‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು
AB de Villiers Slams Asia Cup Trophy Row: 2025 ರ ಏಷ್ಯಾಕಪ್ ಗೆದ್ದ ಭಾರತಕ್ಕೆ ಟ್ರೋಫಿ ಸಿಗದ ವಿವಾದ ಕುರಿತು ಎಬಿ ಡಿವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ಇಡಬೇಕು ಎಂದು ಒತ್ತಿ ಹೇಳಿದ್ದಾರೆ. ಕ್ರೀಡೆಯನ್ನು ರಾಜಕೀಯದಿಂದ ಹೊರಗಿಟ್ಟು ಆಚರಿಸಬೇಕು ಎಂದೂ ಡಿವಿಲಿಯರ್ಸ್ ತಿಳಿಸಿದ್ದಾರೆ.

2025 ರ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಭಾರತ ತಂಡಕ್ಕೆ ಇದುವರೆಗೂ ಟೂರ್ನಿಯ ಟ್ರೋಫಿ ಹಾಗೂ ಪದಕ ಸಿಕ್ಕಿಲ್ಲ. ಪ್ರಶಸ್ತಿ ಪ್ರಸ್ತುತಿ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮತ್ತು ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿತು. ಇತ್ತ ಭಾರತದ ಈ ನಡೆಯಿಂದ ಕೆರಳಿಂದ ಮೊಹ್ಸಿನ್ ನಖ್ವಿ, ಟೀಂ ಇಂಡಿಯಾಕ್ಕೆ ಸೇರಬೇಕಿದ್ದ ಟ್ರೋಫಿ ಮತ್ತು ಪದಕಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ನಖ್ವಿ ಈ ನಡೆಯನ್ನು ಎಲ್ಲೆಡೆ ಖಂಡಿಸಲಾಗುತ್ತಿದೆ. ಇದೀಗ ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (AB de Villiers) ಇಡೀ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ದುಃಖಿತನಾಗಿದ್ದೇನೆ ಎಂದ ಡಿವಿಲಿಯರ್ಸ್
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, ‘ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ಇಡಬೇಕು. ಆದರೆ ರಾಜಕೀಯವು ಕ್ರೀಡೆಗಳನ್ನು ಮರೆಮಾಡುತ್ತಿರುವುದನ್ನು ನೋಡಿ ದುಃಖಿತನಾಗಿದ್ದೇನೆ. ಏಷ್ಯಾಕಪ್ ಟ್ರೋಫಿಯನ್ನು ಪ್ರದಾನ ಮಾಡುವ ವ್ಯಕ್ತಿಯ ಬಗ್ಗೆ ಟೀಂ ಇಂಡಿಯಾ ಅಸಮಾಧಾನ ಹೊಂದಿತ್ತು. ಕ್ರೀಡೆಯಲ್ಲಿ ಇದು ಸಂಭವಿಸಬಾರದು ಎಂದು ನಾನು ಭಾವಿಸುತ್ತೇನೆ. ರಾಜಕೀಯವನ್ನು ಬದಿಗಿಡಬೇಕು. ಕ್ರಿಕೆಟ್ ಒಂದು ಆಚರಣೆ ಅದನ್ನು ಹಾಗೆಯೇ ಪರಿಗಣಿಸಬೇಕು. ಇದು ತುಂಬಾ ವಿಚಿತ್ರವಾದ ಪರಿಸ್ಥಿತಿಯಾಗಿತ್ತು. ಆಟಗಾರರನ್ನು ಅಂತಹ ಸಂದಿಗ್ಧತೆಯಲ್ಲಿ ನೋಡುವುದು ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.
India refused to take the Asia Cup winners’ trophy from the hands of ACC Chief Mohsin Naqvi. Former South African great AB de Villiers reacted to the chaos around the trophy row, slamming the act despite praising India’s dominance in the tournament.#DNAUpdates | #INDvsPAK |… pic.twitter.com/3YSzmKLuKE
— DNA (@dna) October 2, 2025
ಸಮತೋಲಿತ ತಂಡವಾಗಿ ಕಾಣುತ್ತದೆ
ಇನ್ನು ಭಾರತ ಟಿ20 ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಿವಿಲಿಯರ್ಸ್,‘ ಭಾರತವು ಪ್ರಸ್ತುತ ಬಹಳ ಸಮತೋಲಿತ ತಂಡವಾಗಿ ಕಾಣುತ್ತದೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ತಂಡವು ಬಹಳಷ್ಟು ಪ್ರತಿಭೆಯನ್ನು ಹೊಂದಿದೆ. ದೊಡ್ಡ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ನೋಡಲು ಸಂತೋಷವಾಗಿದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 pm, Thu, 2 October 25
