ಏಷ್ಯಾಕಪ್ ಟ್ರೋಫಿ ಕಳ್ಳ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಸನ್ಮಾನ
Mohsin Naqvi Honored: ಏಷ್ಯಾಕಪ್ ಟ್ರೋಫಿ ವಿವಾದ ಸೃಷ್ಟಿಸಿದ ಪಿಸಿಬಿ/ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ. ಭಾರತ ತಂಡ ಟ್ರೋಫಿ ಸ್ವೀಕರಿಸಲು ನಿರಾಕರಿಸಿದಾಗ ಅದನ್ನು ಮೊಹ್ಸಿನ್ ತೆಗೆದುಕೊಂಡು ಹೋಗಿದ್ದರು. ಬಿಸಿಸಿಐ ವಿರುದ್ಧ ಕಠಿಣ ನಿಲುವು ತಳೆದ ಕಾರಣ ಅವರಿಗೆ ಈ ಪದಕ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಏಷ್ಯಾಕಪ್ (Asia Cup) ಚಾಂಪಿಯನ್ ಟೀಂ ಇಂಡಿಯಾಕ್ಕೆ ಟ್ರೋಫಿ ಹಾಗೂ ಪದಕಗಳನ್ನು ನೀಡದೆ ಅವುಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿ ವಿಶ್ವ ಕ್ರಿಕೆಟ್ನ ಮುಂದೆ ಟ್ರೋಫಿ ಕಳ್ಳ ಎಂದೇ ಕುಖ್ಯಾತರಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ (Mohsin Naqvi) ಪಾಕಿಸ್ತಾನದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ವರದಿಯಾಗಿದೆ. ಏಷ್ಯಾಕಪ್ ನಡೆಯುವ ಸಮಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಮೊಹ್ಸಿನ್ ನಖ್ವಿಯನ್ನು ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ವರದಿಯಾಗಿದೆ.
ಚಿನ್ನದ ಪದಕ ನೀಡಿ ಗೌರವ
ಪಾಕಿಸ್ತಾನದ ಸುದ್ದಿ ಪೋರ್ಟಲ್ ದಿ ನೇಷನ್ ವರದಿಯ ಪ್ರಕಾರ, 2025 ರ ಏಷ್ಯಾಕಪ್‌ನಲ್ಲಿ ಮೊಹ್ಸಿನ್ ನಖ್ವಿ ತಾಳಿದ ಕಠಿಣ ನಿಲುವಿಗಾಗಿ ಈ ಪದಕವನ್ನು ನೀಡಲಾಗುತ್ತಿದೆ. ವರದಿಯ ಪ್ರಕಾರ, ಸಿಂಧ್ ಮತ್ತು ಕರಾಚಿ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ವಕೀಲ ಗುಲಾಮ್ ಅಬ್ಬಾಸ್ ಜಮಾಲ್, ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ನಖ್ವಿ ಅವರಿಗೆ ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕವನ್ನು ನೀಡುವುದಾಗಿ ಘೋಷಿಸಿದ್ದಾರೆ. ಏಷ್ಯಾಕಪ್‌ನಲ್ಲಿ ನಿರ್ಭೀತ ಮತ್ತು ತತ್ವಬದ್ಧ ನಿರ್ಧಾರಗಳಿಗೆ ಬದ್ಧರಾಗಿ ಪಾಕಿಸ್ತಾನಕ್ಕೆ ಗೌರವ ತಂದ ನಖ್ವಿ ಅವರಿಗೆ ಪದಕವನ್ನು ನೀಡುತ್ತಿರುವುದಾಗಿ ವರದಿಯಾಗಿದೆ.
🚨 𝗕𝗥𝗘𝗔𝗞𝗜𝗡𝗚 𝗡𝗘𝗪𝗦 🚨After Failed marshal Mohsin Naqvi will receive Zulfiqar ali bhutto award 🤣🤣🤣
Pakistan To Honour Mohsin Naqvi With zulfiqar ali bhutto excellence gold medal for his role In Asia Cup 2025 🥇 🤯#AsiaCupFinal #PakistanCricket pic.twitter.com/MBfvfYDYuu
— Wahida 🇦🇫 (@RealWahidaAFG) October 3, 2025
‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು
ವಿವಾದ ಶುರುವಾಗಿದ್ದು ಹೇಗೆ?
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅಜೇಯವಾಗಿ ಉಳಿದು ಏಷ್ಯಾಕಪ್ ಗೆದ್ದಿತು. ಆ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೊಹ್ಸಿನ್, ಎಸಿಸಿಯ ಪ್ರಸ್ತುತ ಅಧ್ಯಕ್ಷರಾಗಿರುವ ಕಾರಣ ಟ್ರೋಫಿಯನ್ನು ಪ್ರದಾನ ಮಾಡಲು ಬಂದಿದ್ದರು. ಆದರೆ ಟೀಂ ಇಂಡಿಯಾ ಮೊಹ್ಸಿನ್ ಅವರಿಂದ ಅದನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದಕ್ಕೆ ಕಾರಣವನ್ನು ನೀಡಿದ್ದ ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದಲ್ಲಿ ಸಚಿವರೂ ಆಗಿರುವ ಕಾರಣ ನಾವು ಅವರಿಂದ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂದಿತ್ತು. ಆದಾಗ್ಯೂ, ಮೊಹ್ಸಿನ್ ನಾಚಿಕೆಯಿಲ್ಲದೆ ವೇದಿಕೆಯ ಮೇಲೆ ನಿಂತಿದ್ದರು. ನಂತರ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೊರಟುಹೋಗಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Fri, 3 October 25
