ಶಾಹಿದ್ ಅಫ್ರಿದಿಯ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರತದ ಏಕೈಕ ಆಟಗಾರನಿಗೆ ಮಾತ್ರ ಸ್ಥಾನ..!
Shahid Afridi: ಪಾಕಿಸ್ತಾನ್ ಪರ 524 ಪಂದ್ಯಗಳನ್ನಾಡಿರುವ ಶಾಹಿದ್ ಅಫ್ರಿದಿ ತಮ್ಮ ಆಲ್ಟೈಮ್ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ್ದಾರೆ. 11 ಸದಸ್ಯರ ಈ ತಂಡದಲ್ಲಿ ಭಾರತದಿಂದ ಏಕೈಕ ಆಟಗಾರನಿಗೆ ಮಾತ್ರ ಸ್ಥಾನ ನೀಡಿರುವುದು ವಿಶೇಷ. ಅಂದರೆ ವಿರಾಟ್ ಕೊಹ್ಲಿಯಾಗಲಿ, ಮಹೇಂದ್ರ ಸಿಂಗ್ ಧೋನಿಯಾಗಲಿ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ್ದಾರೆ. ಪಾಕ್ ಆಟಗಾರ ಹೆಸರಿಸಿರುವ ಈ ಆಲ್ಟೈಮ್ ಪ್ಲೇಯಿಂಗ್ ಇಲೆವೆನ್ನಲ್ಲಿ ಭಾರತದ ಏಕೈಕ ಆಟಗಾರನಿಗೆ ಮಾತ್ರ ಸ್ಥಾನ ನೀಡಿದ್ದಾರೆ. ಅಚ್ಚರಿ ಎಂದರೆ ಈ ತಂಡದಲ್ಲಿ ಪಾಕಿಸ್ತಾನದ ಐವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
ಹಾಗೆಯೇ ಈ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ನ ನಾಯಕನಾಗಿ ಇಂಝಮಾಮ್ ಉಲ್ ಹಕ್ ಅವರನ್ನು ಹೆಸರಿಸಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಆಗಿ ಪಾಕ್ ತಂಡದ ಮಾಜಿ ಆಟಗಾರ ರಶೀದ್ ಲತೀಫ್ಗೆ ಸ್ಥಾನ ನೀಡಿದ್ದಾರೆ. ಇನ್ನು ಈ ತಂಡದ ಆರಂಭಿಕರಾಗಿ ಅಫ್ರಿದಿ ಹೆಸರಿಸಿದ್ದು, ಪಾಕ್ ತಂಡದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ಹಾಗೂ ಆ್ಯಡಂ ಗಿಲ್‌ಕ್ರಿಸ್ಟ್ ಅವರನ್ನು. ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕಾಣಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ:
ಈ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಶಾಹಿದ್ ಅಫ್ರಿದಿ ಸಚಿನ್ ಅವರನ್ನು ತಮ್ಮ ಆಲ್ಟೈಮ್ ಪ್ಲೇಯಿಂಗ್ ಇಲೆವೆನ್ನಲ್ಲಿ 4ನೇ ಕ್ರಮಾಂಕದಲ್ಲಿ ಹೆಸರಿಸಿದ್ದಾರೆ.
ಇದನ್ನೂ ಓದಿ: Virat Kohli: ಕೇವಲ 58 ರನ್ಗಳು… ವಿಶ್ವ ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ
5ನೇ ಕ್ರಮಾಂಕದಲ್ಲಿ ಇಂಝಮಾಮ್ ಉಲ್ ಹಕ್ ಕಾಣಿಸಿಕೊಂಡರೆ, 6ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಆಗಿ ಜಾಕ್ಸ್ ಕಾಲಿಸ್ ಅವರನ್ನು ಆಯ್ಕೆ ಮಾಡಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ರಶೀದ್ ಲತೀಫ್ ಇದ್ದರೆ, ವೇಗಿಗಳಾಗಿ ವಾಸಿಂ ಅಕ್ರಮ್, ಗ್ಲೆನ್ ಮೆಕ್‌ಗ್ರಾಥ್ ಹಾಗೂ ಶೊಯೇಬ್ ಅಖ್ತರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇನ್ನು ಸ್ಪಿನ್ನರ್ ಆಗಿ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ ಸ್ಥಾನ ಪಡೆದಿದ್ದಾರೆ. ಅದರಂತೆ ಶಾಹಿದ್ ಅಫ್ರಿದಿ ಅವರ ಆಲ್ಟೈಮ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
- ಸಯೀದ್ ಅನ್ವರ್ (ಪಾಕಿಸ್ತಾನ್)
- ಆ್ಯಡಂ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
- ಸಚಿನ್ ತೆಂಡೂಲ್ಕರ್ (ಭಾರತ)
- ಇಂಝಮಾಮ್-ಉಲ್-ಹಕ್ (ನಾಯಕ/ಪಾಕಿಸ್ತಾನ್)
- ಜಾಕ್ಸ್ ಕಾಲಿಸ್ (ಸೌತ್ ಆಫ್ರಿಕಾ)
- ರಶೀದ್ ಲತೀಫ್ (ವಿಕೆಟ್ ಕೀಪರ್/ಪಾಕಿಸ್ತಾನ್)
- ವಾಸಿಂ ಅಕ್ರಮ್ (ಪಾಕಿಸ್ತಾನ್)
- ಗ್ಲೆನ್ ಮೆಕ್‌ಗ್ರಾಥ್ (ಆಸ್ಟ್ರೇಲಿಯಾ)
- ಶೊಯೆಬ್ ಅಖ್ತರ್ (ಪಾಕಿಸ್ತಾನ್)
- ಶೇನ್ ವಾರ್ನ್ (ಆಸ್ಟ್ರೇಲಿಯಾ)