AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs ENG: ಬಲಿಷ್ಠ ಇಂಗ್ಲೆಂಡ್ ಎದುರು ಅದೃಷ್ಟದ ಬೆನ್ನೇರಿ ಫೈನಲ್​ಗೆ ಎಂಟ್ರಿಕೊಟ್ಟವರ ಆಟ ನಡೆಯುತ್ತಾ..?

T20 World Cup 2022: ಈ ಪಂದ್ಯ ಇಂಗ್ಲೆಂಡ್ ತಂಡದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹಾಗೂ ಪಾಕಿಸ್ತಾನದ ಅತ್ಯುತ್ತಮ ಬೌಲಿಂಗ್ ನಡುವೆ ನಡೆಯಲಿದೆ.

PAK vs ENG: ಬಲಿಷ್ಠ ಇಂಗ್ಲೆಂಡ್ ಎದುರು ಅದೃಷ್ಟದ ಬೆನ್ನೇರಿ ಫೈನಲ್​ಗೆ ಎಂಟ್ರಿಕೊಟ್ಟವರ ಆಟ ನಡೆಯುತ್ತಾ..?
PAK VS ENG
TV9 Web
| Updated By: ಪೃಥ್ವಿಶಂಕರ|

Updated on:Nov 12, 2022 | 2:18 PM

Share

ಟಿ20 ವಿಶ್ವಕಪ್ 2022ರ (T20 World Cup 2022) ಹೊಸ ಚಾಂಪಿಯನ್ ಯಾರು ಎಂಬುದಕ್ಕೆ ಅಧಿಕೃತ ಮುದ್ರೆ ಬೀಳಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ವಿಶ್ವಕಪ್ ಅಂತಿಮ ಹಂತ ತಲುಲ್ಲಿದ್ದು, ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ತಂಡವನ್ನು (Pakistan vs England) ಎದುರಿಸಲಿದೆ. ಎರಡೂ ತಂಡಗಳು ಈ ಟ್ರೋಫಿಯನ್ನು ಎರಡನೇ ಬಾರಿಗೆ ವಶಪಡಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ. 2009ರಲ್ಲಿ ಪಾಕಿಸ್ತಾನ ಮತ್ತು 2010ರಲ್ಲಿ ಇಂಗ್ಲೆಂಡ್‌ ಟಿ20 ವಿಶ್ವಕಪ್‌ ಗೆದ್ದುಕೊಂಡಿದ್ದವು. 2009ರ ನಂತರ ಇದೀಗ ಪಾಕಿಸ್ತಾನ ಫೈನಲ್‌ ಪಂದ್ಯ ಆಡಲಿದ್ದು, ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿದೆ.

ಲೆಜೆಂಡರಿ ಕ್ರಿಕೆಟಿಗ ಇಮ್ರಾನ್ ಖಾನ್ ಜೊತೆಗೆ ಪಾಕಿಸ್ತಾನ ಕ್ರಿಕೆಟ್‌ನ ಹಾಲ್ ಆಫ್ ಫೇಮ್ ಸೇರಲು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಫೈನಲ್‌ನಲ್ಲಿ ಇನ್ ಫಾರ್ಮ್ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದ್ದಾರೆ. ಆದಾಗ್ಯೂ, 2009 ರ ಚಾಂಪಿಯನ್‌ಗಳ ಫೈನಲ್‌ ಓಟ ಯಾವುದೇ ರೋಮಾಂಚನಕಾರಿ ಸ್ಕ್ರಿಪ್ಟ್‌ಗಿಂತ ಕಡಿಮೆ ಏನಲ್ಲ. ಏಕೆಂದರೆ ಪಂದ್ಯಾವಳಿಯ ಮೊದಲ ವಾರದಲ್ಲಿಯೇ ನಾಕ್‌ಔಟ್‌ ಸುತ್ತಿನಿಂದ ಹೊರಬೀಳುವ ಬಯದಲ್ಲಿದ್ದ ಪಾಕಿಸ್ತಾನಕ್ಕೆ ಕೊನೆಯ 3 ಗೆಲುವುಗಳು ಹಾಗೂ ಅದೃಷ್ಟ ಸರಿಯಾದ ಸಮಯಕ್ಕೆ ಕೈಹಿಡಿಯಿತು.

ಎರಡನೇ ವಾರದಲ್ಲಿ ಟ್ವೀಸ್ಟ್ ಮೇಲೆ ಟ್ವೀಸ್ಟ್

ಆದರೆ ಪಂದ್ಯಾವಳಿಯ ಎರಡನೇ ವಾರದಲ್ಲಿ, ಪಾಕಿಸ್ತಾನ ತಂಡ ನಾಟಕೀಯ ಪುನರಾಗಮನವನ್ನು ಮಾಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ತನ್ನ ಭರವಸೆಯನ್ನು ಹೆಚ್ಚಿಸಿಕೊಂಡಿತು. ಆ ಬಳಿಕ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ನೆದರ್ಲ್ಯಾಂಡ್ಸ್ ತಂಡ ಪಾಕಿಸ್ತಾನದ ಸೇಮಿಸ್​ ಕನಸಿಗೆ ರೆಕ್ಕೆ ಕಟ್ಟಿಕೊಟ್ಟಿತು. ಆ ಬಳಿಕ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಪಾಕಿಸ್ತಾನ ಅಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ.

ಇಂಗ್ಲೆಂಡ್ ಬಲಿಷ್ಠವಾಗಿದೆ

ಇಂಗ್ಲೆಂಡ್‌ನ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರನ್ನು ಕಟ್ಟಿಹಾಕಲು ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್ ಮತ್ತು ಹ್ಯಾರಿಸ್ ರೌಫ್ ಇನ್ನಿಲ್ಲದ ಕಸರತ್ತು ನಡೆಸಬೇಕಿದೆ. ಇಂಗ್ಲೆಂಡ್‌ ತಂಡ ಟಿ20 ಕ್ರಿಕೆಟ್‌ನ ಸ್ಪೆಷಲಿಸ್ಟ್​ಗಳನ್ನೆ ಹೊಂದಿದೆ. ಹೀಗಾಗಿ ಬಾಬರ್ ಪಡೆ ಸರಿಯಾದ ತಂತ್ರದೊಂದಿಗೆ ಆಂಗ್ಲರ ವಿರುದ್ಧ ಕಣಕ್ಕಿಳಿಯಬೇಕಿದೆ. ಇಲ್ಲದಿದ್ದರೆ ಬಾಬರ್ ತಂಡ ಬಲಿಷ್ಠ ಇಂಗ್ಲೆಂಡ್​ಗೆ ಸುಲಭ ತುತ್ತಾಗುವುದು ಖಚಿತ.

ಆಂಗ್ಲ ಬ್ಯಾಟ್ಸ್‌ಮನ್‌ಗಳ ಮತ್ತು ಪಾಕ್ ಬೌಲರ್‌ಗಳ ನಡುವಿನ ಕದನ

ಈ ಪಂದ್ಯ ಇಂಗ್ಲೆಂಡ್ ತಂಡದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹಾಗೂ ಪಾಕಿಸ್ತಾನದ ಅತ್ಯುತ್ತಮ ಬೌಲಿಂಗ್ ನಡುವೆ ನಡೆಯಲಿದೆ. ಹೇಲ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಮೀರಿಸುವುದು ಪಾಕಿಸ್ತಾನಕ್ಕೆ ಸವಾಲಾಗಿದೆ. ಅಲ್ಲದೆ, ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಎದುರಿಸುವುದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ.

1992 ರ ಫೈನಲ್‌ನಲ್ಲಿ ಇಮ್ರಾನ್ ಖಾನ್ ಮತ್ತು ಜಾವೇದ್ ಮಿಯಾಂದಾದ್ ತೋರಿದ ಅದೇ ಡೆಪ್ತ್ ಅನ್ನು ಬ್ಯಾಟಿಂಗ್‌ನಲ್ಲಿ ತೋರಿಸುವ ಸಾಮರ್ಥ್ಯ ಬಾಬರ್ ಮತ್ತು ರಿಜ್ವಾನ್‌ಗೆ ಇದೆಯೇ ಎಂದು ನೋಡಬೇಕು. ದೊಡ್ಡ ಪಂದ್ಯಗಳಲ್ಲಿ ಒಬ್ಬ ಆಟಗಾರ ಯಾವಾಗಲೂ ಆಕರ್ಷಣೆಯ ಕೇಂದ್ರವಾಗುತ್ತಾನೆ. ಹೀಗಾಗಿ ಸ್ಟೋಕ್ಸ್ 2019 ರ ಲಾರ್ಡ್ಸ್ ಪ್ರದರ್ಶನವನ್ನು ಪುನರಾವರ್ತಿಸಲು ಪ್ರಯತ್ನಿಸಲಿದ್ದಾರೆ.

ಮಳೆ ವಿಲನ್ ಆಗುತ್ತಾ?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಫೈನಲ್‌ನಲ್ಲಿ ಭಾನುವಾರ ಮತ್ತು ಸೋಮವಾರ (ಮೀಸಲು ದಿನ) ಮಳೆಯ ಛಾಯೆ ಇದೆ. ಹೀಗಾಗಿ ವಿಶ್ವಕಪ್ ನಿಯಮಾವಳಿಗಳ ಪ್ರಕಾರ ಸೂಪರ್ 12 ಸುತ್ತಿನ ಪಂದ್ಯಗಳಲ್ಲಿ ಮಳೆ ಬಂದು ಆಟಕ್ಕೆ ಅಡ್ಡಿಯಾದರೆ, ಕನಿಷ್ಠ ಐದು ಓವರ್‌ಗಳ ಆಟ ನಡೆದರೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಸೆಮಿಫೈನಲ್‌ ಹಾಗೂ ಫೈನಲ್ ಪಂದ್ಯಗಳಿಗೆ ಈ ನಿಯಮಗಳಲ್ಲಿ ಬದಲಾವಣೆ ತಂದಿದ್ದು ಕನಿಷ್ಠ 10 ಓವರ್​ಗಳ ಆಟ ನಡೆದರೆ ಮಾತ್ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ ಮಳೆಯಿಂದ ನಿಗಧಿತ ದಿನದಲ್ಲಿ ಆಟ ನಡೆಯದಿದ್ದರೆ, ಇದಕ್ಕಾಗಿ ಮೀಸಲು ದಿನವನ್ನು ಇರಿಸಲಾಗಿದೆ.

ನಾವು ಎರಡೂ ತಂಡಗಳ ಬ್ಯಾಟಿಂಗ್ ಘಟಕವನ್ನು ಗಮನಿಸಿದರೆ, ಇಂಗ್ಲೆಂಡ್‌ನಲ್ಲಿ ಹೇಲ್ಸ್, ಬಟ್ಲರ್, ಸ್ಟೋಕ್ಸ್, ಫಿಲ್ ಸಾಲ್ಟ್ (ಡೇವಿಡ್ ಮಲಾನ್ ಸ್ಥಾನದಲ್ಲಿ), ಹ್ಯಾರಿ ಬ್ರೂಕ್, ಮೊಯಿನ್ ಅಲಿ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ಸ್ಫೋಟಕ ಬ್ಯಾಟ್ಸ್​ಮನ್​ಗಳ ದಂಡೆ ಇದೆ. ಇತ್ತ ಪಾಕಿಸ್ತಾನ ತಂಡ ಹೆಚ್ಚಾಗಿ ರಿಜ್ವಾನ್ ಹಾಗೂ ಬಾಬರ್ ಮೇಲೆಯೇ ಹೆಚ್ಚು ಅವಲಂಭಿತವಾಗಿದೆ. ಇನ್ನುಳಿದಂತೆ ಪಾಕ್ ಬ್ಯಾಟಿಂಗ್ ವಿಭಾಗದಲ್ಲಿ ಶಾನ್ ಮಸೂದ್, ಮೊಹಮ್ಮದ್ ಹ್ಯಾರಿಸ್ ಮತ್ತು ಇಫ್ತಿಕರ್ ಅಹ್ಮದ್ ಕೂಡ ಇದ್ದಾರೆ.

ತಂಡಗಳು ಈ ಕೆಳಗಿನಂತಿವೆ:

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಆದಿಲ್ ರಶೀದ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್, ಸ್ಯಾಮ್ ಕರನ್, ಮಾರ್ಕ್ ವುಡ್, ಟಿಮಲ್ ಮಿಲ್ಸ್.

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್, ಖುಷ್ದಿಲ್ ಶಾ, ಆಸಿಫ್ ಅಲಿ, ಹೈದರ್ ಅಲಿ, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಹಾರಿಸ್ ರೌಫ್, ಶಾದಾಬ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹಿನ್ ಶಾ ಅಫ್ರಿದಿ

Published On - 2:15 pm, Sat, 12 November 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್