AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಬರಲಿವೆ ಆಸ್ಟ್ರೇಲಿಯಾ, ಆಫ್ರಿಕಾ ತಂಡಗಳು; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

BCCI Announces Schedule: ಬಿಸಿಸಿಐ, ಆಸ್ಟ್ರೇಲಿಯಾ ಮಹಿಳಾ ತಂಡ, ಆಸ್ಟ್ರೇಲಿಯಾ 'ಎ' ತಂಡ ಮತ್ತು ದಕ್ಷಿಣ ಆಫ್ರಿಕಾ 'ಎ' ತಂಡಗಳ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ನಡೆಯುವ ಈ ಪಂದ್ಯಗಳು ಚೆನ್ನೈ, ಲಕ್ನೋ, ಕಾನ್ಪುರ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ. ಒಟ್ಟು 13 ಪಂದ್ಯಗಳು, ಏಕದಿನ ಮತ್ತು ಬಹು-ದಿನದ ಪಂದ್ಯಗಳನ್ನು ಒಳಗೊಂಡಿದೆ.

ಭಾರತಕ್ಕೆ ಬರಲಿವೆ ಆಸ್ಟ್ರೇಲಿಯಾ, ಆಫ್ರಿಕಾ ತಂಡಗಳು; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Bcci
ಪೃಥ್ವಿಶಂಕರ
|

Updated on: May 29, 2025 | 4:14 PM

Share

ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ (Australia A team India tour) ವೇಳಾಪಟ್ಟಿಯನ್ನು ಬಿಸಿಸಿಐ (BCCI) ಇಂದು ಬಿಡುಗಡೆ ಮಾಡಿದೆ. ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸವು ಹಿರಿಯ ಪುರುಷರ ಕ್ರಿಕೆಟ್ ತಂಡದದ್ದಾಗಿರುವುದಿಲ್ಲ, ಬದಲಾಗಿ ಮಹಿಳಾ ತಂಡ ಮತ್ತು ‘ಎ’ ತಂಡದದ್ದಾಗಿರಲಿದೆ. ಆಸ್ಟ್ರೇಲಿಯಾದ ಎರಡು ತಂಡಗಳಲ್ಲದೆ, ದಕ್ಷಿಣ ಆಫ್ರಿಕಾದ ಎ ತಂಡವೂ ಭಾರತ ಪ್ರವಾಸ ಮಾಡಲಿದೆ. ಆಸ್ಟ್ರೇಲಿಯಾದ ಎರಡೂ ತಂಡಗಳು ಸೆಪ್ಟೆಂಬರ್​ನಿಂದ ಅಕ್ಟೋಬರ್​ವರೆಗೆ ಭಾರತ ಪ್ರವಾಸ ಕೈಗೊಳ್ಳಲಿವೆ. ಆದರೆ ದಕ್ಷಿಣ ಆಫ್ರಿಕಾ ‘ಎ’ ತಂಡ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ.

ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ ಯಾವಾಗ?

ಮೂರು ತಂಡಗಳ ಪ್ರವಾಸ ಸೇರಿದಂತೆ ಒಟ್ಟು 13 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ಮಹಿಳಾ ತಂಡವು ಸೆಪ್ಟೆಂಬರ್ 14 ರಿಂದ 20 ರವರೆಗೆ ಭಾರತ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಎ ತಂಡವು 2 ಬಹು-ದಿನದ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳಿಗಾಗಿ ಪ್ರವಾಸ ಮಾಡಲಿದೆ. ಈ ತಂಡವು ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 5 ರವರೆಗೆ ಭಾರತ ಪ್ರವಾಸದಲ್ಲಿರುತ್ತದೆ.

ದಕ್ಷಿಣ ಆಫ್ರಿಕಾದ ಯಾವಾಗ?

ಆಸ್ಟ್ರೇಲಿಯಾದ ಎರಡೂ ತಂಡಗಳು ಹಿಂದಿರುಗಿದ ನಂತರ, ದಕ್ಷಿಣ ಆಫ್ರಿಕಾದ ಎ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಹರಿಣಗಳ ಪ್ರವಾಸವು ಅಕ್ಟೋಬರ್ 30 ರಿಂದ ಪ್ರಾರಂಭವಾಗಿ ನವೆಂಬರ್ 19 ರವರೆಗೆ ಮುಂದುವರಿಯುತ್ತದೆ. ಅಂದರೆ ಈ ಪ್ರವಾಸವು 20 ದಿನಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ, 2 ಬಹು-ದಿನದ ಪಂದ್ಯಗಳ ಹೊರತಾಗಿ, 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಾಗುವುದು.

ವೇಳಾಪಟ್ಟಿ ವಿವರ ಹೀಗಿದೆ

ಈಗ ಪ್ರಶ್ನೆ ಏನೆಂದರೆ, ಸೆಪ್ಟೆಂಬರ್​ನಿಂದ ನವೆಂಬರ್ ವರೆಗೆ ನಡೆಯಲಿರುವ ಈ ಪಂದ್ಯಗಳಿಗೆ ಸ್ಥಳ ಯಾವುದು? ಆಸ್ಟ್ರೇಲಿಯಾ ಮಹಿಳಾ ತಂಡವು ಭಾರತದ ವಿರುದ್ಧ ತನ್ನ ಮೂರು ಏಕದಿನ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 14 ರಂದು, ಎರಡನೇ ಪಂದ್ಯ ಸೆಪ್ಟೆಂಬರ್ 17 ರಂದು ಮತ್ತು ಮೂರನೇ ಪಂದ್ಯ ಸೆಪ್ಟೆಂಬರ್ 20 ರಂದು ನಡೆಯಲಿದೆ.

ಭಾರತ ಪ್ರವಾಸದ ವೇಳೆ ಆಸ್ಟ್ರೇಲಿಯಾ ಎ ತಂಡವು ಲಕ್ನೋ ಮತ್ತು ಕಾನ್ಪುರದಲ್ಲಿ ತನ್ನ ಪಂದ್ಯಗಳನ್ನು ಆಡಬೇಕಾಗುತ್ತದೆ. ಮೊದಲು ಬಹು-ದಿನದ ಪಂದ್ಯಗಳನ್ನು ಆಡಲಿದ್ದು, ಮೊದಲ ಪಂದ್ಯ ಸೆಪ್ಟೆಂಬರ್ 16 ರಿಂದ ನಡೆಯಲಿದೆ. ಎರಡನೇ ಬಹು-ದಿನದ ಪಂದ್ಯ ಸೆಪ್ಟೆಂಬರ್ 23 ರಿಂದ ನಡೆಯಲಿದೆ. ಈ ಎರಡೂ ಪಂದ್ಯಗಳು ಲಕ್ನೋದಲ್ಲಿ ನಡೆಯಲಿವೆ. ಆಸ್ಟ್ರೇಲಿಯಾ ಎ ತಂಡವು ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು ಅಕ್ಟೋಬರ್ 5 ರಂದು ಕಾನ್ಪುರದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ದಕ್ಷಿಣ ಆಫ್ರಿಕಾ ‘ಎ’ ತಂಡವು ಭಾರತ ಪ್ರವಾಸದ ಸಂದರ್ಭದಲ್ಲಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬಹುದಿನಗಳ ಪಂದ್ಯಗಳನ್ನು ಆಡಲಿದೆ. ಆ ಬಳಿಕ ಏಕದಿನ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಬಹುದಿನಗಳ ಪಂದ್ಯಗಳು ಅಕ್ಟೋಬರ್ 30 ಮತ್ತು ನವೆಂಬರ್ 6 ರಿಂದ ಪ್ರಾರಂಭವಾಗಲಿವೆ. ಏಕದಿನ ಪಂದ್ಯಗಳು ನವೆಂಬರ್ 13, ನವೆಂಬರ್ 16 ಮತ್ತು ನವೆಂಬರ್ 19 ರಂದು ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ