AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022 Final: ಟಾಸ್ ಗೆದ್ದ ಪಾಕಿಸ್ತಾನ, ಲಂಕಾ ಬ್ಯಾಟಿಂಗ್; ಉಭಯ ತಂಡಗಳ ವಿವರ ಹೀಗಿದೆ

Asia Cup 2022 Final: ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಏಷ್ಯಾಕಪ್​ನಲ್ಲಿ ಶ್ರೀಲಂಕಾ 5 ಬಾರಿ ಚಾಂಪಿಯನ್ ಆಗಿದ್ದು, ಏತನ್ಮಧ್ಯೆ, ಈ ಮೆಗಾ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 2 ಬಾರಿ ಗೆದ್ದಿದೆ.

Asia Cup 2022 Final: ಟಾಸ್ ಗೆದ್ದ ಪಾಕಿಸ್ತಾನ, ಲಂಕಾ ಬ್ಯಾಟಿಂಗ್; ಉಭಯ ತಂಡಗಳ ವಿವರ ಹೀಗಿದೆ
Asia Cup 2022 Final
TV9 Web
| Edited By: |

Updated on:Sep 11, 2022 | 7:17 PM

Share

ಏಷ್ಯಾಕಪ್ ಫೈನಲ್​ನಲ್ಲಿ (Asia Cup 2022 Final) ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ( Pakistan and Sri Lanka) ತಂಡಗಳು ಮುಖಾಮುಖಿಯಾಘಿವೆ. ಇದರ ಭಾಗವಾಗಿ ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಏಷ್ಯಾಕಪ್​ನಲ್ಲಿ ಶ್ರೀಲಂಕಾ 5 ಬಾರಿ ಚಾಂಪಿಯನ್ ಆಗಿದ್ದು, ಏತನ್ಮಧ್ಯೆ, ಈ ಮೆಗಾ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 2 ಬಾರಿ ಗೆದ್ದಿದೆ. ಇದರೊಂದಿಗೆ ಬಾಬರ್ ಸೇನೆ ಈ ಬಾರಿ ಗೆದ್ದು ಮತ್ತೊಮ್ಮೆ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಇಲ್ಲಿ ಪಾಕಿಸ್ತಾನಕ್ಕೆ ಹತ್ತು ವರ್ಷಗಳ ನಂತರ ವಿಜೇತರಾಗುವ ಅವಕಾಶವಿದೆ. ಏತನ್ಮಧ್ಯೆ, ಶ್ರೀಲಂಕಾ 8 ವರ್ಷಗಳ ನಂತರ ಪ್ರಶಸ್ತಿ ಗೆಲ್ಲಲು ಬಯಸಿದೆ. ಈ ಕ್ರೀಡಾಕೂಟದಲ್ಲಿ ಕಳೆದ 16 ದಿನಗಳಲ್ಲಿ 13 ಪಂದ್ಯಗಳಲ್ಲಿ 6 ತಂಡಗಳು ತಮ್ಮ ಶಕ್ತಿ ಪ್ರದರ್ಶಿಸಿವೆ.

ಉಭಯ ತಂಡಗಳ ನಡುವೆ ಇದುವರೆಗೆ 22 ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 13 ಮತ್ತು ಶ್ರೀಲಂಕಾ 9 ಗೆಲುವು ಸಾಧಿಸಿದೆ. ಇದೇ ವೇಳೆ ಏಷ್ಯಾಕಪ್ ಕುರಿತು ಮಾತನಾಡುವುದಾದರೆ, ಉಭಯ ತಂಡಗಳು ಮೂರನೇ ಬಾರಿಗೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 8 ವರ್ಷಗಳ ಹಿಂದೆ ಉಭಯ ತಂಡಗಳು ಕೊನೆಯ ಬಾರಿ ಫೈನಲ್‌ನಲ್ಲಿ ಆಡಿದ್ದವು. ಆದರೆ 2014ರಲ್ಲಿ ನಡೆದಿದ್ದ ಫೈನಲ್​ನಲ್ಲಿ ಶ್ರೀಲಂಕಾ ಗೆದ್ದಿತ್ತು.

ಎರಡೂ ತಂಡಗಳು 2000 ಮತ್ತು 1986 ರಲ್ಲಿ ಏಷ್ಯಾಕಪ್ ಫೈನಲ್ ತಲುಪಿದ್ದವು. ಈ ಎರಡೂ ಫೈನಲ್​ಗಳಲ್ಲೂ ಶ್ರೀಲಂಕಾ ಗೆಲುವು ಗೆಲುವು ಸಾಧಿಸಿತ್ತು. ಆದರೆ 2000ದಲ್ಲಿ ನಡೆದಿದ್ದ ಏಷ್ಯಾಕಪ್​ ಫೈನಲ್​ನಲ್ಲಿ ಪಾಕಿಸ್ತಾನ ಚಾಂಪಿಯನ್​ ಪಟ್ಟಕ್ಕೇರಿತ್ತು.

ಫೈನಲ್​ಗೆ ಉಭಯ ತಂಡಗಳು

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸನೇನ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ದನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ

Published On - 7:14 pm, Sun, 11 September 22

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ