- Kannada News Photo gallery Cricket photos KL Rahul misses Sunil Gavaskar's huge record by 10 runs in IND vs ENG Test
ಕೇವಲ 10 ರನ್ಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ ಕೆಎಲ್ ರಾಹುಲ್
KL Rahul: ಕೆಎಲ್ ರಾಹುಲ್ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿವೊಂದರಲ್ಲಿ 500+ ರನ್ ಕಲೆಹಾಕಿದ್ದಾರೆ. ಈ ಸ್ಮರಣೀಯ ಪ್ರದರ್ಶನದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಬರೆಯುವ ಅವಕಾಶ ಕೆಎಲ್ ರಾಹುಲ್ ಮುಂದಿತ್ತು. ಆದರೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಫಲರಾಗುವ ಮೂಲಕ ಭರ್ಜರಿ ದಾಖಲೆಯನ್ನು ತಪ್ಪಿಸಿಕೊಂಡಿದ್ದಾರೆ.
Updated on: Aug 02, 2025 | 2:30 PM

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದ ನಾಲ್ಕು ಮ್ಯಾಚ್ಗಳಲ್ಲಿ 2 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದ ರಾಹುಲ್ ಕೊನೆಯ ಪಂದ್ಯದಲ್ಲಿ ಎಡವಿದ್ದಾರೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಕೇವಲ 14 ರನ್ಗಳಿಸಿ ಔಟಾಗಿದ್ದರು.

ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 28 ಎಸೆತಗಳನ್ನು ಎದುರಿಸಿದರೂ ಕೆಎಲ್ ರಾಹುಲ್ ಕಲೆಹಾಕಿದ್ದು ಕೇವಲ 7 ರನ್ಗಳು ಮಾತ್ರ. ಈ ಮೂಲಕ ಅಂತಿಮ ಪಂದ್ಯದಲ್ಲಿ 21 ರನ್ಗಳಿಸಿ ಬ್ಯಾಟಿಂಗ್ ಮುಗಿಸಿದ್ದಾರೆ. ಈ ಇಪ್ಪತ್ತೊಂದು ರನ್ಗಳೊಂದಿಗೆ ಕೆಎಲ್ಆರ್ ಅವರು ಈ ಬಾರಿಯ ಸರಣಿಯಲ್ಲಿ ಒಟ್ಟು 532 ರನ್ ಕಲೆಹಾಕಿದ್ದಾರೆ.

ಆದರೆ ಕೇವಲ 10 ರನ್ಗಳಿಂದ ಭರ್ಜರಿ ದಾಖಲೆಯೊಂದನ್ನು ನಿರ್ಮಿಸುವ ಅವಕಾಶವನ್ನು ಕೆಎಲ್ ರಾಹುಲ್ ತಪ್ಪಿಸಿಕೊಂಡಿದ್ದಾರೆ. ಅಂದರೆ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ನಲ್ಲಿ ಕೆಲ್ಆರ್ 31 ರನ್ಗಳಿಸಿದ್ದರೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಆರಂಭಿಕ ಬ್ಯಾಟ್ಸ್ಮನ್ ಎನಿಸಿಕೊಳ್ಳುತ್ತಿದ್ದರು.

ಸದ್ಯ ಈ ದಾಖಲೆ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿಯೇ ಉಳಿದುಕೊಂಡಿದೆ. 1979 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಗವಾಸ್ಕರ್ ಬರೋಬ್ಬರಿ 542 ರನ್ಗಳಿಸಿದ್ದರು. ಈ ಮೂಲಕ ವಿದೇಶಿ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು.

ಈ ಭರ್ಜರಿ ದಾಖಲೆಯನ್ನು ಮುರಿಯಲು ಕೆಎಲ್ ರಾಹುಲ್ಗೆ ಉತ್ತಮ ಅವಕಾಶವಿತ್ತು. ಆದರೆ ಅಂತಿಮ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 14 ರನ್ಗಳಿಸಿ ಔಟಾಗಿದ್ದ ಕೆಎಲ್ ರಾಹುಲ್, ದ್ವಿತೀಯ ಇನಿಂಗ್ಸ್ನಲ್ಲಿ 7 ರನ್ಗಳಿಸಿ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಒಟ್ಟು 532 ರನ್ಗಳಿಸಿ ಇಂಗ್ಲೆಂಡ್ ವಿರುದ್ಧದ ವಿದೇಶಿ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ಗಳಿಸಿದ 2ನೇ ಭಾರತೀಯ ಆರಂಭಿಕ ಬ್ಯಾಟರ್ ಎಂಬ ದಾಖಲೆಗೆ ತೃಪ್ತಿಪಟ್ಟುಕೊಂಡಿದ್ದಾರೆ.
