1,058 ಟು 1,080: ತನ್ನದೇ ಹೀನಾಯ ದಾಖಲೆ ಮುರಿದ ಪಾಕಿಸ್ತಾನ್
India vs Pakistan: ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ 42.5 ಓವರ್ಗಳವರೆಗೆ ಬ್ಯಾಟ್ ಬೀಸಿರುವ ಪಾಕಿಸ್ತಾನ್ ತಂಡ ಆಟಗಾರರು ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. ಇತ್ತ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 6 ಸಿಕ್ಸ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 2 ಸಿಕ್ಸರ್ ಬಾರಿಸಿದ್ದರು.
ಏಕದಿನ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ 8ನೇ ಬಾರಿ ಸೋಲುಂಡಿದೆ. ಈ ಬಾರಿ ಸೋತಿರುವುದು 7 ವಿಕೆಟ್ಗಳಿಂದ ಎಂಬುದಷ್ಟೇ ವ್ಯತ್ಯಾಸ. ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಸೋಲುಣಿಸುವ ಪಾಕ್ ತಂಡದ ಕನಸು ಕನಸಾಗಿಯೇ ಉಳಿದಿದೆ. ಆದರೆ ಈ ಬಾರಿ ಈ ಕಮರಿದ ಕನಸಿನೊಂದಿಗೆ ಅತ್ಯಂತ ಕೆಟ್ಟ ದಾಖಲೆ ಕೂಡ ಸೇರ್ಪಡೆಯಾಗಿರುವುದು ವಿಶೇಷ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಪರ ಅಬ್ದುಲ್ಲ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಇನಿಂಗ್ಸ್ ಆರಂಭಿಸಿದ್ದರು.
ಈ ಜೋಡಿ ಮೊದಲ ವಿಕೆಟ್ಗೆ 8 ಓವರ್ಗಳಲ್ಲಿ 41 ರನ್ ಬಾರಿಸಿದರೂ ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ. ಆ ಬಳಿಕ ಬಾಬರ್ ಆಝಂ ಕೂಡ ಸಿಕ್ಸ್ ಸಿಡಿಸುವ ಉಮೇದಿನಲ್ಲಿರಲಿಲ್ಲ. ಪರಿಣಾಮ ಪಾಕ್ ತಂಡ ಪವರ್ಪ್ಲೇನಲ್ಲಿ ಒಂದೇ ಒಂದು ಸಿಕ್ಸ್ ಮೂಡಿಬಂದಿರಲಿಲ್ಲ.
ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಮೊದಲ 10 ಓವರ್ಗಳಲ್ಲಿ ಸಿಕ್ಸ್ ಸಿಡಿಸದೇ ಅತೀ ಹೆಚ್ಚು ಬಾಲ್ಗಳನ್ನು ಎದುರಿಸಿದ ತಂಡ ಎಂಬ ಹೀನಾಯ ದಾಖಲೆಯೊಂದು ಪಾಕ್ ಹೆಸರಿಗೆ ಸೇರ್ಪಡೆಯಾಯಿತು.
ವಿಶೇಷ ಎಂದರೆ ಈ ಹಿಂದಿನ ದಾಖಲೆ ಕೂಡ ಪಾಕಿಸ್ತಾನ್ ತಂಡದ ಹೆಸರಿನಲ್ಲಿಯೇ ಇತ್ತು. ಅಂದರೆ 2012 ರಲ್ಲಿ ಪಾಕಿಸ್ತಾನ್ ತಂಡ ಏಕದಿನ ಕ್ರಿಕೆಟ್ನ ಮೊದಲ 10 ಓವರ್ಗಳಲ್ಲಿ ಸಿಕ್ಸ್ ಸಿಡಿಸದೇ ಒಟ್ಟು 1058 ಎಸೆತಗಳನ್ನು ಎದುರಿಸಿ ಕಳಪೆ ದಾಖಲೆ ಬರೆದಿತ್ತು.
ಇದೀಗ 2023 ರಲ್ಲಿ ಪಾಕಿಸ್ತಾನ್ ತಂಡ ಏಕದಿನ ಕ್ರಿಕೆಟ್ನ ಮೊದಲ 10 ಓವರ್ಗಳಲ್ಲಿ ಸಿಕ್ಸ್ ಬಾರಿಸದೇ ಒಟ್ಟು 1,080 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ತನ್ನದೇ ಕಳಪೆ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಚೇಸ್ ಮಾಸ್ಟರ್…ಸಚಿನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ಸಿಕ್ಸ್ ರಹಿತ ಇನಿಂಗ್ಸ್:
ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ 42.5 ಓವರ್ಗಳವರೆಗೆ ಬ್ಯಾಟ್ ಬೀಸಿರುವ ಪಾಕಿಸ್ತಾನ್ ತಂಡ ಆಟಗಾರರು ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. ಇತ್ತ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 6 ಸಿಕ್ಸ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 2 ಸಿಕ್ಸರ್ ಬಾರಿಸಿದ್ದರು. ಭಾರತೀಯ ಬ್ಯಾಟರ್ಗಳ ಈ ಸಿಡಿಲಬ್ಬರದ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ 30.3 ಓವರ್ಗಳಲ್ಲಿ 192 ರನ್ಗಳನ್ನು ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿತು.