SA20: ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿ ಕಳಪೆ ದಾಖಲೆ ಬರೆದ ಕ್ಯಾಪಿಟಲ್ಸ್​

T20 Records: ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ದಾಖಲೆ ಇರುವುದು ಐಲ್ ಆಫ್ ಮ್ಯಾನ್ ತಂಡದ ಹೆಸರಿನಲ್ಲಿದೆ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಐಲ್ ಆಫ್ ಮ್ಯಾನ್ ತಂಡವು ಕೇವಲ 10 ರನ್​ಗಳಿಗೆ ಆಲೌಟ್ ಆಗಿತ್ತು. ಇದು ಟಿ20 ಕ್ರಿಕೆಟ್​ನಲ್ಲಿ ತಂಡವೊಂದು ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್. ಇನ್ನು ಐಪಿಎಲ್​ನಲ್ಲಿ ಕೆಕೆಆರ್ ವಿರುದ್ಧ ಆರ್​ಸಿಬಿ ತಂಡವು ಕೇವಲ 49 ರನ್​ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ನಿರ್ಮಿಸಿದೆ.

SA20: ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿ ಕಳಪೆ ದಾಖಲೆ ಬರೆದ ಕ್ಯಾಪಿಟಲ್ಸ್​
SEC vs PC
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 23, 2024 | 10:41 AM

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಕೇವಲ 52 ರನ್​ಗಳಿಗೆ ಆಲೌಟ್ ಆಗುವ ಮೂಲಕ ಪ್ರಿಟೋರಿಯಾ ಕ್ಯಾಪಿಟಲ್ಸ್ (Pretoria Capitals)  ತಂಡವು ಅತ್ಯಂತ ಕಳಪೆ ದಾಖಲೆ ಬರೆದಿದೆ. ಗೆಬ್ಬಗಾದ ಸೇಂಟ್ ಜಾರ್ಜ್​ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾದ ಫಿಲ್ ಸಾಲ್ಟ್ (10) ಹಾಗೂ ವಿಲ್ ಜಾಕ್ಸ್ (12) ಎರಡಂಕಿ ಮೊತ್ತಗಳಿಸಿ ಔಟಾದರೆ, ಆ ಬಳಿಕ ಬಂದವರೆಲ್ಲಾ ಒಂದಂಕಿ ಮೊತ್ತದೊಂದಿಗೆ ಹಿಂತಿರುಗಿದ್ದರು. ಕೈಲ್ ವೆರ್ರೆನ್ನೆ 8 ರನ್​ಗಳಿಸಿದರೆ, ರಿಲೀ ರೊಸ್ಸೊವ್ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಕಾಲಿನ್ ಇನ್​ಗ್ರಾಮ್ (1) ಹಾಗೂ ಜಿಮ್ಮಿ ನೀಶಮ್ (2) ಬಂದ ವೇಗದಲ್ಲೇ ಹಿಂತಿರುಗಿದ್ದರು. ಇದರ ನಡುವೆ ನಾಯಕ ವೇಯ್ನ್ ಪಾರ್ನೆಲ್ 9 ರನ್​ಗಳಿಸಿದ್ದು ಗರಿಷ್ಠ ಸ್ಕೋರ್ ಎನಿಸಿತು.

ಅಂತಿಮವಾಗಿ 13.3 ಓವರ್​ಗಳಲ್ಲಿ 52 ರನ್​ಗಳಿಗೆ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಆಲೌಟ್ ಆಯಿತು. ಇತ್ತ ಮಾರಕ ದಾಳಿ ಸಂಘಟಿಸಿದ ಒಟ್ನಿಯೆಲ್ ಬಾರ್ಟ್‌ಮ್ಯಾನ್ 3.3 ಓವರ್​ಗಳಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಡೇನಿಯಲ್ ವೊರಾಲ್ 4 ಓವರ್​ಗಳಲ್ಲಿ 22 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು 53 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 6.5 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಪ್ರಿಟೋರಿಯಾ ಕ್ಯಾಪಿಟಲ್ಸ್ ಹೆಸರಿಗೆ ಕಳಪೆ ದಾಖಲೆ:

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆಯೊಂದು ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪಾಲಾಗಿದೆ. ಈ ಹಿಂದೆ ಈ ದಾಖಲೆ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಹೆಸರಿನಲ್ಲಿತ್ತು.

2023 ರಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡವು ಕೇವಲ 80 ರನ್​ಗಳಿಗೆ ಆಲೌಟ್ ಆಗಿದ್ದು ಇದುವರೆಗಿನ ಕಳಪೆ ದಾಖಲೆಯಾಗಿತ್ತು. ಇದೀಗ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡದ ವಿರುದ್ಧ ಕೇವಲ 52 ರನ್​ಗಳಿಗೆ ಮುಗ್ಗರಿಸುವ ಮೂಲಕ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು SA20 ಲೀಗ್​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎನಿಸಿಕೊಂಡಿದೆ.

ಪ್ರಿಟೋರಿಯಾ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್) , ವಿಲ್ ಜಾಕ್ಸ್ , ಕೈಲ್ ವೆರೆನ್ನೆ , ರಿಲೀ ರೊಸೊವ್ , ಕಾಲಿನ್ ಇನ್​ಗ್ರಾಮ್ , ಜೇಮ್ಸ್ ನೀಶಮ್ , ಸೆನುರಾನ್ ಮುತ್ತುಸಾಮಿ , ವೇಯ್ನ್ ಪಾರ್ನೆಲ್ (ನಾಯಕ) , ಈಥನ್ ಬಾಷ್ , ಆದಿಲ್ ರಶೀದ್ , ಡೇರಿನ್ ಡುಪಾವಿಲ್ಲನ್.

ಇದನ್ನೂ ಓದಿ: VIDEO: ಅಯೋಧ್ಯೆಯಲ್ಲಿ ಡುಪ್ಲಿಕೇಟ್ ವಿರಾಟ್ ಕೊಹ್ಲಿ: ಮುಗಿಬಿದ್ದ ಫ್ಯಾನ್ಸ್​..!

ಸನ್​ರೈಸರ್ಸ್ ಈಸ್ಟರ್ಕ್​ ಕೇಪ್ ಪ್ಲೇಯಿಂಗ್ 11: ಜೋರ್ಡಾನ್ ಹರ್ಮನ್ , ಡೇವಿಡ್ ಮಲನ್ , ಟಾಮ್ ಅಬೆಲ್ , ಐಡೆನ್ ಮಾರ್ಕ್ರಾಮ್ (ಸಿ) ಟ್ರಿಸ್ಟಾನ್ ಸ್ಟಬ್ಸ್ (ವಾಕ್) , ಪ್ಯಾಟ್ರಿಕ್ ಕ್ರುಗರ್ , ಮಾರ್ಕೊ ಜಾನ್ಸೆನ್ , ಲಿಯಾಮ್ ಡಾಸನ್ , ಸೈಮನ್ ಹಾರ್ಮರ್ , ಒಟ್ನಿಯೆಲ್ ಬಾರ್ಟ್ಮನ್ , ಡೇನಿಯಲ್ ವೊರಾಲ್.