AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL 2021-22: ಆಡಿದ ಎಂಟನೇ ಪಂದ್ಯವೂ ಸೋತ ತೆಲುಗು ಟೈಟಾನ್ಸ್: ಪುಣೇರಿ ವಿರುದ್ಧ ಯುಪಿ ಯೋದ್ಧಾಗೆ ಗೆಲುವು

Pro Kabaddi 2022 result: ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನಲ್ಲಿ ಇನ್ನೂ ಖಾತೆ ತೆರೆಯದೆ ತೆಲುಗು ಟೈಟಾನ್ಸ್ ತಂಡ ತನ್ನ ಸೋಲಿನ ಪಯಣವನ್ನು ಮುಂದುವರೆಸಿದೆ. ಸೋಮವಾರದ ಮುಖಾಮುಖಿಯಲ್ಲಿ ಅದು ಬೆಂಗಾಲ್‌ ವಾರಿಯರ್ ಕೈಯಲ್ಲಿ 27-28 ಅಂತರದ ಆಘಾತಕ್ಕೆ ಸಿಲುಕಿತು. ಮೊದಲ ಪಂದ್ಯದಲ್ಲಿ ಯುಪಿ ಯೋದ್ಧಾ 50-40 ರಿಂದ ಪುಣೇರಿಗೆ ಸೋಲುಣಿಸಿತು.

PKL 2021-22: ಆಡಿದ ಎಂಟನೇ ಪಂದ್ಯವೂ ಸೋತ ತೆಲುಗು ಟೈಟಾನ್ಸ್: ಪುಣೇರಿ ವಿರುದ್ಧ ಯುಪಿ ಯೋದ್ಧಾಗೆ ಗೆಲುವು
Telugu Titans
TV9 Web
| Updated By: Vinay Bhat|

Updated on: Jan 18, 2022 | 7:24 AM

Share

ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನಲ್ಲಿ (Pro Kabaddi League) ಇನ್ನೂ ಖಾತೆ ತೆರೆಯದೆ ತೆಲುಗು ಟೈಟಾನ್ಸ್ ತಂಡ ತನ್ನ ಸೋಲಿನ ಪಯಣವನ್ನು ಮುಂದುವರೆಸಿದೆ. ಸೋಮವಾರದ ಮುಖಾಮುಖಿಯಲ್ಲಿ ಅದು ಬೆಂಗಾಲ್‌ ವಾರಿಯರ್ ಕೈಯಲ್ಲಿ 27-28 ಅಂತರದ ಆಘಾತಕ್ಕೆ ಸಿಲುಕಿತು. ಇದು 10 ಪಂದ್ಯಗಳಲ್ಲಿ ಟೈಟಾನ್ಸ್‌ಗೆ ಎದುರಾದ 8ನೇ ಸೋಲು. ಉಳಿದೆರಡು ಪಂದ್ಯ ಡ್ರಾ ಆಗಿತ್ತು. ಬಿ ಸಿ ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡದ ಗೆಲುವಿನಲ್ಲಿ ಕ್ಯಾಪ್ಟನ್ ಮಣಿಂದರ್ ಸಿಂಗ್ ಮತ್ತೆ ಪ್ರಮುಖ ಪಾತ್ರ ವಹಿಸಿದರು. ಆದರೆ, ಅವರು 10 ಅಂಕಗಳನ್ನ ಗಳಿಸಲು 21 ರೇಡ್​ಗಳು ಬೇಕಾಯಿತು. ಇದು ಅವರ ಸತತ 9ನೇ ಸುಪರ್10 ರೇಡ್. ಕರ್ನಾಟಕದ ಸುಕೇಶ್ ಹೆಗ್ಡೆ 9 ರೇಡ್ ಮಾಡಿ 5 ಅಂಕ ಗಳಿಸಿದರು.

ತೆಲುಗು ಟೈಟಾನ್ಸ್ ಪರ ರೇಡರ್ ರಜನೀಶ್ 11 ಅಂಕ ಗಳಿಸಿ ಸೈ ಎನಿಸಿದರು. ಆದರೆ, ಟೂರ್ನಿಯಲ್ಲಿ ತಂಡಕ್ಕೆ ಚೊಚ್ಚಲ ಗೆಲುವು ತಂದುಕೊಡಬಲ್ಲ ಆಟ ಬರಲಿಲ್ಲ. ತೆಲುಗು ಟೈಟಾನ್ಸ್ ಈ ಸೀಸನ್​ನಲ್ಲಿ ಆಡಿರುವ 10 ಪಂದ್ಯಗಳಲ್ಲಿ ಒಂದೂ ಗೆಲುವು ಸಿಕ್ಕಿಲ್ಲ.

ಇತ್ತಂಡಗಳ ನಡುವೆ ನಡೆದ ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಧ್ಯಂತರಕ್ಕೆ ತೆಲುಗು ಟೈಟನ್ಸ್ 13 ಅಂಕ ಗಳಿಸಿದರೆ ಬೆಂಗಾಲ್ ವಾರಿಯರ್ಸ್ 14 ಅಂಕಗಳನ್ನು ಪಡೆದುಕೊಂಡು 1 ಅಂಕದ ಮುನ್ನಡೆಯನ್ನು ಸಾಧಿಸಿತ್ತು. ದ್ವಿತೀಯಾರ್ಧದ ಐದನೇ ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡದ ರಜನೀಶ್ ಮಾಡಿದ 3 ಅಂಕಗಳ ರೈಟ್ ತಂಡಕ್ಕೆ 4 ಅಂಕಗಳ ಮುನ್ನಡೆಯನ್ನು ತಂದುಕೊಟ್ಟಿತ್ತು. ಹೀಗೆ ಮುನ್ನಡೆಯನ್ನು ಸಾಧಿಸಿದ್ದ ತೆಲುಗು ಟೈಟಾನ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡ ಕಟ್ಟಿ ಹಾಕಿತು. ಪಂದ್ಯ ಮುಕ್ತಾಯವಾಗುವುದಕ್ಕೆ 2 ನಿಮಿಷಗಳು ಬಾಕಿ ಇದ್ದಾಗ ತೆಲುಗು ಟೈಟಾನ್ಸ್ ತಂಡದ ರಜನೀಶ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡದ ರಣ್ ಸಿಂಗ್ ಟ್ಯಾಕಲ್ ಮಾಡಿದರು. ಈ ಮೂಲಕ ತೆಲುಗು ಟೈಟಾನ್ಸ್ ಆಲ್ ಔಟ್ ಆಗಿ ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕದ ಸೋಲನ್ನು ಅನುಭವಿಸಿತು.

ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋದ್ಧಾ 50-40 ರಿಂದ ಪುಣೇರಿಗೆ ಸೋಲುಣಿಸಿತು. ಸುರೇಂದರ್ ಗಿಲ್ ಮತ್ತು ಪ್ರದೀಪ್ ನರ್ವಾಲ್ ಮಿಂಚಿದರು. ಇಬ್ಬರೂ ಕ್ರಮವಾಗಿ 21 ಮತ್ತು 10 ಪಾಯಿಂಟ್ ಕಲೆ ಹಾಕಿದರು. ಪುಣೇರಿ ಪಲ್ಟನ್‌ ತಂಡಕ್ಕಾಗಿ ಅಸ್ಲಾಂ ಇನಾಮದಾರ್ ಮತ್ತು ಮೋಹಿತ್ ಗೋಯತ್ ಸೂಪರ್ ಟೆನ್ ಸಾಧನೆ ಮಾಡಿದರು. ಆದರೆ ಟ್ಯಾಕ್ಲಿಂಗ್‌ನಲ್ಲಿ ಆದ ವೈಫಲ್ಯಗಳಿಂದಾಗಿ ತಂಡ ಸೋಲಿನ ಬಲೆಯಲ್ಲಿ ಸಿಲುಕಿತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳೂ ಧಾರಾಳ ಪಾಯಿಂಟ್‌ಗಳನ್ನು ಕಲೆ ಹಾಕಿದವು. ಮೂರು ಪಾಯಿಂಟ್‌ಗಳೊಂದಿಗೆ ಪ್ರದೀಪ್ ನರ್ವಾಲ್‌ ಮೊದಲ ರೇಡ್‌ನಲ್ಲೇ ಮಿಂಚಿದರು. ಅಸ್ಲಾಂ ಮತ್ತು ಮೋಹಿತ್‌ ಅವರ ಸಾಧನೆಯಿಂದಾಗಿ ಯುಪಿ ಯೋದ್ಧಾ ಆಲೌಟಾಯಿತು. ಮೊದಲಾರ್ಧ 20-20ರಲ್ಲಿ ಸಮ ಆಯಿತು. ಆದರೆ ದ್ವಿತೀಯಾರ್ಧದಲ್ಲಿ ಯೋದ್ಧಾ ಭರ್ಜರಿ ಆಟವಾಡಿ 30 ಪಾಯಿಂಟ್ ಕಲೆ ಹಾಕಿತು. ಯುಪಿ ಯೋದ್ಧಾ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದೆ. ಪುಣೇರಿ ಪಲ್ಟನ್ 10ನೇ ಸ್ಥಾನದಲ್ಲಿ ಮುಂದುವರಿದಿದೆ.

IPL 2022: ಹರಾಜಿಗೂ ಮುನ್ನ ಅಹಮದಾಬಾದ್ ತಂಡ ಸೇರಲಿದ್ದಾರೆ ಕೆಕೆಆರ್​ನ ಸ್ಟಾರ್ ಬ್ಯಾಟರ್! ಯಾರು ಗೊತ್ತಾ?

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ