IPL 2023: ಐಪಿಎಲ್​ನಿಂದ ಚಿಂತೆಗೀಡಾದ ಪಾಕ್ ಕ್ರಿಕೆಟ್​ ಮಂಡಳಿ

IPL 2023: ಪಾಕಿಸ್ತಾನ್ ತಂಡಕ್ಕೆ ಪ್ರಮುಖ ಸರಣಿಗಳು ಕೈ ತಪ್ಪಬಹುದು. ಅಥವಾ ಬೇರೆ ಕ್ರಿಕೆಟ್ ಮಂಡಳಿಗಳು 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಬಹುದು. ಇದರಿಂದ ಪಾಕ್ ಸರಣಿಗಳ ಮೇಲೆ ಆಸಕ್ತಿ ಕಡಿಮೆಯಾಗಲಿದೆ.

IPL 2023: ಐಪಿಎಲ್​ನಿಂದ ಚಿಂತೆಗೀಡಾದ ಪಾಕ್ ಕ್ರಿಕೆಟ್​ ಮಂಡಳಿ
IPL vs PCB
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 17, 2022 | 12:39 PM

ಬಿಸಿಸಿಐ ಮುಂದಿನ ಐದು ವರ್ಷಗಳ ಐಪಿಎಲ್​ಗಾಗಿ ಭರ್ಜರಿ ತಯಾರಿಯಲ್ಲಿದೆ. ಈಗಾಗಲೇ 2023 ರಿಂದ 2027ರವರೆಗಿನ ಐಪಿಎಲ್ ಮೀಡಿಯಾ ರೈಟ್ಸ್​ ಅನ್ನು ಬರೋಬ್ಬರಿ 48,390 ಕೋಟಿಗೆ ಮಾರಾಟ ಮಾಡಿದೆ. ಇತ್ತ ಐಪಿಎಲ್​ನಲ್ಲಿ ಹರಿದು ಬಂದಿರುವ ಕೋಟಿ ಆದಾಯ ನೋಡಿ ಎಲ್ಲಾ ಕ್ರಿಕೆಟ್​ ಮಂಡಳಿಗಳು ದಂಗಾಗಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಐಪಿಎಲ್ ಸೀಸನ್​ ಅನ್ನು ಎರಡೂವರೆ ತಿಂಗಳುಗಳ ಕಾಲ ನಡೆಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ. ಇದಕ್ಕಾಗಿ ಇತರೆ ಕ್ರಿಕೆಟ್ ಮಂಡಳಿ ಜೊತೆ ಕೂಡ ಮಾತುಕತೆ ನಡೆಸಲಿದ್ದು, ವಿದೇಶಿ ಆಟಗಾರರು ಸಂಪೂರ್ಣ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಎಲ್ಲಾ ಪ್ಲ್ಯಾನ್​ಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಆದರೆ ಇತ್ತ ಜಯ್ ಶಾ ಎರಡೂವರೆ ತಿಂಗಳು ಐಪಿಎಲ್​ ನಡೆಯಲಿದೆ ಎಂದು ಘೋಷಿಸುತ್ತಿದ್ದಂತೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಚಿಂತೆಗೀಡಾಗಿದೆ. ಏಕೆಂದರೆ ಐಪಿಎಲ್​ ಎರಡೂವರೆ ತಿಂಗಳು ನಡೆದರೆ ಪ್ರಮುಖ ದೇಶಗಳ ತಂಡಗಳು ಸರಣಿ ಆಡುವುದು ಅನುಮಾನ. ಏಕೆಂದರೆ ಐಪಿಎಲ್​ಗಾಗಿ ವಿಶೇಷ ಸಮಯವಕಾಶವನ್ನು ನೀಡಲು ಎಲ್ಲಾ ಕ್ರಿಕೆಟ್​ ಮಂಡಳಿಗಳು ಮುಂದಾಗುತ್ತಿದೆ. ಇನ್ನು ಸರಣಿ ಆಡಿದರೂ 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಲಿದೆ. ಇದರಿಂದ ತಮ್ಮ ಆದಾಯಕ್ಕೆ ಕುತ್ತು ಬರಲಿದೆ ಎಂಬ ಚಿಂತೆ ಪಾಕ್ ಕ್ರಿಕೆಟ್ ಮಂಡಳಿಗೆ ಶುರುವಾಗಿದೆ.

ಐಪಿಎಲ್‌ಗೆ ಸಂಬಂಧಿಸಿದಂತೆ ಜಯ್ ಶಾ ಅವರ ಹೇಳಿಕೆಯಿಂದ ಪಾಕ್ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಒಳಗಾಗುವುದು ಸ್ಪಷ್ಟ. ಏಕೆಂದರೆ ಐಪಿಎಲ್​ನಲ್ಲಿ ಪಾಕ್ ಆಟಗಾರರು ಕಾಣಿಸಿಕೊಳ್ಳುತ್ತಿಲ್ಲ. ಮತ್ತೊಂದೆಡೆ ವಿಶ್ವದ ಸ್ಟಾರ್ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸುತ್ತಾರೆ. ಒಂದು ವೇಳೆ ಎರಡೂವರೆ ತಿಂಗಳು ಐಪಿಎಲ್​ ನಡೆದರೆ, ಪಾಕಿಸ್ತಾನ್ ತಂಡಕ್ಕೆ ಪ್ರಮುಖ ಸರಣಿಗಳು ಕೈ ತಪ್ಪಬಹುದು. ಅಥವಾ ಬೇರೆ ಕ್ರಿಕೆಟ್ ಮಂಡಳಿಗಳು 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಬಹುದು. ಇದರಿಂದ ಪಾಕ್ ಸರಣಿಗಳ ಮೇಲೆ ಆಸಕ್ತಿ ಕಡಿಮೆಯಾಗಲಿದೆ.

ಇದನ್ನೂ ಓದಿ
Image
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Image
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಅಷ್ಟೇ ಅಲ್ಲದೆ ಪ್ರಮುಖ ಆಟಗಾರರು ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ದೀರ್ಘಾವಧಿಯ ಲೀಗ್ ಆಗಿರುವುದರಿಂದ ಐಪಿಎಲ್ ಮುಗಿಯುತ್ತಿದ್ದಂತೆ ಆಟಗಾರರು ತಮ್ಮ ರಾಷ್ಟ್ರ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಸ್ಟಾರ್ ಆಟಗಾರರು ಭಾಗವಹಿಸುವುದು ಕೂಡ ಅನುಮಾನ. ಇದೇ ಕಾರಣದಿಂದ ಬಿಸಿಸಿಐ ನಡೆಯನ್ನು ಪ್ರಶ್ನಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಜುಲೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪಾಕಿಸ್ತಾನವು ಈ ವಿಷಯವನ್ನು ಪ್ರಸ್ತಾಪಿಸುತ್ತದೆ. ಪ್ರಸ್ತುತ ಪಾಕಿಸ್ತಾನ ಮಂಡಳಿಯು ಬರುತ್ತಿರುವ ಆದಾಯದಿಂದ ಸಂತೋಷವಾಗಿದೆ. ಆದರೆ ಐಪಿಎಲ್‌ನ ಪ್ರತಿ ಸೀಸನ್‌ನ ಮೂಲಕ ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಕಟ್ಟಿಹಾಕಲು ಯೋಜಿಸುತ್ತಿದೆ. ಇದರಿಂದ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಡ್ಡಿಯಾಗಲಿದೆ. ಹೀಗಾಗಿ ಬಿಸಿಸಿಐ ನಡೆಯನ್ನು ಐಸಿಸಿ ಸಭೆಯಲ್ಲಿ ಪ್ರಶ್ನಿಸುವುದಾಗಿ ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ ವಿಶ್ವ ಮಟ್ಟದ ನಂಬರ್ 1 ಕ್ರಿಕೆಟ್ ಟೂರ್ನಿಯಾಗಿ ಮುನ್ನಡೆಯುತ್ತಿದ್ದಂತೆ ಅತ್ತ ಪಾಕಿಸ್ತಾನ್ ಕ್ರಿಕೆಟ್​ ಮಂಡಳಿಗೆ ಆದಾಯದ ಚಿಂತೆ ಶುರುವಾಗಿದೆ. ಅದರಲ್ಲೂ ಎರಡೂವರೆ ತಿಂಗಳು ಐಪಿಎಲ್​​ ನಡೆದರೆ ಸ್ಟಾರ್ ಆಟಗಾರರಿಲ್ಲದೆ ಪಾಕಿಸ್ತಾನ್ ಸೂಪರ್ ಲೀಗ್ ನೆಲಕಚ್ಚುವ ಭೀತಿ ಶುರುವಾಗಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?