದಲಿಸಿದಂತೆ ಕೋರಿಕೊಳ್ಳಲಾಗುತ್ತಿತ್ತು. ಇದಕ್ಕೆ ಅನನ್ಯಾ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಆರ್​​ಸಿಬಿ ಹೆಸರು ಇಂಗ್ಲಿಷ್​ ಅಲ್ಲಿ ‘Royal Challengers Bangalore’ ಎಂದಿತ್ತು. ನಂತರ Bangalore ಅನ್ನು Bengaluru ಎಂದು ಬದಲಿಸಲಾಯಿತು. ಈ ಮೂಲಕ ಕನ್ನಡಿಗರ ಭಾವನೆಗೆ ಬೆಲೆ ಕೊಡಲಾಗಿತ್ತು. ಈಗ ಹೊಸ ಮಾಲೀಕರು ತಂಡ ಬದಲಿಸುತ್ತಾರೆ ಎಂದು ಹೇಳಲಾಗುತ್ತಾ ಬರಲಾಯಿತು. ಆದರೆ, ಆ ರೀತಿ ಇಲ್ಲ ಎಂಬುದು ಅನನ್ಯಾ ಸ್ಪಷ್ಟನೆ. ‘ಆರ್​​​ಸಿಬಿ ಹೆಸರು ಬದಲಾಗುವುದಿಲ್ಲ’ ಎಂದು ಇನ್​​ಸ್ಟಾ ಸ್ಟೇಟಸ್​​​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ ಅನ್ನು ಅನನ್ಯಾ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.

ಇದನ್ನೂ ಓದಿ: ​​RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

ಇಷ್ಟು ದಿನಗಳಿಂದ ಹೈದರಾಬಾದ್ ತಂಡ ಮಾಲೀಕರಾದ ಕಾವ್ಯಾ ಮಾರನ್ ಸಾಕಷ್ಟು ಮಿಂಚುತ್ತಿದ್ದು, ಇದೀಗ ಅವರಿಗೆ ಕಾಂಪಿಟೇಷನ್ ಕೊಡೋಕೆ ಅನನ್ಯಾ ಬಂದಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಹೀಗಾಗಿ, ಆರ್​​ಸಿಬಿ ಪಂದ್ಯಗಳಲ್ಲಿ ಇವರು ಹೈಲೈಟ್ ಆಗಬಹುದು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:00 pm, Thu, 26 March 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ