T20 World Cup 2026: 16ನೇ ತಂಡವಾಗಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ನಮೀಬಿಯಾ
T20 World Cup 2026: ಭಾರತ-ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ಗೆ ನಮೀಬಿಯಾ ಅರ್ಹತೆ ಪಡೆದಿದೆ. ಆಫ್ರಿಕಾ ಪ್ರಾದೇಶಿಕ ಅರ್ಹತಾ ಪಂದ್ಯದಲ್ಲಿ ತಾಂಜಾನಿಯಾವನ್ನು ಸೋಲಿಸಿ 16ನೇ ತಂಡವಾಗಿ ಸ್ಥಾನ ಭದ್ರಪಡಿಸಿಕೊಂಡಿದೆ. ಆಲ್‌ರೌಂಡರ್ ಜೆಜೆ ಸ್ಮಿತ್ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ನೆರವಾದರು. ಇದು ನಮೀಬಿಯಾದ ನಾಲ್ಕನೇ ಟಿ20 ವಿಶ್ವಕಪ್ ಆಗಿದೆ.

ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗೆ (2026 T20 World Cup) ನಮೀಬಿಯಾ ತಂಡವು ಅರ್ಹತೆ ಪಡೆದಿದೆ. ಆಫ್ರಿಕಾ ಪ್ರಾದೇಶಿಕ ಅರ್ಹತಾ ಪಂದ್ಯಗಳ ಸೆಮಿಫೈನಲ್‌ನಲ್ಲಿ ತಾಂಜಾನಿಯಾವನ್ನು 63 ರನ್‌ಗಳಿಂದ ಸೋಲಿಸುವ ಮೂಲಕ ನಮೀಬಿಯಾ 2026 ರ ಟಿ20 ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಚುಟುಕು ವಿಶ್ವ ಸಮರಕ್ಕೆ ಅರ್ಹತೆ ಪಡೆದ 16 ನೇ ತಂಡವಾಗಿದೆ. ಅಲ್ಲದೆ ನಮೀಬಿಯಾ ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಇತಿಹಾಸ ಸೃಷ್ಟಿಸಿದ ನಮೀಬಿಯಾ
ನಮೀಬಿಯಾದಲ್ಲಿ ಕೇವಲ 3 ಮಿಲಿಯನ್ ಜನಸಂಖ್ಯೆ ಇರಬಹುದು, ಆದರೆ ಪ್ರತಿಭಾನ್ವಿತ ಆಟಗಾರರಿಗೆ ಕೊರತೆಯಿಲ್ಲ. ಅಂತಹ ಒಬ್ಬ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರಾದ ಆಲ್‌ರೌಂಡರ್ ಜೆಜೆ ಸ್ಮಿತ್ ತಾಂಜಾನಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮೊದಲು ಬ್ಯಾಟಿಂಗ್ನಲ್ಲಿ 43 ಎಸೆತಗಳಲ್ಲಿ ಅಜೇಯ 61 ರನ್ ಬಾರಿಸಿದ ಸ್ಮಿತ್, ನಮೀಬಿಯಾ 20 ಓವರ್‌ಗಳಲ್ಲಿ 174 ರನ್ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ತಾಂಜಾನಿಯಾ ಕೇವಲ 111 ರನ್‌ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್ ಬಳಿಕ ಬೌಲಿಂಗ್ನಲ್ಲೂ ಕಮಾಲ್ ಮಾಡಿದ ಸ್ಮಿತ್ 4 ಓವರ್‌ಗಳಲ್ಲಿ 16 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು.
ಮೇಲೆ ಹೇಳಿದಂತೆ ನಮೀಬಿಯಾ ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ. ಇದಕ್ಕೂ ಮೊದಲು, ನಮೀಬಿಯಾ 2021, 2022 ಮತ್ತು 2024 ರಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಇನ್ನು ಆಫ್ರಿಕಾ ಖಂಡದಿಂದ ಒಂದು ತಂಡಕ್ಕೆ ಮಾತ್ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶವಿದ್ದು, ಈ ಸ್ಥಾನಕ್ಕಾಗಿ ಕೀನ್ಯಾ ಮತ್ತು ಜಿಂಬಾಬ್ವೆ ಸೆಣಸಾಡಲಿವೆ. ಈ ಎರಡೂ ತಂಡಗಳು ಎರಡನೇ ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ವಿಜೇತ ತಂಡವು 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತದೆ.
ICC T20 Ranking: ಟಿ20 ರ್ಯಾಂಕಿಂಗ್ನಲ್ಲಿ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
ಅರ್ಹತೆ ಪಡೆದಿರುವ 16 ತಂಡಗಳಿವು
ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಯುಎಸ್ಎ, ನ್ಯೂಜಿಲೆಂಡ್, ಐರ್ಲೆಂಡ್, ಕೆನಡಾ, ನೆದರ್ಲ್ಯಾಂಡ್ಸ್, ಇಟಲಿ ಮತ್ತು ನಮೀಬಿಯಾ. ಇಟಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ. 2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
