Beijing Winter Olympic: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌: ವೀಕ್ಷಕರಿಗಿಲ್ಲ ಅವಕಾಶ, ಟಿಕೆಟ್ ಮಾರಾಟ ನಿಷೇಧ

ಕೋವಿಡ್-19 ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಿಬ್ಬಂದಿಗಳು ಮತ್ತು ಆಟಗಾರರ ಸುರಕ್ಷತೆ ದೃಷ್ಟಿಯಿಂದಾಗಿ ಈ ನಿಯಮವನ್ನ ಜಾರಿಗೆ ತರಲಾಗಿದೆ.

Beijing Winter Olympic: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌: ವೀಕ್ಷಕರಿಗಿಲ್ಲ ಅವಕಾಶ, ಟಿಕೆಟ್ ಮಾರಾಟ ನಿಷೇಧ
Beijing Winter Olympics
Follow us
TV9 Web
| Updated By: Vinay Bhat

Updated on: Jan 18, 2022 | 9:27 AM

ಚೀನಾದ ಬೀಜಿಂಗ್​ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ (Beijing Winter Olympic) ಸಾರ್ವಜನಿಕವಾಗಿ ಟಿಕೆಟ್ ಮಾರಾಟವನ್ನು ನಿಷೇಧಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂಖ್ಯೆ ದಿನೇ ದಿನೇ ಏರುತ್ತಲೇ ಸಾಗಿದ್ದು, ನಿಯಮಗಳ ಅನ್ವಯ ಟಿಕೆಟ್‌ಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡುವುದನ್ನ ನಿಷೇಧಿಸಿದ್ದು, ಫೆಬ್ರವರಿ 4ರಿಂದ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರೀ ಹಿನ್ನಡೆಯಾಗಿದೆ. ಸಾರ್ವಜನಿಕವಾಗಿ ಟಿಕೆಟ್ ಮಾರಾಟ ಮಾಡುವುದರ ಜೊತೆಗೆ ಯಾವುದೇ ವಿದೇಶಿ ಪ್ರೇಕ್ಷಕರು ಒಲಿಂಪಿಕ್ಸ್ ನೋಡಲು ಸಾಧ್ಯವಿಲ್ಲ. ಈಗಾಗಲೇ ಕೋವಿಡ್-19 ಕಾರಣದಿಂದಾಗಿ ಚೀನಾ ತನ್ನ ಗಡಿಯನ್ನ ಬಂದ್ ಮಾಡಿದ್ದು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ನಿಷೇಧ ಹೇರಿದೆ ಎಂದು ಸಂಘಟಕರು ಹೇಳಿದ್ದಾರೆ.

ಇನ್ನು ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಪಡೆದಿರುವ ದೇಶೀಯ ವೀಕ್ಷಕರು ಕಠಿಣ ಕೋವಿಡ್-19 ನಿಯಮಗಳನ್ನ ಪಾಲಿಸಬೇಕಾಗುತ್ತದೆ ಎಂದು ಒಲಿಂಪಿಕ್ಸ್‌ ಕಮಿಟಿ ತಿಳಿಸಿದೆ. ಕೋವಿಡ್-19 ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಿಬ್ಬಂದಿಗಳು ಮತ್ತು ಆಟಗಾರರ ಸುರಕ್ಷತೆ ದೃಷ್ಟಿಯಿಂದಾಗಿ ಈ ನಿಯಮವನ್ನ ಜಾರಿಗೆ ತರಲಾಗಿದೆ.

ಸ್ಥಳೀಯ ಕೋವಿಡ್-19 ಸೋಂಕನ್ನು ನಿಗ್ರಹಿಸುವಲ್ಲಿ ಚೀನಾ ಬಹುಮಟ್ಟಿಗೆ ಯಶಸ್ವಿಯಾಗಿದ್ದು, ಕೇಸ್​ಗಳನ್ನ ನಿಯಂತ್ರಿಸುವಲ್ಲಿ ಸಫಲಗೊಂಡಿದೆ. ಒಲಿಂಪಿಕ್ಸ್‌ ಚೀನಾದ ರಾಜಧಾನಿಯಲ್ಲಿ ಸಂಪೂರ್ಣ ನಡೆಯಲಿದ್ದು, ಕ್ರೀಡಾಪಟುಗಳು ಮತ್ತು ಸಿಬ್ಬಂದಿ ವರ್ಗದವರನ್ನ ಬೇರೆ ಬೇರೆ ಮಾಡಲಿದೆ. ಕಳೆದ ತಿಂಗಳಷ್ಟೇ ಉತ್ತರ ಅಮೇರಿಕಾದ ರಾಷ್ಟ್ರೀಯ ಹಾಕಿ ತಂಡವು ಕೋವಿಡ್-19 ಕಾರಣದಿಂದಾಗಿ, ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

2020 ಮಾರ್ಚ್ ಬಳಿಕದ ಅತ್ಯಧಿಕ ಸೋಂಕು:

ಬೀಜಿಂಗ್​ನಲ್ಲಿ ಆಯೋಜಿಸಲಾಗಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಕೇವಲ 3 ವಾರಗಳಿರುವಂತೆಯೇ ಚೀನಾದಲ್ಲಿ ಕೊರೋನ ಸೋಂಕು ಪ್ರಕರಣ ಉಲ್ಬಣಿಸಿದ್ದು 2020ರ ಮಾರ್ಚ್ ಬಳಿಕದ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಸೋಮವಾರ ತಿಯಾಂಜಿನ್ ನಗರದಲ್ಲಿ 80, ಹೆನಾನ್ ಪ್ರಾಂತದಲ್ಲಿ 68, ಗ್ವಾಂಗ್‌ಡಾಂಗ್‌ನಲ್ಲಿ 9 ಪ್ರಕರಣ (ಇದರಲ್ಲಿ ಒಮೈಕ್ರಾನ್ ರೂಪಾಂತರಿ ಸೇರಿದೆ) ಸಹಿತ ಚೀನಾದಲ್ಲಿ ಸೋಮವಾರ 223 ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮಧ್ಯೆ, ಸೋಂಕು ಪ್ರಕರಣವನ್ನು ಶೂನ್ಯಮಟ್ಟಕ್ಕೆ ಇಳಿಸಲು ಕಟ್ಟುನಿಟ್ಟಿನ ನಿರ್ಭಂದ ಜಾರಿಗೊಳಿಸಿದ್ದರೂ ಬೀಜಿಂಗ್‌ನಲ್ಲಿ ಶನಿವಾರ ಒಮೈಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಈಗಾಗಲೇ ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಸ್ಥಳೀಯವಾಗಿ ಒಮೈಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿರುವುದರಿಂದ ಮತ್ತೆ ವಿಮಾನ ನಿಲ್ದಾಣದಲ್ಲಿ ಕಠಿಣ ನಿರ್ಬಂಧ ಕ್ರಮ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಬೀಜಿಂಗ್‌ನಲ್ಲಿ ಮನೆಯಿಂದ ಹೊರಹೋಗಬೇಕಿದ್ದರೆ ನೆಗೆಟಿವ್ ವರದಿ ಕಡ್ಡಾಯವಾಗಿದೆ. ನಗರ ಪ್ರವೇಶಿಸುವವರು ಕಡ್ಡಾಯವಾಗಿ ಸೋಂಕು ಪರೀಕ್ಷೆಗೆ ಒಳಪಡಬೇಕಿದೆ. ಬೀಜಿಂಗ್‌ನ ಕೆಲವು ಪ್ರವಾಸೀ ತಾಣಗಳನ್ನೂ ಮುಚ್ಚಲಾಗಿದೆ.

South Africa vs India: ಏಕದಿನ ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಗುಡ್ ನ್ಯೂಸ್: ಸ್ಟಾರ್ ಆಟಗಾರ ಕಮ್​ಬ್ಯಾಕ್

PKL 2021-22: ಆಡಿದ ಎಂಟನೇ ಪಂದ್ಯವೂ ಸೋತ ತೆಲುಗು ಟೈಟಾನ್ಸ್: ಪುಣೇರಿ ವಿರುದ್ಧ ಯುಪಿ ಯೋದ್ಧಾಗೆ ಗೆಲುವು

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ