IPL 2025: 36 ಎಸೆತಗಳಲ್ಲೇ RCB vs PBKS ಪಂದ್ಯದ ಫಲಿತಾಂಶ ನಿರ್ಧಾರ..!

IPL 2025 PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಚಂಡೀಗಢ್​ನ ಮುಲ್ಲನ್​ಪುರ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಪ್ರವೇಶಿಸಲಿದೆ.

IPL 2025: 36 ಎಸೆತಗಳಲ್ಲೇ RCB vs PBKS ಪಂದ್ಯದ ಫಲಿತಾಂಶ ನಿರ್ಧಾರ..!
Rcb Vs Pbks

Updated on: May 29, 2025 | 1:54 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಕೂಡ ದೂರದ ಮುಲ್ಲನ್​ಪುರ್​ನಲ್ಲಿ. ಇಂದು ನಡೆಯಲಿರುವ ಪ್ಲೇಆಫ್ ಹಂತದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಸಮಬಲ ಹೊಂದಿರುವ ಕಾರಣ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಇದರ ನಡುವೆ ಪವರ್​ಪ್ಲೇನ ಲೆಕ್ಕಾಚಾರ ಕೂಡ ಶುರುವಾಗಿದೆ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಪವರ್​ಪ್ಲೇನಲ್ಲಿ ಹೆಚ್ಚು ರನ್ ಕಲೆಹಾಕಿದ ತಂಡಗಳೇ ಬಹುತೇಕ ಜಯಗಳಿಸಿದೆ. ಇತ್ತ ಪಂಜಾಬ್ ಕಿಂಗ್ಸ್ ಪಡೆ ಪವರ್​ಪ್ಲೇನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಾ ಬಂದಿದ್ದಾರೆ.

ಆದರೆ ಪವರ್​ನಲ್ಲೇ ಅತ್ಯುತ್ತಮ ದಾಳಿ ಸಂಘಟಿಸಿದ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹೀಗಾಗಿಯೇ ಈ ಪಂದ್ಯದ ಫಲಿತಾಂಶ ಹೇಗಿರಲಿದೆ ಎಂಬುದು 36 ಎಸೆತಗಳಲ್ಲೇ ನಿರ್ಧಾರವಾಗಲಿದೆ.

ಮೊದಲ 36 ಎಸೆತಗಳು:

ಮೊದಲೇ ಹೇಳಿದಂತೆ ಈ ಬಾರಿಯ ಐಪಿಎಲ್​ನಲ್ಲಿ ಪವರ್​ಪ್ಲೇನಲ್ಲಿ ಪವರ್ ತೋರಿಸಿದ ತಂಡವೆಂದರೆ ಅದು ಪಂಜಾಬ್ ಕಿಂಗ್ಸ್. ಲೀಗ್​ ಹಂತದ ಪಂದ್ಯಗಳಲ್ಲಿ ಪವರ್​ಪ್ಲೇನಲ್ಲಿ  ಪ್ರತಿ ಓವರ್‌ಗೆ 10.02 ಸರಾಸರಿಯಲ್ಲಿ ರನ್‌ಗಳಿಸಿದ್ದಾರೆ. ವಿಶೇಷ ಎಂದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹೊರತುಪಡಿಸಿ, ಯಾವುದೇ ತಂಡದ ಪವರ್​ಪ್ಲೇನಲ್ಲಿ ಈ ಇಷ್ಟೊಂದು ಸರಾಸರಿ ಹೊಂದಿಲ್ಲ.

ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ಪವರ್ ತೋರಿಸಬೇಕಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಪವರ್​ಪ್ಲೇನಲ್ಲಿ ಅತೀ ಕಡಿಮೆ ರನ್ ನೀಡಿರುವುದು ಆರ್​ಸಿಬಿ ಬೌಲರ್​ಗಳು.

14 ಪಂದ್ಯಗಳಲ್ಲಿ ಮೊದಲ 6 ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳು ಪ್ರತಿ ಓವರ್​ಗೆ 8.79 ಎಕಾನಮಿ ದರದಲ್ಲಿ ಮಾತ್ರ ರನ್ ನೀಡಿದ್ದಾರೆ. ಅಲ್ಲದೆ ಪವರ್​ಪ್ಲೇನಲ್ಲಿ ಆರ್​ಸಿಬಿ ಬೌಲಿಂಗ್​ ಶೇ 43.5 ರಷ್ಟು ಡಾಟ್ ಬಾಲ್​ಗಳನ್ನು ಮಾಡಿದ್ದಾರೆ.

ಅಂದರೆ ಮೊದಲ ಕ್ವಾಲಿಫೈಯರ್​ನಲ್ಲಿ ಪವರ್​ಪ್ಲೇನಲ್ಲಿ ಅತೀ ರನ್ ಗಳಿಸಿದ ಪಂಜಾಬ್ ಕಿಂಗ್ಸ್ ಹಾಗೂ ಅತೀ ಕಡಿಮೆ ರನ್ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಹೀಗಾಗಿ ಪವರ್​ಪ್ಲೇನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ ಅವರೇ ಈ ಪಂದ್ಯದಲ್ಲಿ ಜಯ ಸಾಧಿಸಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು

ಒಟ್ಟಿನಲ್ಲಿ ಐಪಿಎಲ್​ ಇತಿಹಾಸದಲ್ಲಿ ಈವರೆಗೆ ಕಪ್ ಗೆಲ್ಲದ ತಂಡಗಳು ಇದೀಗ ಪವರ್​ಫುಲ್ ಮುಖಾಮುಖಿಗೆ ಸಜ್ಜಾಗಿ ನಿಂತಿದೆ. ಈ ಪವರ್​ಫುಲ್ ಮುಖಾಮುಖಿಯಲ್ಲಿ ಪವರ್​ ತೋರಿಸುವವರು ಯಾರು? ಆರ್​ಸಿಬಿ ಪವರ್​ ತೋರಿಸಿದರೆ, 8 ವರ್ಷಗಳ ಬಳಿಕ ಫೈನಲ್​ಗೆ ಪ್ರವೇಶಿಸಲಿದೆ. ಪಂಜಾಬ್ ಕಿಂಗ್ಸ್ ಪವರ್​ಫುಲ್ ಆಟವಾಡಿದರೆ, 10 ವರ್ಷಗಳ ಬಳಿಕ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಣರೋಚಕ ಪೈಪೋಟಿಯನ್ನಂತು ನಿರೀಕ್ಷಿಸಬಹುದು.

 

Published On - 1:54 pm, Thu, 29 May 25