Shreyas Iyer: ಧೋನಿ ಶೈಲಿಯಲ್ಲಿ ಶ್ರೇಯಸ್ ಅಯ್ಯರ್ ಗೆಲುವಿನ ಸಿಕ್ಸ್ ಬಾರಿಸಿದಾಗ ಪ್ರೀತಿ ಝಿಂಟಾ ಏನು ಮಾಡಿದ್ರು ನೋಡಿ
PBKS vs MI, IPL 2025: ಶ್ರೇಯಸ್ ಅಯ್ಯರ್ ಥೇಟ್ ಎಂಎಸ್ ಧೋನಿ ಸ್ಟೈಲ್ನಲ್ಲಿ ಸಿಕ್ಸ್ ಸಿಡಿಸಿ ಪಂಜಾಬ್ ತಂಡ ಮುಂಬೈ ವಿರುದ್ಧ ಗೆದ್ದಾಗ, ತಂಡದ ಮಾಲಕಿ ಪ್ರೀತಿ ಝಿಂಟಾ ತುಂಬಾ ಖುಷಿ ಪಟ್ಟಿರುವುದು ಕಂಡುಬಂತು. ಪ್ರೀತಿ ತಮ್ಮ ತಂಡದ ಗೆಲುವನ್ನು ಸ್ಟ್ಯಾಂಡ್‌ನಲ್ಲಿ ಆಚರಿಸುತ್ತಿರುವ ವಿಡಿಯೋ ಕೂಡ ಹೊರಬಂದಿದೆ.

ಬೆಂಗಳೂರು (ಮೇ. 27): ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier LEague) 69 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವು ಪಂಜಾಬ್‌ಗೆ ಅಗ್ರ 2 ಸ್ಥಾನ ಪ್ರವೇಶಿಸಲು ಬಹಳ ಮುಖ್ಯವಾಗಿತ್ತು. ಶ್ರೇಯಸ್ ಅಯ್ಯರ್ ಪಡೆ ಈಗ ಅಗ್ರ 2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅವರು ಪ್ರಸ್ತುತ 14 ಪಂದ್ಯಗಳಲ್ಲಿ 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸದ್ಯ ಮೇ 29 ರಂದು, ಪಂಜಾಬ್ ಕಿಂಗ್ಸ್ ತಂಡವು ಮುಲ್ಲನ್‌ಪುರದಲ್ಲಿ ಗುಜರಾತ್ ಟೈಟಾನ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ. ಪಂಜಾಬ್ ತಂಡ ಮುಂಬೈ ವಿರುದ್ಧ ಗೆದ್ದಾಗ, ತಂಡದ ಮಾಲಕಿ ಪ್ರೀತಿ ಝಿಂಟಾ ತುಂಬಾ ಖುಷಿ ಪಟ್ಟಿರುವುದು ಕಂಡುಬಂತು. ಪ್ರೀತಿ ತಮ್ಮ ತಂಡದ ಗೆಲುವನ್ನು ಸ್ಟ್ಯಾಂಡ್‌ನಲ್ಲಿ ಆಚರಿಸುತ್ತಿರುವ ವಿಡಿಯೋ ಕೂಡ ಹೊರಬಂದಿದೆ.
ಶ್ರೇಯಸ್ ಅಯ್ಯರ್ ಗೆಲುವಿನ ಸಿಕ್ಸ್ ಕಂಡು ಕುಣಿದುಕುಪ್ಪಳಿಸಿದ ಪ್ರೀತಿ ಝಿಂಟಾ
ಎಂಎಸ್ ಧೋನಿಯಂತೆಯೇ ನಾಯಕ ಶ್ರೇಯಸ್ ಅಯ್ಯರ್ ಕೂಡ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಗೆಲುವಿನ ಸಿಕ್ಸರ್ ಬಾರಿಸಿ ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಅಯ್ಯರ್ ಕೂಡ ಸಿಕ್ಸರ್ ಬಾರಿಸುವ ಮೂಲಕ ಸಂಭ್ರಮಿಸಲು ಪ್ರಾರಂಭಿಸಿದರು. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪ್ರೀತಿ ಝಿಂಟಾ ಕುಣಿದು ಸಂಭ್ರಮಿಸಿದ್ದು ಕಂಡುಬಂತು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Sealing a Q1 spot in style 🤌
Captain Shreyas Iyer adds the finishing flair as #PBKS defeat #MI in Jaipur ❤
Scorecard ▶ https://t.co/Dsw52HOtga#TATAIPL | #PBKSvMI | @PunjabKingsIPL pic.twitter.com/x93pqi4hxn
— IndianPremierLeague (@IPL) May 26, 2025
ಪಂದ್ಯ ಹೀಗಿತ್ತು
ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್ ಗಳಿಸಿ ಪಂಜಾಬ್‌ಗೆ 185 ರನ್‌ಗಳ ಗುರಿಯನ್ನು ನೀಡಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಅತಿ ಹೆಚ್ಚು 57 ರನ್ ಗಳಿಸಿದರು. ಪಿಬಿಕೆಎಸ್ ಪರ ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ಮತ್ತು ವಿಶ್ಯಕ್ ವಿಜಯ್ ಕುಮಾರ್ ತಲಾ 2 ವಿಕೆಟ್ ಪಡೆದರು. ಹರ್‌ಪ್ರೀತ್ ಬ್ರಾರ್ ಕೂಡ 1 ವಿಕೆಟ್ ಪಡೆದರು.
LSG vs RCB Pitch Report: ಲಕ್ನೋ-ಆರ್ಸಿಬಿ ಹೈವೋಲ್ಟೇಜ್ ಪಂದ್ಯಕ್ಕೆ ಪಿಚ್ ಹೇಗೆದೆ?, ಯಾರಿಗೆ ಸಹಕಾರಿ?
ಪಂಜಾಬ್ ಕಿಂಗ್ಸ್ 18.3 ಓವರ್‌ಗಳಲ್ಲಿ 7 ವಿಕೆಟ್‌ಗಳು ಬಾಕಿ ಇರುವಾಗಲೇ 185 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಈ ರನ್ ಚೇಸ್‌ನಲ್ಲಿ ಜೋಶ್ ಇಂಗ್ಲಿಸ್ ಮತ್ತು ಪ್ರಿಯಾಂಶ್ ಆರ್ಯ ಪ್ರಮುಖ ಪಾತ್ರ ವಹಿಸಿದರು. ಇಂಗ್ಲಿಸ್ 42 ಎಸೆತಗಳಲ್ಲಿ 73 ರನ್ ಗಳಿಸಿದರೆ, ಆರ್ಯ 35 ಎಸೆತಗಳಲ್ಲಿ 62 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 26 ರನ್ ಗಳಿಸಿ ಅಜೇಯರಾಗುಳಿದರು. ಮುಂಬೈ ಪರ ಮಿಚೆಲ್ ಸ್ಯಾಂಟ್ನರ್ ಗರಿಷ್ಠ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಕೂಡ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




