Cricket News: ಧೋತಿ ಮತ್ತು ಕುರ್ತಾ ಧರಿಸಿ ಕ್ರಿಕೆಟ್​ ಪಂದ್ಯಾಟ ಜೊತೆಗೆ ಸಂಸ್ಕೃತ ಕಾಮೆಂಟರಿ

Cricket News: ಧೋತಿ ಮತ್ತು ಕುರ್ತಾ ಧರಿಸಿ ಕ್ರಿಕೆಟ್​ ಪಂದ್ಯಾಟ ಜೊತೆಗೆ ಸಂಸ್ಕೃತ ಕಾಮೆಂಟರಿ
Cricket Match

ಈ ಪಂದ್ಯದ ಕಾಮೆಂಟರಿ ಕೂಡ ಸಂಸ್ಕೃತದಲ್ಲಿ ಮಾಡಲಾಯಿತು. ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಈ ಪಂದ್ಯವನ್ನು ಆಯೋಜಿಸಲಾಗಿದೆ ಮತ್ತು ಹೆಚ್ಚು ಜನರು ಭಾಷೆಯನ್ನು ಕಲಿಯಬೇಕೆಂದು ಸಂಸ್ಥೆ ಬಯಸಿದೆ ಎಂದು ವೇದ ಪರಿವರ್​ನ ಆಟಗಾರರು ಹೇಳಿದ್ದಾರೆ.

TV9kannada Web Team

| Edited By: Vinay Bhat

Jan 18, 2022 | 9:52 AM

ಭೂಪಾಲ್​ನ ಅಂಕುರ್ ಮೈದಾನ ವಿಶೇಷ ಕ್ರಿಕೆಟ್  ಪಂದ್ಯಕ್ಕೆ (Cricket Match) ಸಾಕ್ಷಿಯಾಗಿದೆ. ಸದಾ ವೇದ ಪಾರಾಯಣ, ವಿದ್ಯಾಭ್ಯಾಸದಲ್ಲಿ ತೊಡಗಿರುತ್ತಿದ್ದ ಇಲ್ಲಿನ ಸಂಸ್ಕೃತ ಶಾಲೆಗಳ ವಿದ್ಯಾರ್ಥಿಗಳು ಕ್ರಿಕೆಟ್‌ ಬ್ಯಾಟ್‌, ಬಾಲ್‌ ಹಿಡಿದು ಮೈದಾನಕ್ಕಿಳಿದಿದ್ದರು. ವಿಶೇಷ ಎಂದರೆ ಆಟಗಾರರು ತಾವು ಶಾಲೆಗೆ ಧರಿಸುವ ಉಡುಪಿನಲ್ಲೇ ಕ್ರಿಕೆಟ್‌ ಅಂಗಳಕ್ಕೂ ಆಗಮಿಸಿದ್ದರು. ಧೋತಿ ಮತ್ತು ಕುರ್ತಾ ಧರಿಸಿ ಕ್ರಿಕೆಟ್ ಆಡಿದ್ದಾರೆ. ಅಷ್ಟೇ ಅಲ್ಲದೆ ಈ ಪಂದ್ಯದ ಕಾಮೆಂಟರಿ ಕೂಡ ಸಂಸ್ಕೃತದಲ್ಲಿ ಮಾಡಲಾಯಿತು. ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಈ ಪಂದ್ಯವನ್ನು ಆಯೋಜಿಸಲಾಗಿದೆ ಮತ್ತು ಹೆಚ್ಚು ಜನರು ಭಾಷೆಯನ್ನು ಕಲಿಯಬೇಕೆಂದು ಸಂಸ್ಥೆ ಬಯಸಿದೆ ಎಂದು ವೇದ ಪರಿವರ್​ನ ಆಟಗಾರರು ಹೇಳಿದ್ದಾರೆ.

ಈ ಪಂದ್ಯ ವೀಕ್ಷಿಸಲು ಅಲ್ಪ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪಂದ್ಯದ ಪ್ರತಿ ಎಸೆತಕ್ಕೂ ವೀಕ್ಷಕ ವಿವರಣೆ ನೀಡಲಾಗುತ್ತಿತ್ತು. ವೀಕ್ಷಕ ವಿವರಣೆ (ಕಾಮೆಂಟ್ರಿ)ಯನ್ನು ಸಂಸ್ಕೃತದಲ್ಲಿ ನೀಡಲಾಗುತ್ತಿತ್ತು. ವೀಕ್ಷಕ ವಿವರಣೆಗಾರರು, ಅಂಪೈರ್‌ಗಳು ಸಹ ಪಂಚೆ, ಜುಬ್ಬಾ ಧರಿಸಿದ್ದು ವಿಶೇಷ.

ಈ ಹಿಂದೆ ಕೂಡ ಇದೇ ಮಾದರಿಯ ಕ್ರಿಕೆಟ್ ಪಂದ್ಯಾಟ ನಡೆದಿತ್ತು. ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟ ಎಲ್ಲರ ಗಮನ ಸೆಳೆಸಿತ್ತು. ಆಟಗಾರರು ಪಂಚೆ, ಕುರ್ತಾ ಸಾಂಪ್ರದಾಯಿಕ ಉಡುಗೆ ಧರಿಸಿದ್ದರೆ, ಕ್ರಿಕೆಟ್ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಹೇಳಲಾಗುತ್ತಿತ್ತು. ವಿಶ್ವವಿದ್ಯಾಲಯದ 70ನೇ ವರ್ಷಾಚರಣೆಯ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಕ್ಯಾಂಪಸ್‌ನಲ್ಲಿ ನಡೆದ ಮ್ಯಾಚ್, ಜನರ ಮನಸ್ಸನ್ನು ಗೆದ್ದಿತು ಮಾತ್ರವಲ್ಲದೆ, ಸಂಸ್ಕೃತ ಕಾಮೆಂಟರಿಗೆ ಎಲ್ಲರ ಮೆಚ್ಚುಗೆ ದೊರೆಯಿತು. ಧೋತಿ, ಕುರ್ತಾ ಧರಿಸಿದ್ದರೂ, ಆಟಗಾರರು ಯಾವುದೇ ಸಮಸ್ಯೆಯಿಲ್ಲದೆ ಸುಸೂತ್ರವಾಗಿ ಕ್ರಿಕೆಟ್ ಆಟದಲ್ಲಿ ಪಾಲ್ಗೊಂಡಿದ್ದರು.

South Africa vs India: ಏಕದಿನ ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಗುಡ್ ನ್ಯೂಸ್: ಸ್ಟಾರ್ ಆಟಗಾರ ಕಮ್​ಬ್ಯಾಕ್

Beijing Winter Olympic: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌: ವೀಕ್ಷಕರಿಗಿಲ್ಲ ಅವಕಾಶ, ಟಿಕೆಟ್ ಮಾರಾಟ ನಿಷೇಧ

Follow us on

Related Stories

Most Read Stories

Click on your DTH Provider to Add TV9 Kannada