AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babar Azam: ಪ್ರಶ್ನಿಸಿದ ಪರ್ತಕರ್ತನನ್ನು ಕಣ್ಣಲ್ಲೇ ಗುರಾಯಿಸಿದ ಪಾಕ್ ನಾಯಕ ಬಾಬರ್; ವಿಡಿಯೋ ವೈರಲ್

Babar Azam: ಪತ್ರಿಕಾಗೋಷ್ಠಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಪತ್ರಕರ್ತರೊಬ್ಬರು ತಂಡದ ನಾಯಕ ಬಾಬರ್ ಮತ್ತು ತಂಡದ ಮಾಧ್ಯಮ ವ್ಯವಸ್ಥಾಪಕರ ಮೇಲೆ ಕೋಪಗೊಂಡಿದ್ದಾರೆ.

Babar Azam: ಪ್ರಶ್ನಿಸಿದ ಪರ್ತಕರ್ತನನ್ನು ಕಣ್ಣಲ್ಲೇ ಗುರಾಯಿಸಿದ ಪಾಕ್ ನಾಯಕ ಬಾಬರ್; ವಿಡಿಯೋ ವೈರಲ್
ಬಾಬರ್ ಅಜಂ
TV9 Web
| Edited By: |

Updated on:Dec 31, 2022 | 12:27 PM

Share

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ (Pakistan vs New zealand) ಕ್ರಿಕೆಟ್ ತಂಡ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲೂ ಪಾಕಿಸ್ತಾನ ತಂಡಕ್ಕೆ ಸೋಲಿನ ಆತಂಕ ಎದುರಾಗಿತ್ತು, ಆದರೆ ಹೇಗೋ ಈ ಸೋಲಿನಿಂದ ಪಾರಾಗುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು. ಇದಾದ ಬಳಿಕ ಪಾಕ್ ನಾಯಕ ಬಾಬರ್ ಅಜಂ (Babar Azam) ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ ಈ ಪತ್ರಿಕಾಗೋಷ್ಠಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಪತ್ರಕರ್ತರೊಬ್ಬರು ತಂಡದ ನಾಯಕ ಬಾಬರ್ ಮತ್ತು ತಂಡದ ಮಾಧ್ಯಮ ವ್ಯವಸ್ಥಾಪಕರ ಮೇಲೆ ಕೋಪಗೊಂಡರು. ಪತ್ರಕರ್ತ ಕೋಪಗೊಂಡಿದ್ದನ್ನು ಆಶ್ಚರ್ಯಕರ ರೀತಿಯಲ್ಲಿ ನೋಡಿದ ಬಾಬರ್, ಕಣ್ಣಲ್ಲೇ ಆ ಪತ್ರಕರ್ತನನ್ನು ಗುರಾಯಿಸಿ ಅಲ್ಲಿಂದ ಹೊರ ನಡೆದಿದ್ದಾರೆ. ಇದೀಗ ಪಾಕ್ ನಾಯಕನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕರಾಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 438 ರನ್ ಗಳಿಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಿದ ನ್ಯೂಜಿಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 612 ರನ್ ಗಳಿಸಿ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತನ್ನ ಎಂಟು ವಿಕೆಟ್ ಕಳೆದುಕೊಂಡು 311 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ನ್ಯೂಜಿಲೆಂಡ್‌ಗೆ 138 ರನ್‌ಗಳ ಗೆಲುವಿನ ಗುರಿಯನ್ನು ನೀಡಿತು. ಆದರೆ ಅಂತಿಮ ದಿನದಾಟವಾಗಿದ್ದರಿಂದ ಪ್ರವಾಸಿ ತಂಡಕ್ಕೆ ಈ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಟೆಸ್ಟ್​ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಬೇಕಾಯಿತು.

ತವರಿನಲ್ಲಿ ಟೆಸ್ಟ್ ಸರಣಿ ಸೋಲು; ಬಾಬರ್ ಟೆಸ್ಟ್ ನಾಯಕತ್ವಕ್ಕೆ ಕುತ್ತು! ಮುಖ್ಯ ಕೋಚ್​ಗೂ ತಂಡದಿಂದ ಕೋಕ್

ಬಾಬರ್ ಮೇಲೆ ಕೋಪಗೊಂಡ ಪತ್ರಕರ್ತ

ಪಂದ್ಯದ ನಂತರ ಪತ್ರಿಕಾಗೋಷ್ಠಿ ನಡೆಸಿದ ಬಾಬರ್ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅಲ್ಲಿಂದ ಹೊರಡಲು ಅಣಿಯಾದರು. ಆದರೆ ಅಷ್ಟರಲ್ಲಿ ಪತ್ರಕರ್ತನೊಬ್ಬ ಪ್ರಶ್ನೆ ಕೇಳಲಾರಂಭಿಸಿದ. ಇದಕ್ಕೆ ಸೊಪ್ಪು ಹಾಕದ ಬಾಬರ್ ಅಲ್ಲಿಂದ ಹೊರಡಲು ಯತ್ನಿಸಿದರೆ, ಅವರ ಮಾಧ್ಯಮ ವ್ಯವಸ್ಥಾಪಕರ ಪತ್ರಕರ್ತ ಪ್ರಶ್ನೆ ಕೇಳುತ್ತಿರುವಾಗಲೆ ಮೈಕ್ ಆಫ್ ಮಾಡಿದ. ಇದರಿಂದ ಕೋಪಗೊಂಡ ಪತ್ರಕರ್ತ ‘ಇದು ಸರಿಯಾದ ನಡೆಯಲ್ಲ. ನಾನು ಆಗಿನಿಂದ ಪ್ರಶ್ನೆ ಕೇಳಲು ಪ್ರಯತ್ನಿಸುತ್ತಿದ್ದೇನೆ ಆದರೆ ನಿಮ್ಮ ಮಾಧ್ಯಮ ವ್ಯವಸ್ಥಾಪಕರ ನಾನು ಪ್ರಶ್ನೆ ಕೇಳುವುದಕ್ಕೆ ಮುನ್ನವೆ ಮೈಕ್ ಆಫ್ ಮಾಡಿದ್ದಾನೆ’ ಎಂದು ಬಾಬರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಪತ್ರಕರ್ತನ ಕೋಪದಿಂದ ಒಂದು ಕ್ಷಣ ಕಕ್ಕಾಬಿಕ್ಕಿಯಾದ ಪಾಕ್ ನಾಯಕ ಬಾಬರ್, ಆ ಪತ್ರಕರ್ತನತ್ತ ಸ್ವಲ್ಪ ಸಮಯ ಆಶ್ಚರ್ಯದಿಂದ ನೋಡಿ, ಅಲ್ಲಿಂದ ಹೊರಟು ಹೋಗಿದ್ದಾರೆ.

ಇಂಗ್ಲೆಂಡ್ ಎದುರು ತವರಿನಲ್ಲಿ ಸೋಲು

ಅದಾಕ್ಯೋ ಪಾಕಿಸ್ತಾನ ತಂಡಕ್ಕೆ ತವರಿನಲ್ಲಿ ಏನು ಸರಿಯಾಗಿ ಆಗಿ ಬರುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಸೋಲಿನಿಂದ ಬಚಾವ್ ಆಗಿರುವ ಪಾಕಿಸ್ತಾನ, ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿತ್ತು. ತವರಿನಲ್ಲಿ ಆಡುತ್ತಿದ್ದರೂ ಪಾಕಿಸ್ತಾನಕ್ಕೆ ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ಗೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು ಆಸ್ಟ್ರೇಲಿಯ ಪಾಕಿಸ್ತಾನದಲ್ಲಿಯೇ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು 1-0 ಅಂತರದಿಂದ ಸೋಲಿಸಿತ್ತು.

ಈಗ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿರುವ ಪಾಕ್ ಪಡೆ ಸರಣಿಯನ್ನು ಗೆಲ್ಲಲು ಪ್ರಯತ್ನಿಸಲಿದೆ. ಎರಡು ಪಂದ್ಯಗಳ ಟೆಸ್ಟ್‌ನ ಮೊದಲ ಪಂದ್ಯ ಡ್ರಾ ಆಗಿದ್ದು, ಈಗ ಉಭಯ ತಂಡಗಳು ಎರಡನೇ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿವೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ತಂಡ ತವರಿನಲ್ಲಿಯೇ ಸತತ ಮೂರನೇ ಸರಣಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವ ಅವಕಾಶ ಹೊಂದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Sat, 31 December 22

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ