AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್ ಗೆಲ್ಲಲು ಪಾಕಿಸ್ತಾನ್ ತಂಡದ ಖತರ್​ನಾಕ್ ಪ್ಲ್ಯಾನ್

Asia Cup 2025: ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಅದರಂತೆ ಭಾರತ, ಪಾಕಿಸ್ತಾನ್, ಯುಎಇ, ಒಮಾನ್ ತಂಡಗಳು ಗ್ರೂಪ್ ಎ ನಲ್ಲಿ ಕಣಕ್ಕಿಳಿದರೆ, ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಹಾಂಗ್​ಕಾಂಗ್ ತಂಡಗಳು ಗ್ರೂಪ್ ಬಿ ನಲ್ಲಿ ಸೆಣಲಿಸಲಿದೆ. ಈ ತಂಡಗಳಲ್ಲಿ 4 ಟೀಮ್​ಗಳು ಸೂಪರ್-4 ಹಂತಕ್ಕೇರಲಿದೆ. ಸೂಪರ್-4 ಹಂತದ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಅಲಂಕರಿಸುವ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ.

ಏಷ್ಯಾಕಪ್ ಗೆಲ್ಲಲು ಪಾಕಿಸ್ತಾನ್ ತಂಡದ ಖತರ್​ನಾಕ್ ಪ್ಲ್ಯಾನ್
Pakistan
ಝಾಹಿರ್ ಯೂಸುಫ್
|

Updated on: Aug 02, 2025 | 11:55 AM

Share

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಏಷ್ಯಾಕಪ್​​​ ಗೆಲ್ಲಲು ಪಾಕಿಸ್ತಾನ್ ತಂಡ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಅದು ಸಹ ಏಷ್ಯಾಕಪ್​​ಗೂ ಮುನ್ನ ತ್ರಿಕೋನ ಸರಣಿ ಆಯೋಜಿಸುವ ಮೂಲಕ. ಪಾಕಿಸ್ತಾನ್ ಕ್ರಿಕೆಟ್​ ಮಂಡಳಿ ಆಗಸ್ಟ್ 29 ರಿಂದ ಯುಎಇನಲ್ಲಿ ಮೂರು ತಂಡಗಳ ನಡುವಣ ತ್ರಿಕೋನ ಸರಣಿ ಆಯೋಜಿಸಲು ನಿರ್ಧರಿಸಿದೆ.

ಶಾರ್ಜಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಪಾಕಿಸ್ತಾನ್ ವಿರುದ್ಧ ಅಫ್ಘಾನಿಸ್ತಾನ್ ಹಾಗೂ ಯುಎಇ ತಂಡಗಳು ಕಣಕ್ಕಿಳಿಯಲಿವೆ. ಫೈನಲ್ ಸೇರಿದಂತೆ ಒಟ್ಟು 7 ಪಂದ್ಯಗಳ ಸರಣಿಯ ಮೂಲಕ ಯುಎಇನಲ್ಲೇ ಏಷ್ಯಾಕಪ್​​​ಗಾಗಿ ಸಿದ್ಧತೆ ನಡೆಸಲು ಪಾಕ್ ತಂಡ ಪ್ಲ್ಯಾನ್ ರೂಪಿಸಿದೆ.  ಇದಕ್ಕಾಗಿ ಏಷ್ಯಾಕಪ್​ಗೆ ಸರಿಹೊಂದುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.

ಅದರಂತೆ ಈ ಸರಣಿಯು ಆಗಸ್ಟ್ 29 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 7 ರಂದು ನಡೆಯಲಿದೆ. ಅಂದರೆ ಏಷ್ಯಾಕಪ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ತ್ರಿಕೋನ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.

ಇದಾದ ಬಳಿಕ ಪಾಕಿಸ್ತಾನ್ ತಂಡವು ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿದೆ. ಏಷ್ಯಾಕಪ್​ನಲ್ಲಿ ಪಾಕ್ ಪಡೆಯ ಮೊದಲ ಎದುರಾಳಿ ಒಮಾನ್. ಸೆಪ್ಟೆಂಬರ್​ 12 ರಂದು ಪಾಕಿಸ್ತಾನ್ ಹಾಗೂ ಒಮಾನ್ ಮುಖಾಮುಖಿಯಾಗಲಿದ್ದು.

ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ಜರುಗಲಿದ್ದು, ಅದಕ್ಕೂ ಮುನ್ನ ತ್ರಿಕೋನ ಸರಣಿಯ ಮೂಲಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲು ಪಾಕಿಸ್ತಾನ್ ತಂಡ ಪ್ಲ್ಯಾನ್ ರೂಪಿಸಿದೆ.

ಪಾಕಿಸ್ತಾನ್-ಅಫ್ಘಾನಿಸ್ತಾನ-ಯುಎಇ ತ್ರಿಕೋನ ಸರಣಿ ವೇಳಾಪಟ್ಟಿ:

  1. ಆಗಸ್ಟ್ 29 ಅಫ್ಘಾನಿಸ್ತಾನ್ v ಪಾಕಿಸ್ತಾನ (ಶಾರ್ಜಾ ಸ್ಟೇಡಿಯಂ)
  2. ಆಗಸ್ಟ್ 30 ಯುಎಇ v ಪಾಕಿಸ್ತಾನ್ (ಶಾರ್ಜಾ ಸ್ಟೇಡಿಯಂ)
  3. ಸೆಪ್ಟೆಂಬರ್ 1 ಯುಎಇ v ಅಫ್ಘಾನಿಸ್ತಾನ್ (ಶಾರ್ಜಾ ಸ್ಟೇಡಿಯಂ)
  4. ಸೆಪ್ಟೆಂಬರ್ 2 ಪಾಕಿಸ್ತಾನ್ v ಅಫ್ಘಾನಿಸ್ತಾನ್ (ಶಾರ್ಜಾ ಸ್ಟೇಡಿಯಂ)
  5. ಸೆಪ್ಟೆಂಬರ್ 4 ಪಾಕಿಸ್ತಾನ್ v ಯುಎಇ (ಶಾರ್ಜಾ ಸ್ಟೇಡಿಯಂ)
  6. ಸೆಪ್ಟೆಂಬರ್ 5 ಅಫ್ಘಾನಿಸ್ತಾನ್ v ಯುಎಇ (ಶಾರ್ಜಾ ಸ್ಟೇಡಿಯಂ)
  7. ಸೆಪ್ಟೆಂಬರ್ 7 ಫೈನಲ್ ಪಂದ್ಯ (ಶಾರ್ಜಾ ಸ್ಟೇಡಿಯಂ)

ಇದನ್ನೂ ಓದಿ: ಮಾಜಿ ಆಟಗಾರನಿಗೆ ವಿಶೇಷ ಗೌರವ… ಹೆಡ್​ಬ್ಯಾಂಡ್ ಧರಿಸಿ ಕಣಕ್ಕಿಳಿದ ಸಿರಾಜ್

ಪ್ರಸ್ತುತ ಪಾಕಿಸ್ತಾನ್ ಟಿ20 ತಂಡ:

ಸಲ್ಮಾನ್ ಅಲಿ ಅಘಾ (ನಾಯಕ), ಸೈಮ್ ಅಯ್ಯೂಬ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್-ಕೀಪರ್), ಮೊಹಮ್ಮದ್ ನವಾಝ್, ಸಾಹಿಬ್​ಝಾದ ಫರ್ಹಾನ್ (ವಿಕೆಟ್-ಕೀಪರ್), ಶಾಹೀನ್ ಶಾ ಅಫ್ರಿದಿ, ಸುಫಿಯಾನ್ ಮುಖೀಮ್.