Sign In

By signing in or creating an account, you agree with Associated Broadcasting Company's Terms & Conditions and Privacy Policy.

3.04 ಕೋಟಿ ರೂ. ಮೇಲೆ ಕಣ್ಣಿಟ್ಟ ಪಾಕಿಸ್ತಾನ್..!

Champions Trophy 2025: ಚಾಂಪಿಯನ್ಸ್ ಟ್ರೋಫಿಯ 9ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಸೆಣಸಲಿದೆ. ಉಭಯ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದರೂ, ಕೊನೆಯ ಲೀಗ್ ಪಂದ್ಯದ ಗೆಲುವಿನ ಮೂಲಕ ತನ್ನ ಬಹುಮಾನ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು. ಅದರಂತೆ ಇದೀಗ ಪಾಕಿಸ್ತಾನ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದು 5ನೇ ಅಥವಾ 6ನೇ ಸ್ಥಾನ ಅಲಂಕರಿಸುವ ಇರಾದೆಯಲ್ಲಿದೆ.

3.04 ಕೋಟಿ ರೂ. ಮೇಲೆ ಕಣ್ಣಿಟ್ಟ ಪಾಕಿಸ್ತಾನ್..!
Pakistan Team
Follow us
ಝಾಹಿರ್ ಯೂಸುಫ್
|

Updated on: Feb 26, 2025 | 10:30 AM

ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ್ ತಂಡ ಇದೀಗ ಕೊನೆಯ ಲೀಗ್​ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಫೆಬ್ರವರಿ 27 ರಂದು ರಾವಲ್ಪಿಂಡಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲೇ ಪಾಕ್ ಪಡೆ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಏಕೆಂದರೆ ಈ ಮ್ಯಾಚ್​ನಲ್ಲೂ ಸೋತರೆ ಅಂಕ ಪಟ್ಟಿಯಲ್ಲಿ ಪಾಕಿಸ್ತಾನ್ ತಂಡ ಕೊನೆಯ ಸ್ಥಾನಕ್ಕೆ ಕುಸಿಯಲಿದೆ.

ಅಷ್ಟೇ ಅಲ್ಲದೆ ಕೊನೆಯ ಸ್ಥಾನ ಪಡೆದರೆ ಐಸಿಸಿ ಕಡೆಯಿಂದ ಸಿಗುವ ಸಂಭಾವನೆಯು ಕೂಡ ಕಡಿತವಾಗಲಿದೆ. ಅಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 59.81 ಕೋಟಿ ರೂ. ಬಹುಮಾನ ಮೊತ್ತವನ್ನು ಘೋಷಿಸಿದೆ. ಈ ಬಹುಮಾನ ಮೊತ್ತವನ್ನು ಅಂಕ ಪಟ್ಟಿಯನ್ನು ಆಧರಿಸಿ ನೀಡಲಾಗುತ್ತದೆ.

ಅಂದರೆ ಇಲ್ಲಿ ಚಾಂಪಿಯನ್ಸ್ ಹಾಗೂ ರನ್ನರ್ ಅಪ್ ತಂಡಗಳಿಗೆ ಅತೀ ಹೆಚ್ಚು ಮೊತ್ತ, ಸೆಮಿಫೈನಲಿಸ್ಟ್​ಗಳಿಗೆ ಒಂದು ಬಹುಮಾನ ಮೊತ್ತವನ್ನು ನಿಗದಿ ಮಾಡಲಾಗಿದೆ. ಇದಾದ ಬಳಿಕ ಯಾವ ತಂಡ ಅಂಕ ಪಟ್ಟಿಯಲ್ಲಿ 5,6,7,8ನೇ ಸ್ಥಾನಗಳನ್ನು ಅಲಂಕರಿಸುತ್ತದೆಯೋ ಅದಕ್ಕನುಗುಣವಾಗಿ ಬಹುಮಾನ ಮೊತ್ತ ಸಿಗಲಿದೆ.

ಅದರಂತೆ ಈಗಾಗಲೇ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿರುವ ಪಾಕಿಸ್ತಾನ್ ತಂಡದ ಮುಂದಿನ ಟಾರ್ಗೆಟ್ 5ನೇ ಸ್ಥಾನ. ಇದಕ್ಕಾಗಿ ಪಾಕ್ ಪಡೆ ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸಲೇಬೇಕು. ಈ ಮೂಲಕ ಅಂಕ ಪಟ್ಟಿಯಲ್ಲಿ 5ನೇ ಅಥವಾ 6ನೇ ಸ್ಥಾನ ಅಲಂಕರಿಸಿದರೆ ಬಹುಮಾನ ಮೊತ್ತವಾಗಿ 3.04 ಕೋಟಿ ರೂ. ಪಡೆಯಬಹುದು.

ಒಂದು ವೇಳೆ ಬಾಂಗ್ಲಾದೇಶ್ ವಿರುದ್ಧ ಕೂಡ ಪಾಕಿಸ್ತಾನ್ ತಂಡ ಸೋತರೆ, ಕೇವಲ 1.22 ಕೋಟಿ ರೂ. ಮಾತ್ರ ಸಿಗಲಿದೆ. ಹೀಗಾಗಿಯೇ ಪಾಕಿಸ್ತಾನ್ ಪಾಲಿಗೆ ಕೊನೆಯ ಲೀಗ್ ಪಂದ್ಯವು ಪ್ರತಿಷ್ಠೆ ಮಾತ್ರವಲ್ಲ, ಬಹುಮಾನದ ವಿಷಯದಿಂದಲೂ ಮಹತ್ವದ ಪಂದ್ಯವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಲ್ಲಿಸ್ ಪೆರ್ರಿ

ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ:

  • ಚಾಂಪಿಯನ್ಸ್ ತಂಡಕ್ಕೆ- 19.46 ಕೋಟಿ ರೂ.
  • ರನ್ನರ್ ಅಪ್ ತಂಡಕ್ಕೆ- 9.73 ಕೋಟಿ ರೂ.
  • ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೆ- 4.86 ಕೋಟಿ ರೂ.
  • 5 ಮತ್ತು 6ನೇ ಸ್ಥಾನ ಪಡೆದ ತಂಡಗಳಿಗೆ- 3.04 ಕೋಟಿ ರೂ.
  • 7 ಮತ್ತು 8ನೇ ಸ್ಥಾನ ಪಡೆದ ತಂಡಗಳಿಗೆ- 1.22 ಕೋಟಿ ರೂ.
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು